NZ vs UAE: 18ನೇ ಓವರ್‌ನಲ್ಲಿ 27 ರನ್ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಗ್ಲೆನ್ ಫಿಲಿಪ್ಸ್!
ಯುಎಇ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್, 18ನೇ ಓವರ್‌ನಲ್ಲಿ 27 ರನ್ ನೀಡುವ ಮೂಲಕ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಮೊಹಮ್ಮದ್ ವಸೀಮ್ ಹಾಗೂ ಅಲಿಶನ್ ಶರಫು ತಲಾ ಅರ್ಧಶತಕಗಳನ್ನು ಬಾರಿಸಿದ್ದರು.
ಒಂದೇ ಓವರ್‌ನಲ್ಲಿ 27 ರನ್ ನೀಡಿ ಅನಗತ್ಯ ದಾಖಲೆ ಬರೆದ ಗ್ಲೆನ್ ಫಿಲಿಪ್ಸ್. -
ಚೆನ್ನೈ: ಯುಎಇ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ (Glenn Phillips) ಅತ್ಯಂತ ದುಬಾರಿಯಾಗುವ ಮೂಲಕ ಅನಗತ್ಯ ದಾಖಲೆಗಳನ್ನು ಹೆಗಲೇರಿಸಿಕೊಂಡಿದ್ದಾರೆ. ಮಂಗಳವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ 18ನೇ ಓವರ್‌ನಲ್ಲಿ ಗ್ಲೆನ್ ಫಿಲಪ್ಸ್ ಬೌಲ್ ಮಾಡಿದ್ದರು. ಆದರೆ, ಅವರು ಅಸೋಸಿಯೇಟ್ ತಂಡವಾಗಿ ಯುಎಇಗೆ (UAE) ಬರೋಬ್ಬರಿ 27 ರನ್‌ಗಳನ್ನು ನೀಡಿದರು. ಇದರ ಪರಿಣಾಮವಾಗಿ ಯುಎಇ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 173 ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಯಿತು.
18ನೇ ಓವರ್‌ನಲ್ಲಿ ಕ್ರೀಸ್‌ನಲ್ಲಿದ್ದ ಮಯಾಂಕ್ ಕುಮಾರ್ ಅವರು ಎರಡು ಮತ್ತು ಮೂರನೇ ಎಸೆತಗಳಲ್ಲಿ ಕ್ರಮವಾಗಿ ಸಿಕ್ಸರ್ ಹಾಗೂ ಬೌಂಡರಿಯನ್ನು ಬಾರಿಸಿದ್ದರು. ನಂತರ ನಾಯಕ ಮೊಹಮ್ಮದ್ ವಸೀಮ್ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿದ್ದರು ಹಾಗೂ ಈ ಎಸೆತ ನೋ ಬಾಲ್ ಆಗಿತ್ತು. ನಂತರ ಫ್ರಿ ಹಿಟ್ ಎಸೆತದಲ್ಲಿ ವಸೀಮ್ ಸಿಕ್ಸರ್ ಸಿಡಿಸಿದ್ದರು. ಇದರ ಜೊತೆಗೆ ಎರಡು ವೈಡ್‌ಗಳು ಹಾಗೂ ಒಂದು ನೋ ಬಾಲ್ ಬೌಲ್ ಮಾಡಿದ್ದರು. ಆ ಮೂಲಕ ಈ ಓವರ್‌ನಲ್ಲಿ ಗ್ಲೆನ್ ಫಿಲಿಪ್ಸ್ ಒಟ್ಟು 27 ರನ್‌ಗಳನ್ನು ನೀಡಿದ್ದರು.
IND vs NAM: ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ಪಡೆಯಬಲ್ಲ ಮೂವರು ಆಟಗಾರರು!
ಹಲವು ದಾಖಲೆಗಳನ್ನು ಬರೆದ ಯುಎಇ
ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್‌ಗಳ ದಾಖಲೆ ಹೊಂದಿದ್ದ ಇಂಗ್ಲೆಂಡ್ ತಂಡದ 10 ವರ್ಷದ ಹಳೆಯ ದಾಖಲೆಯನ್ನು ಯುಎಇ ಕ್ರಿಕೆಟ್ ತಂಡ ಮುರಿದಿದೆ. ಈ ದಾಖಲೆ 2016ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ಮತ್ತು ಜೋ ರೂಟ್ ಅವರ ಬ್ಯಾಟಿಂಗ್‌ನಿಂದ ಮೂಡಿ ಬಂದಿತ್ತು. 2010ರ ಚಾಂಪಿಯನ್‌ಗಳಾದ ಇಂಗ್ಲೆಂಡ್ ತಂಡ, ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ 22 ರನ್‌ಗಳನ್ನು ಗಳಿಸಿತ್ತು. ಇದೀಗ ಯುಎಇ ತಂಡ ಆ ದಾಖಲೆಯನ್ನು ಮೀರಿಸುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯಿತು.
NAM vs NED: ಬಾಸ್ ಡಿ ಲೀಡೆ ಆಲ್‌ರೌಂಡರ್ ಆಟ; ಭರ್ಜರಿ ಗೆಲುವು ಸಾಧಿಸಿದ ನೆದರ್ಲ್ಯಾಂಡ್
ಫಿಲಿಪ್ಸ್ ಇದೀಗ ಮತ್ತೊಂದು ಅನಗತ್ಯ ದಾಖಲೆಯನ್ನೂ ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ. ಪೂರ್ಣ ಸದಸ್ಯ ರಾಷ್ಟ್ರದ ಬೌಲರ್ ಆಗಿ, ಸಹಭಾಗಿ (ಅಸೋಸಿಯೇಟ್) ತಂಡದ ಬ್ಯಾಟರ್‌ರಿಂದ ಒಂದೇ ಓವರ್‌ನಲ್ಲಿ ಪೂರ್ಣ ಸದಸ್ಯ ರಾಷ್ಟ್ರದ ವಿರುದ್ಧ ಅತಿ ಹೆಚ್ಚು ರನ್‌ಗಳನ್ನು ಒಪ್ಪಿಸಿದ ಬೌಲರ್ ಎಂಬ ಅನಗತ್ಯ ದಾಖಲೆಯನ್ನು ಅವರು ಹೆಗಲೇರಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆ ಅಫ್ಘಾನಿಸ್ತಾನದ ಹೆಸರಲ್ಲಿತ್ತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ ತಂಡ ಒಂದೇ ಓವರ್‌ನಲ್ಲಿ 22 ರನ್‌ಗಳನ್ನು ಸಿಡಿಸಿತ್ತು. ಆ ಓವರ್ ಅನ್ನು ದಕ್ಷಿಣ ಆಫ್ರಿಕಾದ ಕೈಲ್ ಅಬಾಟ್ ಬೌಲ್ ಮಾಡಿದ್ದರು. (ಅಫ್ಘಾನಿಸ್ತಾನ 2017ರಲ್ಲಿ ಐಸಿಸಿಯ ಪೂರ್ಣ ಸದಸ್ಯ ರಾಷ್ಟ್ರವಾಗಿ ಸ್ಥಾನ ಪಡೆದಿದೆ).
IND vs NAM: ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ಪಡೆಯಬಲ್ಲ ಮೂವರು ಆಟಗಾರರು!
ಯುಎಇ ತಂಡ ದಾಖಲಿಸಿದ ಒಟ್ಟು ಮೊತ್ತವು ಟಿ20ಐ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸಹಭಾಗಿ (ಅಸೋಸಿಯೇಟ್) ತಂಡವೊಂದು ಸಾಧಿಸಿದ ಅತಿ ದೊಡ್ಡ ಸ್ಕೋರ್ ಆಗಿದೆ. ಈ ಮೂಲಕ ಸ್ಕಾಟ್ಲೆಂಡ್ ಹೊಂದಿದ್ದ 157 ರನ್‌ಗಳ ಹಿಂದಿನ ದಾಖಲೆಯನ್ನು ಯುಎಇ ಮೀರಿಸಿದೆ. ಇದಲ್ಲದೆ, ಇದು ಟಿ20 ವಿಶ್ವಕಪ್ ಪಂದ್ಯವೊಂದರಲ್ಲಿ ಮಧ್ಯಪ್ರಾಚ್ಯ ರಾಷ್ಟ್ರವಾದ ಯುಎಇ ಸಾಧಿಸಿದ ಇತಿಹಾಸದ ಅತಿ ದೊಡ್ಡ ಮೊತ್ತವಾಗಿಯೂ ದಾಖಲಾಗಿದೆ.