ಪಾಕಿಸ್ತಾನ ಎದುರು ಲೋ ಸ್ಕೋರಿಂಗ್ ಥ್ರಿಲ್ಲರ್ ಗೆದ್ದ ಶ್ರೀಲಂಕಾ ಎ ತಂಡಕ್ಕೆ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಗರಿ!
SL A vs PAK A Final Match Highlights: ಕೊನೆಯ ಎಸೆತದವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಎ ಎದುರು ಶ್ರೀಲಂಕಾ ಎ ತಂಡ ಒಂದು ವಿಕೆಟ್ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಸಿಂಹಳೀಯರು 2026ರ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಮುಡಿಗೇರಿಸಿಕೊಂಡಿದ್ದಾರೆ.
ಪಾಕಿಸ್ತಾನ ಎ ಎದುರು ಗೆದ್ದು ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಗೆದ್ದ ಶ್ರೀಲಂಕಾ ಎ. -
Ramesh Kote
Nov 29, 2026 11:23 PM
ದೋಹಾ: ಕೊನೆಯ ಎಸೆತದವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ 2026ರ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ (PAK A vs SL A) ಪಾಕಿಸ್ತಾನ ಎ ಎದುರು ಶ್ರೀಲಂಕಾ ಎ ತಂಡ ಒಂದು ವಿಕೆಟ್ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಸಿಂಹಳೀಯರು ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ. ಕೊನೆಯ ವಿಕೆಟ್‌ಗೆ ಶ್ರೀಲಂಕಾ ತಂಡಕ್ಕೆ 19 ರನ್ ಹಾಗೂ ಪಾಕ್‌ಗೆ ಒಂದೇ ಒಂದು ವಿಕೆಟ್ ಅಗತ್ಯವಿತ್ತು. ಈ ವೇಳೆ ಲಹಿರು ಸಮರಕೂನ್ ಹಾಗೂ ಗರುಕ ಸಂಕೇತ್ ಎಚ್ಚರಿಕೆಯಿಂದ ಆಡಿ 22 ರನ್‌ಗಳ ಜೊತೆಯಾಟದ ಮೂಲಕ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.