ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: 120 ರನ್‌ ಜೊತೆಯಾಟವಾಡಿ ವಿಶೇಷ ದಾಖಲೆ ಬರೆದ ಶುಭಮನ್‌ ಗಿಲ್‌-ಸಾಯಿ ಸುದರ್ಶನ್‌!

GT vs LSG Match: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಮೊದಲನೇ ವಿಕೆಟ್‌ಗೆ 120 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಗುಜರಾತ್‌ ಟೈಟನ್ಸ್‌ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶುಭಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್‌ ಐಪಿಎಲ್‌ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಗುಜರಾತ್‌ ಪರ 5 ಬಾರಿ 100ಕ್ಕೂ ಅಧಿಕ ರನ್‌ ಜೊತೆಯಾಟವನ್ನು ಆಡಿದ ಜೋಡಿ ಎಂಬ ಕೀರ್ತಿಗೆ ಗಿಲ್‌-ಸುದರ್ಶನ್‌ ಭಾಜನರಾಗಿದ್ದಾರೆ.

120 ರನ್‌ ಜೊತೆಯಾಟವಾಡಿ ವಿಶೇಷ ದಾಖಲೆ ಬರೆದ ಗಿಲ್‌-ಸುದರ್ಶನ್‌!

ದಾಖಲೆ ಜೊತೆಯಾಟವಾಡಿದ ಶುಭಮನ್‌ ಗಿಲ್‌-ಸಾಯಿ ಕಿಶೋರ್‌.

Profile Ramesh Kote Apr 12, 2025 10:31 PM

ಲಖನೌ: ಲಖನೌ ಸೂಪರ್‌ ಜಯಂಟ್ಸ್‌ (Lucknow Super Giants) ವಿರುದ್ಧದ ಪಂದ್ಯದಲ್ಲಿ ತಲಾ ಅರ್ಧಶತಕಗಳನ್ನು ಸಿಡಿಸಿದ ಶುಭಮನ್‌ ಗಿಲ್‌ (Shubman Gill) ಹಾಗೂ ಸಾಯಿ ಸುದರ್ಶನ್‌ (Sai Sudarshan) ಅವರು ಮುರಿಯದ ಮೊದಲನೇ ವಿಕೆಟ್‌ಗೆ 120 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಈ ಜೋಡಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಇತಿಹಾಸದಲ್ಲಿ ಗುಜರಾತ್‌ ಟೈಟನ್ಸ್‌ ಪರ ವಿಶೇಷ ದಾಖಲೆಯನ್ನು ಬರೆದಿದೆ. ಈ ಇಬ್ಬರ ಸ್ಪೋಟಕ ಬ್ಯಾಟಿಂಗ್‌ ಹೊರತಾಗಿಯೂ ಗುಜರಾತ್‌ ಟೈಟನ್ಸ್‌ ತಂಡ 6 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಈ ಸೋಲಿನ ಮೂಲಕ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ಈ ಟೂರ್ನಿಯಲ್ಲಿ ಎರಡನೇ ಸೋಲು ಅನುಭವಿಸಿತು ಹಾಗೂ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಇಳಿಯಿತು.

ಇಲ್ಲಿನ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಗುಜರಾತ್‌ ಟೈಟನ್ಸ್‌ ಪರ ಇನಿಂಗ್ಸ್‌ ಆರಂಭಿಸಿದ ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ ಸ್ಪೋಟಕ ಬ್ಯಾಟ್‌ ಮಾಡಿದ್ದರು. ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ ಮೊದಲನೇ ವಿಕೆಟ್‌ಗೆ 73 ಎಸೆತಗಳಲ್ಲಿ 120 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಮೊದಲನೇ ವಿಕೆಟ್‌ಗೆ ಮೂಡಿಬಂದ ಮೊದಲ ಶತಕದ ಜೊತೆಯಾಟ ಇದಾಯಿತು. ಐಪಿಎಲ್‌ ಇತಿಹಾಸದಲ್ಲಿ ಐದನೇ ಬಾರಿ ಈ ಜೋಡಿ 100ಕ್ಕಿಂತ ಹೆಚ್ಚಿನ ರನ್‌ಗಳ ಜೊತೆಯಾಟವನ್ನು ಆಡುವಂತಾಯಿತು. ಅಲ್ಲದೆ ಗುಜರಾತ್‌ ಟೈಟನ್ಸ್‌ ಪರ ಮೊದಲನೇ ವಿಕೆಟ್‌ಗೆ 5ನೇ ಬಾರಿ ಶತಕದ ಜೊತೆಯಾಟವಾಡಿದ ದಾಖಲೆಯನ್ನು ಗಿಲ್‌-ಸುದರ್ಶನ್‌ ಬರೆದರು.

IPL 2025: ಅರ್ಧಶತಕ ಸಿಡಿಸಿ ಗುಜರಾತ್‌ ಟೈಟನ್ಸ್‌ ಪರ ನೂತನ ದಾಖಲೆ ಬರೆದ ಶುಭಮನ್‌ ಗಿಲ್‌!

ಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ 100ಕ್ಕೂಅಧಿಕ ರನ್‌ ಜೊತೆಯಾಟವಾಡಿದ ಜೋಡಿಗಳು

10 - ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್

9 – ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್

6 - ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್

6 – ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್

5 - ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್

5- ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್

5 – ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ವಾರ್ನರ್

5 – ಗೌತಮ್ ಗಂಭೀರ್ ಮತ್ತು ರಾಬಿನ್ ಉತ್ತಪ್ಪ

IPL 2025: ಗುಜರಾತ್‌ ಟೈಟನ್ಸ್‌ಗೆ ಆಘಾತ, ಐಪಿಎಲ್‌ ಟೂರ್ನಿಯಿಂದ ಗ್ಲೆನ್‌ ಫಿಲಿಪ್ಸ್‌ ಔಟ್‌!

ಗುಜರಾತ್‌ ಟೈಟನ್ಸ್ ಪರ ಮೊದಲನೇ ವಿಕೆಟ್‌ಗೆ ಮೂರನೇ ಅತಿ ಹೆಚ್ಚು ರನ್‌ ಜೊತೆಯಾಟ

210 - ಶುಭಮನ್‌ ಗಿಲ್ ಮತ್ತು ಸಾಯಿ ಸುದರ್ಶನ್ vs ಸಿಎಸ್‌ಕೆ, 2024

142 - ಶುಭಮನ್‌ ಗಿಲ್ ಮತ್ತು ವೃದ್ದಿಮಾನ್‌ ಸಹಾ vs ಎಲ್‌ಎಸ್‌ಜಿ, 2023

120 -ಶುಭಮನ್‌ ಗಿಲ್ ಮತ್ತು ಸಾಯಿ ಸುದರ್ಶನ್ vs LSG, 2025*

106 - ಶುಭಮನ್‌ ಗಿಲ್ ಮತ್ತು ವೃದ್ದಿಮಾನ್‌ ಸಹಾ vs ಎಂಐ, 2022

78 - ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ವಿರುದ್ಧ ಎಂಐ, 2025\

GT vs LSG: ಗುಜರಾತ್‌ ಟೈಟನ್ಸ್‌ಗೆ ಶಾಕ್‌ ನೀಡಿದ ಲಖನೌ ಸೂಪರ್‌ ಜಯಂಟ್ಸ್‌!

ಲಖನೌ ಸೂಪರ್‌ ಜಯಂಟ್ಸ್‌ಗೆ 6 ವಿಕೆಟ್‌ ಜಯ

ಶುಭಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್‌ ಅವರ ಅರ್ಧಶತಕಗಳ ಬಲದಿಂದ ಗುಜರಾತ್‌ ಟೈಟನ್ಸ್‌ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 180 ರನ್‌ಗಳನ್ನು ಕಲೆ ಹಾಕಿತು. ಗಿಲ್‌ ಹಾಗೂ ಸುದರ್ಶನ್‌ ಔಟ್‌ ಆಗುವುದಕ್ಕೂ ಮುನ್ನ ಜಿಟಿ, 200ಕ್ಕೂ ಅಧಿಕ ರನ್‌ ಗಳಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ‌ಆರಂಭಿಕ ಜೋಡಿಯನ್ನು ಔಟ್‌ ಮಾಡಿದ ಬಳಿಕ ಎಲ್‌ಎಸ್‌ಜಿ ಬೌಲರ್‌ಗಳು ಗುಜರಾತ್ ಟೈಟನ್ಸ್‌ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು. ರವಿ ಬಿಷ್ಣೋಯ್‌ ಹಾಗೂ ಶಾರ್ದುಲ್‌ ಠಾಕೂರ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ನಂತರ 181 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್‌ ತಂಡ, ಏಡೆನ್‌ ಮಾರ್ಕ್ರಮ್‌ (58 ರನ್‌) ಹಾಗೂ ನಿಕೋಲಸ್‌ ಪೂರನ್‌ (61 ರನ್‌) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ 19.3 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 186 ರನ್‌ಗಳನ್ನು ಗಳಿಸಿ 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಪಡೆಯಿತು.