ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: 40 ಎಸೆತಗಳಲ್ಲಿ ಸ್ಪೋಟಕ ಶತಕ ವಿಶೇಷ ದಾಖಲೆ ಬರೆದ ಅಭಿಷೇಕ್‌ ಶರ್ಮಾ!

Abhishek Sharma hits 5th Fastest Hundred in IPL: ಪಂಜಾಬ್‌ ಕಿಂಗ್ಸ್‌ ವಿರುದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆರಂಭಿಕ ಅಭಿಷೇಕ್‌ ಶರ್ಮಾ ಸ್ಪೋಟಕ ಬ್ಯಾಟ್‌ ಮಾಡಿದ ಚೊಚ್ಚಲ ಶತಕವನ್ನು ಸಿಡಿಸಿದ್ದಾರೆ. ಕೇವಲ 40 ಎಸೆತಗಳಲ್ಲಿ ಅಭಿಷೇಕ್‌ ಶರ್ಮಾ ಐಪಿಎಲ್‌ ಟೂರ್ನಿಯ ಐದನೇ ವೇಗದ ಶತಕವನ್ನು ಸಿಡಿಸಿದ್ದಾರೆ.

IPL 2025: 40 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಅಭಿಷೇಕ್‌ ಶರ್ಮಾ!

40 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿದ ಅಭಿಷೇಕ್‌ ಶರ್ಮಾ.

Profile Ramesh Kote Apr 12, 2025 11:40 PM

ಹೈದರಾಬಾದ್: ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Suriser Hyderabad) ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್ ಶರ್ಮಾ (Abhishek Sharma) ಸ್ಪೋಟಕ ಶತಕ ಸಿಡಿಸಿದ್ದಾರೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 27ನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 40 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಎಡಗೈ ಬ್ಯಾಟ್ಸ್‌ಮನ್‌ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಚೊಚ್ಚಲ ಶತಕವನ್ನು ಸಿಡಿಸಿದ್ದಾರೆ. ಅಲ್ಲದೆ ಐಪಿಎಲ್‌ ಇತಿಹಾಸದಲ್ಲಿ ಐದನೇ ವೇಗದ ಶತಕವನ್ನು ಸಿಡಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯಲ್ಲಿ ಅಭಿಷೇಕ್‌ ಶರ್ಮಾ ಬರೆದಿದ್ದಾರೆ.

ಶನಿವಾರ ಇಲ್ಲಿನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ ನೀಡಿದ್ದ 246 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಸನ್‌ರೈಸರ್ಸ್‌ ಪರ ಇನಿಂಗ್ಸ್‌ ಆರಂಭಿಸಿದ್ದ ಅಭಿಷೇಕ್‌ ಶರ್ಮಾ ಸ್ಪೋಟಕ ಬ್ಯಾಟ್‌ ಮಾಡಿದ್ದರು. ಹಲವು ಬಾರಿ ಸಿಕ್ಕಿದ್ದ ಜೀವ ದಾನವನ್ನು ಸದುಪಯೋಗಪಡಿಸಿಕೊಂಡ ಅಭಿಷೇಕ್‌ ಶರ್ಮಾ, 55 ಎಸೆತಗಳಲ್ಲಿ 10 ಸಿಕ್ಸರ್‌ ಹಾಗೂ 14 ಬೌಂಡರಿಗಳೊಂದಿಗೆ 141 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಸನ್‌ರೈರ್ಸ್‌ ಹೈದರಾಬಾದ್‌ ತಂಡದ 8 ವಿಕೆಟ್‌ಗಳ ಗೆಲುವಿನ ನೆರವು ನೀಡಿದ್ದರು.

IPL 2025: 120 ರನ್‌ ಜೊತೆಯಾಟವಾಡಿ ವಿಶೇಷ ದಾಖಲೆ ಬರೆದ ಶುಭಮನ್‌ ಗಿಲ್‌-ಸಾಯಿ ಸುದರ್ಶನ್‌!

ಐದನೇ ವೇಗದ ಶತಕ ಬಾರಿಸಿದ ಅಭಿಷೇಕ್ ಶರ್ಮಾ

ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯ ಕಳೆದ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಅಭಿಷೇಕ್‌ ಶರ್ಮಾ, ಕೇವಲ 40 ಎಸೆತಗಳಲ್ಲಿ ತಮ್ಮ ಚೊಚ್ಚಲ ಐಪಿಎಲ್‌ ಶತಕವನ್ನು ಸಿಡಿಸಿದ್ದರು. ಅಲ್ಲದೆ ಐಪಿಎಲ ಇತಿಹಾಸದಲ್ಲಿಯೇ ಐದನೇ ವೇಗದ ಶತಕವನ್ನು ಪೂರ್ಣಗೊಳಿಸಿದರು. ಅಲ್ಲದೆ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಎರಡನೇ ವೇಗದ ಶತಕವನ್ನು ಎಡಗೈ ಬ್ಯಾಟ್ಸ್‌ಮನ್‌ ಸಿಡಿಸಿದ್ದಾರೆ. ಕಳೆದ ವರ್ಷ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಟ್ರಾವಿಸಾ ಹೆಡ್‌ 39 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು. ಇದು ಎಸ್‌ಆರ್‌ಎಚ್‌ ಪರ ಮೂಡಿ ಬಂದ ಅತ್ಯಂತ ವೇಗದ ಶತಕವಾಗಿದೆ. ಒಟ್ಟಾರೆಯಾಗಿ ಐಪಿಎಲ್‌ ಟೂರ್ನಿಯಲ್ಲಿ ವೇಗದ ಶತಕ ಸಿಡಿಸಿದ ದಾಖಲೆ ವೆಸ್ಟ್‌ ಇಂಡೀಸ್‌ ದಿಗ್ಗಜ ಕ್ರಿಸ್‌ ಗೇಲ್‌ ಹೆಸರಿನಲ್ಲಿದೆ. ಆರ್‌ಸಿಬಿ ಮಾಜಿ ಬ್ಯಾಟ್ಸ್‌ಮನ್‌, ಪುಣೆ ವಾರಿಯರ್ಸ್‌ ವಿರುದ್ಧ 2013ರಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು.



ಐಪಿಎಲ್‌ ಇತಿಹಾಸದಲ್ಲಿ ಮೂಡಿ ಬಂದ ವೇಗದ ಶತಕಗಳು

  1. ಕ್ರಿಸ್ ಗೇಲ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು - ಪುಣೆ ವಾರಿಯರ್ಸ್ vs 30 ಎಸೆತಗಳು - 2013
  2. ಯೂಸಫ್ ಪಠಾಣ್ (ರಾಜಸ್ಥಾನ್ ರಾಯಲ್ಸ್) - ಮುಂಬೈ ಇಂಡಿಯನ್ಸ್ vs 37 ಎಸೆತಗಳು - 2010
  3. ಡೇವಿಡ್ ಮಿಲ್ಲರ್ (ಪಂಜಾಬ್ ಕಿಂಗ್ಸ್) - ರಾಯಲ್ ಚಾಲೆಂಜರ್ಸ್ ಬೆಂಗಳೂರು vs 38 ಎಸೆತಗಳು - 2013
  4. ಟ್ರಾವಿಸ್ ಹೆಡ್ (ಸನ್‌ರೈಸರ್ಸ್ ಹೈದರಾಬಾದ್) - ರಾಯಲ್ ಚಾಲೆಂಜರ್ಸ್ ಬೆಂಗಳೂರು vs 39 ಎಸೆತಗಳು - 2024
  5. ಪ್ರಿಯಾಂಶ್ ಆರ್ಯ (ಪಂಜಾಬ್ ಕಿಂಗ್ಸ್ - ಚೆನ್ನೈ ಸೂಪರ್ ಕಿಂಗ್ಸ್ vs 39 ಎಸೆತಗಳು - 2025
  6. ಅಭಿಷೇಕ್ ಶರ್ಮಾ (ಸನ್‌ರೈಸರ್ಸ್ ಹೈದರಾಬಾದ್) - ಪಂಜಾಬ್ ಕಿಂಗ್ಸ್ vs 40 ಎಸೆತಗಳು - 2025



ಸನ್‌ರೈಸರ್ಸ್‌ ಹೈದರಾಬಾದ್‌ಗೆ 8 ವಿಕೆಟ್‌ ಭರ್ಜರಿ ಜಯ

ಕಳೆದ್‌ ಐದು ಪಂದ್ಯಗಳಲ್ಲಿ ಫಾರ್ಮ್‌ಗೆ ಮರಳಲು ಅಭಿಷೇಕ್‌ ಶರ್ಮಾ ಪರದಾಟ ನಡೆಸುತ್ತಿದ್ದರು. ಇದೀಗ ತಮ್ಮ ಆರನೇ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಸ್ಪೋಟಕ ಫಾರ್ಮ್‌ಗೆ ಮರಳಿದ್ದಾರೆ. 141 ರನ್‌ಗಳನ್ನು ಗಳಿಸುವ ಜೊತೆಗೆ ತಮ್ಮ ಆರಂಭಿಕ ಜೊತೆಗಾರ ಟ್ರಾವಿಸ್‌ ಹೆಡ್‌ ಜೊತೆ ಮುರಿಯದ ಮೊದಲನೇ ವಿಕೆಟ್‌ಗೆ 171 ರನ್‌ಗಳನ್ನು ದಾಖಲಿಸಿದ್ದರು. ಟ್ರಾವಿಸ್‌ ಹೆಡ್‌ ಸ್ಪೋಟಕ ಬ್ಯಾಟ್‌ ಮಾಡಿ 37 ಎಸೆತಗಳಲ್ಲಿ 66 ರನ್‌ಗಳನ್ನು ಸಿಡಿಸಿ ವಿಕೆಟ್‌ ಒಪ್ಪಿಸಿದ್ದರು.

ಅಂತಿಮವಾಗಿ ಈ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ, 18.3 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 247 ರನ್‌ ಗಳಿಸಿ 8 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಅಭಿಷೇಕ್‌ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.