ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sher-E-Punjab T20 League: ಅಭಿಷೇಕ್‌ ಶರ್ಮಾಗೆ ಎರಡು ಸಿಕ್ಸರ್‌, ಒಂದು ಬೌಂಡರಿ ಬಾರಿಸಿದ ಶುಭಮನ್‌ ಗಿಲ್!

ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಬಾಲ್ಯದಿಂದಲೇ ಒಟ್ಟಿಗೆ ಬೆಳೆದವರು. ಇಬ್ಬರೂ ಜೊತೆಯಾಗಿಯೇ ಕ್ರಿಕೆಟ್‌ಗೆ ಕಾಲಿಟ್ಟರು. ಇದೀಗ ವಿಶ್ವ ಕ್ರಿಕೆಟ್‌ನಲ್ಲಿ ಇಬ್ಬರೂ ಒಟ್ಟಿಗೇ ಸೂಪರ್‌ಸ್ಟಾರ್‌ಗಳಾಗಿ ಹೊರಹೊಮ್ಮಿದ್ದಾರೆ. ಆದರೆ, ಇದೀಗ ಶೇರ್‌-ಇ-ಪಂಜಾಬ್‌ ಟಿ20 ಲೀಗ್‌ ಟೂರ್ನಿಯಲ್ಲಿ ಇವರಿಬ್ಬರೂ ಪರಸ್ಪರ ವಿರುದ್ಧವಾಗಿ ಆಡುತ್ತಿದ್ದಾರೆ.

ಅಭಿಷೇಕ್‌ ಶರ್ಮಾ ಓವರ್‌ನಲ್ಲಿ ಶುಭಮನ್‌ ಗಿಲ್‌ ಅಬ್ಬರದ ಬ್ಯಾಟಿಂಗ್‌!

ಅಭಿಷೇಕ್‌ ಶರ್ಮಾಗೆ ಬೆವರಿಳಿಸಿದ ಶುಭಮನ್‌ ಗಿಲ್‌. -

Profile
Ramesh Kote Sep 7, 2026 11:26 PM

ಮೊಹಾಲಿ: ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ (Abhishek Sharma) ಬಾಲ್ಯದಿಂದಲೇ ಒಟ್ಟಿಗೆ ಬೆಳೆದವರು. ಇಬ್ಬರೂ ಜೊತೆಯಾಗಿಯೇ ಕ್ರಿಕೆಟ್‌ನ ಆರಂಭಿಕ ಪಾಠಗಳನ್ನು ಕಲಿತವರು. ಇದೀಗ ವಿಶ್ವ ಕ್ರಿಕೆಟ್‌ನಲ್ಲಿ ಇಬ್ಬರೂ ಸೂಪರ್‌ಸ್ಟಾರ್‌ಗಳಾಗಿ ಹೊರಹೊಮ್ಮಿದ್ದಾರೆ. ಸದ್ಯ ಶುಭಮನ್ ಗಿಲ್ (Shubman Gill) ಭಾರತ ಟೆಸ್ಟ್ ಮತ್ತು ಏಕದಿನ ತಂಡದ ನಾಯಕರಾಗಿದ್ದರೆ, ಅಭಿಷೇಕ್ ಶರ್ಮಾ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇಬ್ಬರೂ ಪಂಜಾಬ್ ತಂಡದ ಪರ ಒಟ್ಟಿಗೆ ಆಡಿದ್ದು, ಭಾರತ ತಂಡದ ಹಲವು ಸರಣಿಗಳಲ್ಲೂ ಒಂದೇ ತಂಡದ ಭಾಗವಾಗಿದ್ದಾರೆ.

ಆದರೆ ಸೋಮವಾರ ನಡೆದ ಪಂದ್ಯದಲ್ಲಿ ಈ ಸ್ನೇಹಿತರು ಎದುರಾಳಿಗಳಾಗಿ ಕಣಕ್ಕಿಳಿದರು. ಮೊಹಾಲಿಯಲ್ಲಿ ನಡೆದ ಶೇರ್-ಎ-ಪಂಜಾಬ್ ಟಿ20 ಲೀಗ್ ಪಂದ್ಯದಲ್ಲಿ ಶುಭಮನ್ ಗಿಲ್ ಫಜಿಲ್ಕಾ ಫಾಲ್ಕನ್ಸ್ ತಂಡವನ್ನು ಪ್ರತಿನಿಧಿಸಿದರೆ, ಅಭಿಷೇಕ್ ಶರ್ಮಾ ಅಮೃತಸರ ಸೂರ್ಮಾಸ್ ಪರ ಆಡಿದರು. ಟಾಸ್ ಗೆದ್ದು ಮೊದಲು ಬ್ಯಾಟ್‌ ಮಾಡಿದ ಫಜಿಲ್ಕಾ ಫಾಲ್ಕನ್ಸ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 191 ರನ್ ಗಳಿಸಿತು. ತಂಡದ ಪರ ಗಿಲ್ ಅತ್ಯಧಿಕ ರನ್ ಗಳಿಸಿದರು. ಅವರು ಕೇವಲ 35 ಎಸೆತಗಳಲ್ಲಿ 67 ರನ್ ಸಿಡಿಸಿ, 8 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು.

Duleep Trophy Final: ಇಶಾನ್‌ ಕಿಶನ್‌ ದಾಖಲೆಯ ದ್ವಿಶತಕ, ಬೃಹತ್‌ ಮೊತ್ತ ಕಲೆಹಾಕಿದ ಪೂರ್ವ ವಲಯ!

ಅಭಿಷೇಕ್ ಓವರ್‌ನಲ್ಲಿ ಶುಭಮನ್‌ ಗಿಲ್ ಅಬ್ಬರ

ಶುಭಮನ್‌ ಗಿಲ್ ಅವರ ಈ ಸ್ಫೋಟಕ ಇನಿಂಗ್ಸ್‌ 10ನೇ ಓವರ್‌ನಲ್ಲಿ ಅಂತ್ಯಗೊಂಡಿತು. ಅಭಿಷೇಕ್ ಶರ್ಮಾ ಎಸೆದ ಆ ಓವರ್‌ನ ಮೊದಲ ಎಸೆತದಲ್ಲೇ ಗಿಲ್ ನೇರವಾಗಿ ಮೈದಾನದ ಮಧ್ಯಭಾಗದತ್ತ ಭರ್ಜರಿ ಸಿಕ್ಸರ್ ಸಿಡಿಸಿದರು. ಮೂರನೇ ಎಸೆತದಲ್ಲಿ ಗಿಲ್ ಡೀಪ್ ಮಿಡ್‌ವಿಕೆಟ್ ಮೂಲಕ ಬೌಂಡರಿ ಬಾರಿಸಿದರೆ, ಐದನೇ ಎಸೆತದಲ್ಲೂ ಮತ್ತೊಂದು ಸಿಕ್ಸರ್ ಸಿಡಿಸಿದರು.

ಆದರೆ ಓವರ್‌ನ ಕೊನೆಯ ಎಸೆತದಲ್ಲಿ ಅಭಿಷೇಕ್ ಶರ್ಮಾ ಕೊನೆಗೂ ಗಿಲ್ ವಿರುದ್ಧ ಮೇಲುಗೈ ಸಾಧಿಸಿದರು. ದೊಡ್ಡ ಹೊಡೆತಕ್ಕೆ ಮುಂದಾದ ಗಿಲ್ ಅವರನ್ನು ನಮನ್ ಧೀರ್ ಕ್ಯಾಚ್ ಪಡೆದು ಪೆವಿಲಿಯನ್‌ಗೆ ಕಳುಹಿಸಿದರು. ಹೀಗಾಗಿ ಒಂದೇ ಓವರ್‌ನಲ್ಲಿ ಗಿಲ್ ಮೂರು ಬೌಂಡರಿ-ಸಿಕ್ಸರ್‌ಗಳ ಮೂಲಕ ಅಭಿಷೇಕ್ ಮೇಲೆ ಅಬ್ಬರಿಸಿದರೂ, ಕೊನೆಯ ಎಸೆತದಲ್ಲಿ ವಿಕೆಟ್ ಪಡೆಯುವ ಮೂಲಕ ಅಭಿಷೇಕ್ ಅಂತಿಮ ನಗುವನ್ನು ಬೀರಿದರು.

ಅಭಿಷೇಕ್ ಶರ್ಮಾ ಕೂಡ ಸ್ಫೋಟಕ ಬ್ಯಾಟಿಂಗ್

ಬಳಿಕ ಗುರಿ ಬೆನ್ನಟ್ಟಿದ ಅಮೃತಸರ ಸೂರ್ಮಾಸ್ ತಂಡಕ್ಕೆ ಅಭಿಷೇಕ್ ಶರ್ಮಾ ಸ್ಫೋಟಕ ಆರಂಭ ಒದಗಿಸಿದರು. ಅವರು ಕೇವಲ 15 ಎಸೆತಗಳಲ್ಲಿ 49 ರನ್ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್‌ಗಳು ಸೇರಿದ್ದವು. ಇತ್ತೀಚೆಗೆ ನಡೆದಿದ್ದ ಶೇರ್-ಎ-ಪಂಜಾಬ್ ಟಿ20 ಲೀಗ್ ಪಂದ್ಯದಲ್ಲೂ ಶುಭಮನ್ ಗಿಲ್ ಬ್ಯಾಟ್‌ನಿಂದ ಅಬ್ಬರಿಸಿದ್ದರು. ಅವರು ಕೇವಲ 21 ಎಸೆತಗಳಲ್ಲಿ 40 ರನ್ ಗಳಿಸಿ, 7 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದ್ದರು. ಗಿಲ್ ಪ್ರತಿನಿಧಿಸುತ್ತಿದ್ದ ಫಜಿಲ್ಕಾ ಫಾಲ್ಕನ್ಸ್ ತಂಡವು ಅರ್ಶದೀಪ್ ಸಿಂಗ್ ನಾಯಕತ್ವದ ಲುಧಿಯಾನಾ ಲಯನ್ಸ್ ತಂಡವನ್ನು ಕೇವಲ 1 ರನ್‌ನಿಂದ ಸೋಲಿಸಿತ್ತು.

ಮೊದಲ ಪಂದ್ಯದಲ್ಲೇ ಗಿಲ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ

ಈ ಋತುವಿನಲ್ಲಿ ಫಾಲ್ಕನ್ಸ್ ಪರ ತಮ್ಮ ಮೊದಲ ಪಂದ್ಯವನ್ನಾಡಿದ ಭಾರತದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಗಿಲ್, ಇನ್ನಿಂಗ್ಸ್‌ಗೆ ಸ್ಫೋಟಕ ಆರಂಭ ಒದಗಿಸಿದ್ದರು. ಆದರೆ ಫಾಲ್ಕನ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 170 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಗುರಿ ಬೆನ್ನಟ್ಟಿದ ಲುಧಿಯಾನಾ ಲಯನ್ಸ್ ತಂಡವನ್ನು ಫಾಲ್ಕನ್ಸ್ ಬೌಲರ್‌ಗಳು ನಿಯಂತ್ರಿಸಿದರು. ಲಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 169 ರನ್ ಗಳಿಸಿ, ಕೇವಲ 1 ರನ್‌ನಿಂದ ಪಂದ್ಯ ಸೋತಿತು.