IND vs WI: ಭರ್ಜರಿ ಶತಕ ಸಿಡಿಸಿ ಎಂಎಸ್ ಧೋನಿ ದಾಖಲೆ ಮುರಿದ ಶೇಯ್ ಹೋಪ್!
ಭಾರತ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ವೆಸ್ಟ್ ಇಂಡೀಸ್ ತಂಡದ ನಾಯಕಶೇಯ್ ಹೋಪ್ ತಮ್ಮಒಡಿಐ ವೃತ್ತಿ ಜೀವನದ 20ನೇ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಭಾರತದ ಮಾಜಿ ನಾಯಕ ಎಂಎಸ್ ಧೋನಿಯ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಎಂಎಸ್ ಧೋನಿಯ ವಿಶ್ವ ದಾಖಲೆ ಮುರಿದ ಶೇಯ್ ಹೋಪ್. -
ಗುವಾಹಟಿ: ಇಲ್ಲಿನ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತದ ವಿರದ್ಧ ಎರಡನೇ ಏಕದಿನ ಪಂದ್ಯದಲ್ಲಿ (IND vs WI) ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ವೆಸ್ಟ್ ಇಂಡೀಸ್ ನಾಯಕ ಶೇಯ್ ಹೋಪ್ (Shai Hope) ತಮ್ಮ ಒಡಿಐ ವೃತ್ತಿ ಜೀವನದ 20ನೇ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ನಾಯಕ ಹಾಗೂ ವಿಕೆಟ್ ಕೀಪರ್ ಆಗಿ ಭಾರತದ ಮಾಜಿ ನಾಯಕ ಎಂಎಸ್ ಧೋನಿಯ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಶೇಯ್ ಹೋಪ್ ಜೊತೆಗೆ ಜಾನ್ ಕ್ಯಾಂಬೆಲ್ ಹಾಗೂ ಆಮಿರ್ ಜಂಗೋ ಅವರ ಶತಕಗಳ ಬಲದಿಂದ ವಿಂಡೀಸ್ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 405 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 406 ರನ್‌ಗಳ ಕಠಿಣ ಗುರಿಯನ್ನು ನೀಡಿತು.
ಅದ್ಭುತವಾಗಿ ಬ್ಯಾಟ್ ಮಾಡಿದ ಶೇಯ್ ಹೋಪ್, 94 ಎಸೆತಗಳಲ್ಲಿ 104 ರನ್‌ಗಳನ್ನು ಕಲೆ ಹಾಕಿದರು. ಇದರಲ್ಲಿ ಅವರು ಮೂರು ಸಿಕ್ಸರ್ ಹಾಗೂ 8 ಬೌಂಡರಿಗಳನ್ನು ಬಾರಿಸಿದರು. ಶತಕದ ಜತೆಗೆ ಜಾನ್ ಕ್ಯಾಂಬೆಲ್ ಜೊತೆಗೆ 110 ರನ್‌ಗಳ ಜೊತೆಯಾಟ ಹಾಗೂ ಆಮಿರ್ ಜಂಗೋ ಅವರೊಂದಿಗೆ 182 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಆಮಿರ್ ಹಾಗೂ ಕ್ಯಾಂಬೆಲ್ ಕೂಡ ಭರ್ಜರಿ ಶತಕಗಳನ್ನು ಸಿಡಿಸಿದ್ದಾರೆ.
IND vs WI: 200 ಒಡಿಐ ವಿಕೆಟ್‌ಗಳನ್ನು ಕಿತ್ತು ವಿಶೇಷ ದಾಖಲೆ ಬರೆದ ಕುಲ್ದೀಪ್ ಯಾದವ್!
ಬ್ರಿಯಾನ್ ಲಾರಾ ದಾಖಲೆ ಮುರಿದ ಶೇಯ್ ಹೋಪ್
ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ವೆಸ್ಟ್ ಇಂಡೀಸ್‌ನ ಎರಡನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಶೇಯ್ ಹೋಪ್ ಬರೆದಿದ್ದಾರೆ. ಅವರು 20ನೇ ಶತಕವನ್ನು ಬಾರಿಸಿದ್ದು, 19ಶತಕಗಳನ್ನು ಗಳಿಸಿದ್ದ ಬ್ರಿಯಾನ್ ಲಾರಾ ಅವರನ್ನು ಹಿಂದಿಕ್ಕಿದ್ದಾರೆ. ಕ್ರಿಸ್ ಗೇಲ್ ಅವರು 25 ಶತಕಗಳ ಮೂಲಕ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
The Master at Work. 🏏💯
— Windies Cricket (@windiescricket) September 30, 2026
ODI century no.2️⃣0️⃣ for Shai Hope. ✨🔥#INDvWI | #MenInMaroon pic.twitter.com/dWMhkvv2yT
ವೆಸ್ಟ್ ಇಂಡೀಸ್ ಪರ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟರ್ಸ್
ಕ್ರಿಸ್ ಗೇಲ್: 25 ಶತಕಗಳು
ಶೇಯ್ ಹೋಪ್: 20 ಶತಕಗಳು
ಬ್ರಿಯಾನ್ ಲಾರಾ: 19 ಶತಕಗಳು
ದೆಸ್ಮಂಡ್ ಹೇಯ್ನ್ಸ್: 17 ಶತಕಗಳು
ಎಂಎಸ್ ಧೋನಿಯ ವಿಶ್ವದಾಖಲೆ ಮುರಿದ ಶೇಯ್ ಹೋಪ್
ವೆಸ್ಟ್ ಇಂಡೀಸ್ ತಂಡದ ನಾಯಕನಾಗಿ ಶೇಯ್ ಹೋಪ್ ಪಾಲಿಗೆ ಇದು 7ನೇ ಶತಕವಾಗಿದೆ. ಅತಿ ಹೆಚ್ಚು ಶತಕಗಳನ್ನು ಗಳಿಸಿದ ನಾಯಕ ಹಾಗೂ ವಿಕೆಟ್ ಕೀಪರ್ ಎಂಬ ವಿಶ್ವ ದಾಖಲೆಯನ್ನು ಶೇಯ್ ಹೋಪ್ ಬರೆದಿದ್ದಾರೆ. ಆ ಮೂಲಕ ಎಂಎಸ್ ಧೋನಿಯನ್ನು ಹಿಂದಿಕ್ಕಿದ್ದಾರೆ. ನಾಯಕ ಹಾಗೂ ವಿಕೆಟ್ ಕೀಪರ್ ಆಗಿ ಎಂಎಸ್ ಧೋನಿ 6 ಶತಕಗಳನ್ನು ಗಳಿಸಿದ್ದರೆ, ಶೇಯ್ ಹೋಪ್ 7 ಶತಕಗಳನ್ನು ಬಾರಿಸಿದ್ದಾರೆ.
IND vs WI: ಭಾರತದ ಎದುರು ಎರಡನೇ ಒಡಿಐನಲ್ಲಿ ಶತಕ ಬಾರಿಸಿದ ಜಾನ್ ಕ್ಯಾಂಬೆಲ್ ಯಾರು?
ಒಡಿಐನಲ್ಲಿ ನಾಯಕ ಹಾಗೂ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ಶತಕ ಸಿಡಿಸಿದವರು
ಶೇಯ್ ಹೋಪ್ (ವೆಸ್ಟ್ ಇಂಡೀಸ್): 7
ಎಂಎಸ್ ಧೋನಿ (ಭಾರತ): 6
ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ) : 4
ಟಾಮ್ ಲೇಥ್ (ನ್ಯೂಜಿಲೆಂಡ್): 2
ಮೊನಕ್ ಪಟೇಲ್ (ಜಿಂಬಾಬ್ವೆ): 2
ಬ್ರೆಂಡನ್ ಟೇಲ್ (ಜಿಂಬಾಬ್ವೆ) : 2