IPL 2026: ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಕಣ್ಣಿಟ್ಟಿರುವ ಐವರು ಆಟಗಾರರು!
IPL 2026 Mini Auction: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜು ಪ್ರಕ್ರಿಯೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಹಾಗಾಗಿ ಎಲ್ಲಾ ಫ್ರಾಂಚೈಸಿಗಳು ತಮ್ಮ ಅಗತ್ಯಕ್ಕೆ ಆಟಗಾರರನ್ನು ಖರೀದಿಸಲು ಯೋಜನೆಯನ್ನು ಮಾಡುತ್ತಿವೆ. ಅದಂತೆ ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಐವರು ಆಟಗಾರರನ್ನು ಖರೀದಿಸಲು ಬಯಸಿತ್ತಿದೆ. ಇದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.
ಮುಂಬೈ ಇಂಡಿಯನ್ಸ್ ಖರೀದಿಸಬಲ್ಲ ಐವರು ಆಟಗಾರರು. -
ನವದೆಹಲಿ: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026 Mini Auction) ಟೂರ್ನಿಯ ಮಿನಿ ಹರಾಜಿನಲ್ಲಿಮುಂಬೈ ಇಂಡಿಯನ್ಸ್ (Mumbai Indians) ತಂಡ ಅತ್ಯಂತ ಕಡಿಮೆ ಪರ್ಸ್ ಹೊಂದಿದೆ. ಮುಂಬೈ ಫ್ರಾಂಚೈಸಿ ಖಾತೆಯಲ್ಲಿ 2.75 ಕೋಟಿ ರು. ಗಳು ಮಾತ್ರ ಬಾಕಿ ಇದೆ. ಮಿನಿ ಹರಾಜಿಗೂ ಮುಂಬೈ ಇಂಡಿಯನ್ಸ್ ತಂಡ 9 ಆಟಗಾರರನ್ನು ರಿಲೀಸ್ ಮಾಡಿತ್ತು ಹಾಗೂ ಬಲಿಷ್ಠ ಆಟಗಾರರನ್ನು ಉಳಿಸಿಕೊಂಡಿತ್ತು. ರೀಸ್ ಟಾಪ್ಲಿ, ಮುಜೀಬ್ ಉರ್ ರೆಹಮಾನ್ ಹಾಗೂ ಲಿಝಾದ್ ವಿಲಿಯಮ್ಸ್ ಅವರನ್ನು ಬಿಟ್ಟಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಕಳೆದ ಆವೃತ್ತಿಯಲ್ಲಿ ಭರವಸೆ ಮೂಡಿಸಿದ್ದ ವಿಘ್ನೇಶ್ ಪುತ್ತೂರು ಅವರನ್ನು ಕೂಡ ಮುಂಬೈ ಬಿಡುಗಡೆ ಮಾಡಿತ್ತು.
ಎಡಗೈ ಸ್ಪಿನ್ನರ್ ಆಡಿದ್ದ ಐದು ಇನಿಂಗ್ಸ್‌ಗಳಿಂದ 6 ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೂ ಮುಂಬೈ ಫ್ರಾಂಚೈಸಿ ಯುವ ಸ್ಪಿನ್ನರ್ ಅನ್ನು ರಿಲೀಸ್ ಮಾಡುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಆದರೆ, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಹಾಗೂ ಟ್ರೆಂಟ್ ಬೌಲ್ಟ್ ಅವರನ್ನು ಉಳಿಸಿಕೊಂಡಿದೆ. ಇನ್ನು ವಿದೇಶಿ ಆಟಗಾರರ ರೂಪದಲ್ಲಿ ರಯಾನ್ ರಿಕೆಲ್ಟನ್, ವಿಲ್ ಜ್ಯಾಕ್ಸ್, ಕಾರ್ಬಿನ್ ಬಾಷ್ ಹಾಗೂ ಮಿಚೆಲ್ ಸ್ಯಾಂಟ್ನರ್ ಅವರನ್ನು ಉಳಿಸಿಕೊಂಡಿದೆ.
IPL 2026: ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವವನ್ನು ನಿರಾಕರಿಸಿದ್ದೇಕೆಂದು ತಿಳಿಸಿದ ಕೆಎಲ್ ರಾಹುಲ್!
2026ರ ಐಪಿಎಲ್ ಮಿನಿ ಹರಾಜನಲ್ಲಿ ಮುಂಬೈ ಇಂಡಿಯನ್ಸ್ ಕಟ್ಟಿಟ್ಟಿರುವ ಐವರು ಆಟಗಾರರು
1.ಕೆಎಂ ಆಸಿಫ್
ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಬಲಗೈ ವೇಗದ ಬೌಲರ್ ಕೆಎಂ ಆಸಿಫ್ ಕೇರಳ ತಂಡದ ಪರ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಇವರು ಇಲ್ಲಿಯವರೆಗೂ ಆಡಿದ 6 ಇನಿಂಗ್ಸ್‌ಗಳಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್‌ನಲ್ಲಿ ಆಡಿದ 42 ಇನಿಂಗ್ಸ್‌ಗಳಿಂದ 55 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮುಂಬೈ ಫ್ರಾಂಚೈಸಿ ಸದ್ಯ ಕೇರಳ ವೇಗಿಯ ಮೇಲೆ ಕಣ್ಣಿಟ್ಟಿದೆ.
2.ಡೇವಿಡ್ ಮಿಲ್ಲರ್
ದಕ್ಷಿಣ ಆಫ್ರಿಕಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಮ್ಯಾಚ್ ವಿನ್ನರ್. ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿಯಲ್ಲಿಯೂ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕೈರೊನ್ ಪೊಲಾರ್ಡ್ ನಿವೃತ್ತಿ ಘೋಷಿಸಿದ ಬಳಿಕ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮ್ಯಾಚ್ ಫಿನಿಷರ್ ಸ್ಥಾನ ಖಾಲಿ ಇದೆ. ಹಾಗಾಗಿ ಅವರ ಸ್ಥಾನವನ್ನು ಡೇವಿಡ್ ಮಿಲ್ಲರ್ ತುಂಬಬಹುದು. ಈ ಹಿನ್ನೆಲೆಯಲ್ಲಿ ಮುಂಬೈ ಫ್ರಾಂಚೈಸಿಯು ಮಿನಿ ಹರಾಜಿನಲ್ಲಿ ಆಫ್ರಿಕಾ ಬ್ಯಾಟ್ಸ್‌ಮನ್ ಮೇಲೆ ಕಣ್ಣಿಡಬಹದು.
IPL 2026: ರಾಜಸ್ಥಾನ್ ರಾಯಲ್ಸ್‌ಗೆ ಮತ್ತೆ ಹೆಡ್ ಕೋಚ್ ಆಗಿ ಕುಮಾರ ಸಂಗಕ್ಕಾರ ನೇಮಕ!
3.ಆಕಾಶ್ ಮಧ್ವಾಲ್
2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಫ್ರಾಂಚೈಸಿ ಲೀಗ್‌ಗೆ ಪದಾರ್ಪಣೆ ಮಾಡಿದ್ದ ಆಕಾಶ್ ಮಧ್ವಾಲ್, ಪ್ಲೇಆಫ್ಸ್ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಹಾಕಿದ್ದರು. ಕಳೆದ ಎರಡು ಆವೃತ್ತಿಗಳಲ್ಲಿನ ಗೈರು ಹೊರತಾಗಿಯೂ ಆಕಾಶ್ ಮಧ್ವಾಲ್ ಅವರನ್ನು ಮುಂಬೈ ಫ್ರಾಂಚೈಸಿ ಮರು ಸಹಿ ಮಾಡಿಸಿಕೊಳ್ಳುವ ಸಾಧ್ಯತೆ ಇದೆ.
4.ಅನ್ಮೋಲ್‌ಪ್ರೀತ್ ಸಿಂಗ್
ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಅನ್ಮೋಲ್‌ಪ್ರೀತ್ ಸಿಂಗ್ ಅವರು ಪಂಜಾಬ್ ಪರ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇಲ್ಲಿ ಅವರು ಆಡಿದ 7 ಇನಿಂಗ್ಸ್‌ಗಳಿಂದ 172.14ರ ಸ್ಟ್ರೈಕ್ ರೇಟ್‌ನಲ್ಲಿ241 ರನ್‌ಗಳನ್ನು ಸಿಡಿಸಿದ್ದಾರೆ. ಸ್ಪೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ಹೊಂದಿರುವ ಇವರು, ಮುಂಬೈ ಇಂಡಿಯನ್ಸ್‌ನ ಮಧ್ಯಮ ಹಾಗೂ ಕೆಳ ಮಧ್ಯಮ ಕ್ರಮಾಂಕಕ್ಕೆ ಸೂಕ್ತವಾಗಬಹುದು.
IPL 2026: ಮಿನಿ ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು?
5.ತೇಜಸ್ವಿ ಸಿಂಗ್
ದೊಡ್ಡ ಹೊಡೆತಗಳ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ತೇಜಸ್ವಿ ಸಿಂಗ್ ಅವರು, 2025ರ ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಇಲ್ಲಿ ಅವರು ಆಡಿದ್ದ 10 ಇನಿಂಗ್ಸ್‌ಗಳಿಂದ 48.43ರ ಸರಾಸರಿ ಮತ್ತು 190.45ರ ಸ್ಟ್ರೈಕ್ ರೇಟ್‌ನಲ್ಲಿ 339 ರನ್‌ಗಳನ್ನು ಬಾರಿಸಿದ್ದರು.