ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ಬೌಲಿಂಗ್‌ ವೈಫಲ್ಯ ಅನುಭವಿಸುತ್ತಿರುವ ವರುಣ್‌ ಚಕ್ರವರ್ತಿ ಬಗ್ಗೆ ವೀರೇಂದ್ರ ಸೆಹ್ವಾಗ್‌ ದೊಡ್ಡ ಹೇಳಿಕೆ!

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಕೊನೆಯ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತ ತಂಡದ ಸ್ಪಿನ್ನರ್‌ ವರುಣ್‌ ಚಕ್ರವರ್ತಿಯನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಬೆಂಬಲ ವ್ಯಕ್ಯಪಡಿಸಿದ್ದಾರೆ. ವೈಫಲ್ಯದ ಹೊರತಾಗಿಯೂ ವರುಣ್‌ಗೆ ಬೆಂಬಲ ನೀಡಬೇಕೆಂದು ಹೇಳಿದ್ದಾರೆ.

ಔಟ್‌ ಆಫ್‌ ಫಾರ್ಮ್‌ ವರುಣ್‌ ಚಕ್ರವರ್ತಿ ಬಗ್ಗೆ ಸೆಹ್ವಾಗ್‌ ಪ್ರತಿಕ್ರಿಯೆ!

ವರುಣ್‌ ಚಕ್ರವರ್ತಿಗೆ ಬೆಂಬಲ ವ್ಯಕ್ತಪಡಿಸಿದ ವೀರೇಂದ್ರ ಸೆಹ್ವಾಗ್‌. -

Profile
Ramesh Kote Mar 6, 2026 6:49 PM

ನವದೆಹಲಿ: ಸತತ ವೈಫಲ್ಯದ ಹೊರತಾಗಿಯೂ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾಗೆ( Abhishek Sharma) ಬೆಂಬಲ ವ್ಯಕ್ತಪಡಿಸುವುದಾದರೆ, ಸ್ಪಿನ್ನರ್‌ ವರುಣ್‌ ಚಕ್ರವರ್ತಿ (Varun Chakravarthy) ಅವರನ್ನು ಕೂಡ ಟೀಮ್‌ ಮ್ಯಾನೇಜ್‌ಮೆಂಟ್‌ ಬೆಂಬಲ ನೀಡಬೇಕೆಂದು ಟೀಮ್‌ ಇಂಡಿಯಾ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್‌ (Virender Sehwag) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ವರುಣ್‌ ಅತ್ಯಂತ ದುಬಾರಿಯಾದರು. ಈ ಹಿನ್ನೆಲೆಯಲ್ಲಿ ಅವರು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಹಾಗಾಗಿ ಸೆಹ್ವಾಗ್‌ ಸ್ಪಿನ್ನರ್‌ಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಆರಂಭಿಕ ನಾಲ್ಕು ಪಂದ್ಯಗಳಲ್ಲಿ ವರುಣ್‌ ಚಕ್ರವರ್ತಿ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಸೂಪರ್‌-8ರ ಹಂತದ ಪಂದ್ಯಗಳಿಂದ ವರುಣ್‌ ತಮ್ಮ ಪರಿಣಾಮಕಾರಿಯಾಗುವಲ್ಲಿ ವಿಫಲರಾದರು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ವರುಣ್‌ ಚಕ್ರವರ್ತು 64 ರನ್‌ಗಳನ್ನು ನೀಡುವ ಮೂಲಕ ಅತ್ಯಂತ ದುಬಾರಿಯಾದರು. ಆ ಮೂಲಕ ಕಳೆದ ನಾಲ್ಕು ಪಂದ್ಯಗಳಿಂದ ಅವರು 186 ರನ್‌ಗಳನ್ನು ನೀಡಿದ್ದಾರೆ. ಈ ಟೂರ್ನಿಯಲ್ಲಿ ಅಭಿಷೇಕ್‌ ಶರ್ಮಾ ಕೂಡ ವಿಫಲರಾಗಿದ್ದಾರೆ. ಅವರು ಈ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಿಂದ ಗಳಿಸಿರುವುದು ಕೇವಲ 89 ರನ್‌ಗಳು ಮಾತ್ರ.

T20 World Cup: ಸಂಜು ಸ್ಯಾಮ್ಸನ್‌ ಬ್ಯಾಟಿಂಗ್‌ ಸಕ್ಸಸ್‌ಗೆ ಪ್ರಮುಖ ಕಾರಣ ತಿಳಿಸಿದ ರವಿ ಶಾಸ್ತ್ರಿ!

ವರುಣ್‌ ಚಕ್ರವರ್ತಿಗೂ ಬೆಂಬಲ ಅಗತ್ಯ

ಅಭಿಷೇಕ್ ಶರ್ಮಾ ತಮ್ಮ ಇತ್ತೀಚಿನ ಐದರಿಂದ ಆರು ಇನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಿದ್ದಾರೆ ಎಂಬುದನ್ನು ಸೆಹ್ವಾಗ್ ಉಲ್ಲೇಖಿಸಿದರು. ಆದರೂ ಅವರಿಗೆ ಸಾಕಷ್ಟು ಬೆಂಬಲ ನೀಡಲಾಗುತ್ತಿದೆ ಎಂದು ಭಾರತೀಯ ದಿಗ್ಗಜ ಅಭಿಪ್ರಾಯಪಟ್ಟರು. ವರುಣ್‌ಗೆ ಬದಲಿಗೆ ಬರುವ ಬೌಲರ್ ಹೆಚ್ಚು ಉತ್ತಮವಾಗಿ ಆಡುತ್ತಾರೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ ಎಂದು ಕೂಡ ಅವರು ಹೇಳಿದರು.

“ಅಭಿಷೇಕ್ ಶರ್ಮಾ ಕೂಡ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹಾಗಿದ್ದರೂ ನೀವು ಅವರಿಗೆ ಬೆಂಬಲ ನೀಡುತ್ತಿದ್ದರೆ, ಬೌಲರ್‌ಗೆ ಬೆಂಬಲ ನೀಡುವುದರಲ್ಲಿ ಏನು ಸಮಸ್ಯೆ? ಟೀಕೆ ಮಾಡುವುದು ಜನರ ಕೆಲಸ. ಕಳೆದ 5-6 ಇನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಿದ ಬ್ಯಾಟರ್‌ನ್ನು ನೀವು ಆಡಿಸುತ್ತಿದ್ದರೆ, ಇನ್ನೊಂದು ಕಡೆ ಬೌಲರ್‌ಗೆ ಕಳೆದ ಮೂರು ಪಂದ್ಯಗಳಲ್ಲಿ ರನ್ ಕೊಟ್ಟಿದ್ದೀರಿ ಎಂದು ಹೇಳಿ ಹೊಸ ಬೌಲರ್ ಹುಡುಕುತ್ತೇವೆ ಎಂದು ಹೇಳುವುದರಲ್ಲಿ ಅರ್ಥವೇನು? ಬದಲಿ ಬರುವ ಬೌಲರ್ ಉತ್ತಮವಾಗಿ ಆಡುತ್ತಾರೆ ಎಂಬುದಕ್ಕೆ ಯಾವ ಖಾತರಿ ಇದೆ?” ಎಂದು ಸೆಹ್ವಾಗ್ ಕ್ರಿಕ್‌ಬಜ್‌ನಲ್ಲಿ ಮಾತನಾಡುತ್ತ ಪ್ರಶ್ನೆ ಮಾಡಿದರು.

ಫೈನಲ್‌ನಲ್ಲಿ ಭಾರತಕ್ಕೆ ಕಿವೀಸ್‌ ಸವಾಲು ಸುಲಭವಲ್ಲ; ದಾಖಲೆ ಹೀಗಿದೆ

ಕೋಲ್ಕತಾ, ಮುಂಬೈ ಪಿಚ್‌ಗಳು ಫ್ಲಾಟ್‌ ಆಗಿದ್ದವು: ವೀರು

ಮುಂದುವರಿದು ಮಾತನಾಡಿದ ಸೆಹ್ವಾಗ್, ವರುಣ್ ಚಕ್ರವರ್ತಿಯನ್ನು ಸಮರ್ಥಿಸಿಕೊಂಡು, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯಗಳ ವೇಳೆ ಕೊಲ್ಕತ್ತಾ ಹಾಗೂ ಮುಂಬೈ ಮೈದಾನಗಳ ಪಿಚ್‌ಗಳು ಬಹಳ ಸಮತಟ್ಟಾಗಿದ್ದವು ಎಂದು ಹೇಳಿದರು. ಆ ಪರಿಸ್ಥಿತಿಯಲ್ಲೂ ವಿಕೆಟ್ ಪಡೆಯುವುದು ಗಮನಾರ್ಹವೆಂದು ಅವರು ಅಭಿಪ್ರಾಯಪಟ್ಟರು.

“ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ವಿರುದ್ಧ ಅವರು (ಚಕ್ರವರ್ತಿ) ಹೊಡೆತಕ್ಕೆ ಒಳಗಾದರೂ, ಆ ಪಂದ್ಯಗಳ ಪಿಚ್‌ಗಳು ಬಹಳ ಫ್ಲಾಟ್ ಆಗಿದ್ದವು. ಆದರೂ ಕನಿಷ್ಠ ಅವರು ಒಂದು ವಿಕೆಟ್ ಪಡೆದಿದ್ದಾರೆ. ಕೆಲ ಬೌಲರ್‌ಗಳು ರನ್‌ಗಳನ್ನು ಮಾತ್ರ ನೀಡುತ್ತಾರೆ, ಆದರೆ ವಿಕೆಟ್ ಪಡೆಯುವುದೇ ಇಲ್ಲ,” ಎಂದು ಸೆಹ್ವಾಗ್ ಹೇಳಿದರು.

ಫಾರ್ಮ್ ಸ್ವಲ್ಪ ಕುಸಿದಿದ್ದರೂ, ವರುಣ್ ಚಕ್ರವರ್ತಿ ಈ ಟೂರ್ನಿಯಲ್ಲಿ 8 ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಪಡೆದು ಒಟ್ಟಾರೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.