ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 3rd Test: ತವರಿನಲ್ಲಿ ಟೆಸ್ಟ್‌ ದಾಖಲೆ ಬರೆದ ಜೋ ರೂಟ್‌

Joe Root: ಮೊದಲ ದಿನದಾಟದ ಅಂತ್ಯಕ್ಕೆ 99 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿರುವ ರೂಟ್‌, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತವರು ನೆಲದಲ್ಲಿ 7000 ರನ್ ಪೂರೈಸಿದ ವಿಶ್ವದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ಮಹೇಲಾ ಜಯವರ್ಧನೆ ಮತ್ತು ಜಾಕ್‌ ಕಾಲಿಸ್ ಅವರಂತಹ ಆಟಗಾರರ ಸಾಲಿಗೆ ಸೇರಿದರು.

ತವರಿನಲ್ಲಿ ಟೆಸ್ಟ್‌ ದಾಖಲೆ ಬರೆದ ಜೋ ರೂಟ್‌

Profile Abhilash BC Jul 11, 2025 12:29 PM

ಲಂಡನ್‌: ಇಂಗ್ಲೆಂಡ್‌ ತಂಡದ ಅನುಭವಿ ಆಟಗಾರ ಜೋ ರೂಟ್‌(Joe Root) ಅವರು ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ(IND vs ENG 3rd Test) ಅಮೋಘ ಬ್ಯಾಟಿಂಗ್‌ ನಡೆಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ 3,000 ರನ್‌ (60 ಇನಿಂಗ್ಸ್‌) ಗಡಿ ದಾಟಿದ ಮೊದಲ ಆಟಗಾರ ಎಂಬ ದಾಖಲೆ ಮಾತ್ರವದಲ್ಲದೆ ಮತ್ತೊಂದು ಮೈಲುಗಲ್ಲು ಕೂಡ ನಿರ್ಮಿಸಿದ್ದಾರೆ.

ಮೊದಲ ದಿನದಾಟದ ಅಂತ್ಯಕ್ಕೆ 99 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿರುವ ರೂಟ್‌, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತವರು ನೆಲದಲ್ಲಿ 7000 ರನ್ ಪೂರೈಸಿದ ವಿಶ್ವದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ಮಹೇಲಾ ಜಯವರ್ಧನೆ ಮತ್ತು ಜಾಕ್‌ ಕಾಲಿಸ್ ಅವರಂತಹ ಆಟಗಾರರ ಸಾಲಿಗೆ ಸೇರಿದರು.

ಜೋ ರೂಟ್ ಅವರು ದ್ವಿತೀಯ ದಿನದಾಟದಂದು ಒಂದು ರನ್‌ ಗಳಿಸಿದರೆ, ತಮ್ಮ 37 ನೇ ಅಂತಾರಾಷ್ಟ್ರೀಯ ಶತಕ ಪೂರ್ತಿಗೊಳಿಸಲಿದ್ದಾರೆ. ನಾಯಕ ಬೆನ್ ಸ್ಟೋಕ್ಸ್ ಇನ್ನೊಂದು ತುದಿಯಲ್ಲಿ 102 ಎಸೆತಗಳಲ್ಲಿ 39 ರನ್ ಗಳಿಸಿ ಅಜೇಯರಾಗಿ ಉಳಿದ್ದಾರೆ.

ತವರು ನೆಲದಲ್ಲಿ 7000+ ಟೆಸ್ಟ್ ರನ್ ಗಳಿಸಿದ ಆಟಗಾರರು

ರಿಕಿ ಪಾಂಟಿಂಗ್: 7,578 ರನ್‌ಗಳು

ಸಚಿನ್ ತೆಂಡೂಲ್ಕರ್: 7,216 ರನ್‌ಗಳು

ಮಹೇಲಾ ಜಯವರ್ಧನೆ: 7,167 ರನ್‌ಗಳು

ಜಾಕ್‌ ಕಾಲಿಸ್: 7,035 ರನ್‌ಗಳು

ಜೋ ರೂಟ್: 7000* ರನ್‌ಗಳು

ಮೊದಲ ದಿನದಂದು ಭಾರತ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ನೀಡಿತು. ನಿತೀಶ್ ಕುಮಾರ್ ರೆಡ್ಡಿ ಎರಡು ವಿಕೆಟ್ ಪಡೆದರು, ಜಸ್‌ಪ್ರೀತ್‌ ಬುಮ್ರಾ ಮತ್ತು ರವೀಂದ್ರ ಜಡೇಜಾ ಕೂಡ ತಲಾ ಒಂದು ವಿಕೆಟ್ ಪಡೆದರು. ಎರಡನೇ ದಿನದಾಟದಲ್ಲಿಯೂ ಪ್ರವಾಸಿ ತಂಡ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದು, ಇಂಗ್ಲೆಂಡ್‌ನ ಉಳಿದ ಬ್ಯಾಟ್ಸ್‌ಮನ್‌ಗಳನ್ನು ಸಾಧ್ಯವಾದಷ್ಟು ಕಡಿಮೆ ಮೊತ್ತಕ್ಕೆ ಸೀಮಿತಗೊಳಿಸುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ IND vs ENG 3rd Test: ನಿತೀಶ್‌ ರೆಡ್ಡಿಗೆ ತೆಲುಗಿನಲ್ಲೇ ಪ್ರಶಂಸೆ ವ್ಯಕ್ತಪಡಿಸಿದ ಶುಭಮನ್‌ ಗಿಲ್‌; ವಿಡಿಯೊ ವೈರಲ್‌