ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs WI: ಟೀಮ್‌ ಇಂಡಿಯಾ ಫಿಸಿಯೊಥೆರಫಿಸ್ಟ್‌ ಕಮಲೇಶ್‌ ಜೈನ್‌ಗೆ ಕೊಕ್‌ ನೀಡಿದ ಬಿಸಿಸಿಐ!

ಟೀಮ್‌ ಇಂಡಿಯಾದಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಮಲೇಶ್ ಜೈನ್ ಅವರೊಂದಿಗಿನ ಒಪ್ಪಂದವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಂತ್ಯಗೊಳಿಸಿದೆ. ಭಾರತದ ಆಟಗಾರರ ಫಿಟ್‌ನೆಸ್ ಹಾಗೂ ಗಾಯದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಕಮಲೇಶ್ ಜೈನ್ ಅವರ ಒಪ್ಪಂದವನ್ನು ಬಿಸಿಸಿಐ ಮುಂದುವರಿಸದಿರಲು ನಿರ್ಧರಿಸಿದೆ. ಈ ಬೆಳವಣಿಗೆಯೊಂದಿಗೆ ಭಾರತ ತಂಡದ ಸಹಾಯಕ ಸಿಬ್ಬಂದಿಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ ನಡೆದಿದೆ.

ಭಾರತ ತಂಡದ ಫಿಸಿಯೊಥೆರಫಿಸ್ಟ್‌ ಕಮಲೇಶ್‌ ಜೈನ್‌ಗೆ ಕೊಕ್‌ ನೀಡಿದ ಬಿಸಿಸಿಐ!

ಫಿಸಿಯೋಥೆರಪಿಸ್ಟ್‌ ಕಮಲೇಶ ಜೈನ್‌ಗೆ ಕೊಕ್‌ ನೀಡಿದ ಬಿಸಿಸಿಐ. -

Profile
Ramesh Kote Sep 10, 2026 8:27 PM

ನವದೆಹಲಿ: ಭಾರತ ತಂಡದ ಮುಖ್ಯ ಫಿಸಿಯೋಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಮಲೇಶ್ ಜೈನ್ (Kamlesh Jain) ಅವರ ಒಪ್ಪಂದವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಂತ್ಯಗೊಳಿಸಿದೆ. ಸದ್ಯ ಕಮಲೇಶ್ ಜೈನ್ ನೋಟಿಸ್ ಅವಧಿಯನ್ನು ಪೂರೈಸುತ್ತಿದ್ದು, ಶೀಘ್ರದಲ್ಲೇ ಖಾಲಿಯಾಗಿರುವ ಸ್ಥಾನಕ್ಕೆ ಹೊಸ ಫಿಸಿಯೋಥೆರಪಿಸ್ಟ್ ನೇಮಕ ಮಾಡುವ ನಿರೀಕ್ಷೆಯಿದೆ. ಇಂಡಿಯಾ ಟುಡೆಯ ವರದಿ ಪ್ರಕಾರ, 2026ರ ಭಾರತ ತಂಡದ ಶ್ರೀಲಂಕಾ ಪ್ರವಾಸದ ಬಳಿಕ ಕಮಲೇಶ್ ಜೈನ್ ಅವರ ಒಪ್ಪಂದವನ್ನು ಅಂತ್ಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ತಂಡದ ಆಟಗಾರರಲ್ಲಿ ಪದೇ-ಪದೆ ಕಾಣಿಸಿಕೊಳ್ಳುತ್ತಿದ್ದ ಗಾಯದ ಸಮಸ್ಯೆಗಳ ಬಗ್ಗೆ ಹೆಚ್ಚುತ್ತಿರುವ ಆತಂಕದ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಆಟಗಾರರು ಪದೇ-ಪದೆ ಗಾಯಗೊಳ್ಳುತ್ತಿರುವುದು ಹಾಗೂ ತಂಡದ ಫಿಟ್‌ನೆಸ್ ಮಟ್ಟದಲ್ಲಿ ಕುಸಿತ ಕಂಡುಬಂದಿದೆ ಎಂಬ ಅಭಿಪ್ರಾಯದಿಂದ ಕಮಲೇಶ್ ಜೈನ್ ಅವರ ಕಾರ್ಯವೈಖರಿ ಪರಿಶೀಲನೆಗೆ ಒಳಪಟ್ಟಿತ್ತು ಎನ್ನಲಾಗಿದೆ. ಶ್ರೀಲಂಕಾ ಪ್ರವಾಸಕ್ಕೂ ಮುನ್ನ ನಡೆದಿದ್ದ ಇಂಗ್ಲೆಂಡ್ ಪ್ರವಾಸದಲ್ಲೂ ಆಟಗಾರರಿಗೆ ಪದೇ-ಪದೆ ಸ್ನಾಯು ಸೆಳೆತ ಸೇರಿದಂತೆ ಹಲವು ಗಾಯದ ಸಮಸ್ಯೆಗಳು ಕಾಣಿಸಿಕೊಂಡಿದ್ದವು.

ENG vs PAK: ಮೊದಲ ಮಹಾಯುದ್ಧದ ಬಳಿಕ ಅತ್ಯುತ್ತಮ ಟೆಸ್ಟ್‌ ಸರಾಸರಿಯಲ್ಲಿ 100 ವಿಕೆಟ್‌ ಕಿತ್ತ ಓಲ್ಲಿ ರಾಬಿನ್ಸನ್‌!

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಹಲವು ಪ್ರಮುಖ ಆಟಗಾರರು ಗಾಯ ಅಥವಾ ಫಿಟ್‌ನೆಸ್ ಸಮಸ್ಯೆಗಳಿಂದ ಬಳಲುತ್ತಿದ್ದರು. ನಿತೀಶ್ ಕುಮಾರ್ ರೆಡ್ಡಿ ಎಡ ತೊಡೆಯ ಕ್ವಾಡ್ರಿಸೆಪ್ಸ್ ಗಾಯದಿಂದ ಟೆಸ್ಟ್ ಸರಣಿಯಿಂದ ಹೊರಗುಳಿದರು. ದೀರ್ಘಕಾಲದ ಗಾಯದಿಂದ ಚೇತರಿಸಿಕೊಂಡು ಮರಳಿದ್ದ ಹರ್ಷಿತ್ ರಾಣಾ ಕೂಡ ಲಭ್ಯವಿರಲಿಲ್ಲ. ಇದೇ ವೇಳೆ ಜಸ್‌ಪ್ರೀತ್‌ ಬುಮ್ರಾ ಅವರ ಫಿಟ್‌ನೆಸ್ ಪ್ರಮುಖ ಚಿಂತೆಯಾಗಿತ್ತು. ಸಾಯಿ ಸುದರ್ಶನ್ ಹಾಗೂ ವಾಷಿಂಗ್ಟನ್ ಸುಂದರ್ ಅವರ ಫಿಟ್‌ನೆಸ್ ಬಗ್ಗೆಯೂ ಸರಣಿ ಆರಂಭಕ್ಕೂ ಮುನ್ನ ಆತಂಕವಿತ್ತು.

ಶ್ರೀಲಂಕಾ ವಿರುದ್ಧ 1-0 ಅಂತರದಲ್ಲಿ ಸರಣಿ ಗೆದ್ದ ಭಾರತ

ಇಷ್ಟೆಲ್ಲಾ ಫಿಟ್‌ನೆಸ್ ಸಮಸ್ಯೆಗಳ ನಡುವೆಯೂ ಭಾರತ ತಂಡ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಂಡಿತು. ಎರಡನೇ ಟೆಸ್ಟ್‌ನಲ್ಲಿ ಭಾರತ ಫಾಲೋ-ಆನ್ ಹೇರಿದರೂ, ಆತಿಥೇಯ ಶ್ರೀಲಂಕಾ ಅಂತಿಮ ದಿನದಂದು ಭರ್ಜರಿ ಹೋರಾಟ ನೀಡಿತು. ಸೋನಲ್ ದಿನೂಷಾ ಪಂದ್ಯದ ಎರಡನೇ ಶತಕ ಸಿಡಿಸುವ ಮೂಲಕ ಶ್ರೀಲಂಕಾಗೆ ಡ್ರಾ ಸಾಧಿಸಲು ನೆರವಾದರು.

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ನೀವು ಆಡುತ್ತೀರಾ? ರೋಹಿತ್‌ ಶರ್ಮಾ ಉತ್ತರ ಹೀಗಿದೆ!

ಈ ಸರಣಿ ಫಲಿತಾಂಶದ ಬಳಿಕ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿಯಿತು. ಇನ್ನು ಪ್ರಮುಖ ಆಟಗಾರರ ಅನುಪಸ್ಥಿತಿಯ ನಡುವೆಯೂ ಯುವ ಆಟಗಾರರಾದ ಮಾನವ್‌ ಸುತಾರ್, ದೇವದತ್ ಪಡಿಕ್ಕಲ್ ಮತ್ತು ಧ್ರುವ್ ಜುರೆಲ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.

2022ರಲ್ಲಿ ಟೀಮ್‌ ಇಂಡಿಯಾ ಫಿಸಿಯೊ ಆಗಿ ನೇಮಕ

ಕಮಲೇಶ್ ಜೈನ್ ಅವರನ್ನು 2022ರ ಜೂನ್‌ನಲ್ಲಿ ಟೀಮ್‌ ಇಂಡಿಯಾದ ಮುಖ್ಯ ಫಿಸಿಯೋಥೆರಪಿಸ್ಟ್ ಆಗಿ ನೇಮಕ ಮಾಡಲಾಗಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಗೂ ಮುನ್ನ ಅವರು ತಂಡವನ್ನು ಸೇರಿಕೊಂಡಿದ್ದರು. ಅವರಿಗೂ ಮುನ್ನ ನಿತಿನ್ ಪಟೇಲ್ ಭಾರತದ ಫಿಸಿಯೋಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು. ಜೈನ್ ನೇಮಕವನ್ನು ಬಿಸಿಸಿಐ ಮೂಲಗಳು ಖಚಿತಪಡಿಸಿದ್ದವು.

ಕೆಕೆಆರ್‌ ಜೊತೆ 10 ವರ್ಷಗಳ ಅನುಭವ

ಟೀಮ್‌ ಇಂಡಿಯಾದ ಜವಾಬ್ದಾರಿ ವಹಿಸುವ ಮೊದಲು ಕಮಲೇಶ್ ಜೈನ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದೊಂದಿಗೆ ಸುಮಾರು 10 ವರ್ಷಗಳ ಕಾಲ ಫಿಸಿಯೋಥೆರಪಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು. 2012ರ ಐಪಿಎಲ್ ಋತುವಿನಲ್ಲಿ ಅವರು ಕೆಕೆಆರ್‌ ತಂಡಕ್ಕೆ ಸಹಾಯಕ ಫಿಸಿಯೋಥೆರಪಿಸ್ಟ್ ಆಗಿ ಸೇರ್ಪಡೆಯಾಗಿದ್ದರು. ಬಳಿಕ 2019ರ ಜುಲೈನಲ್ಲಿ ಮುಖ್ಯ ಫಿಸಿಯೋಥೆರಪಿಸ್ಟ್ ಆಗಿ ಬಡ್ತಿ ಪಡೆದಿದ್ದರು. ಇದಲ್ಲದೆ, 2011ರಿಂದ 2016ರವರೆಗೆ ಆರು ಋತುಗಳ ಕಾಲ ಬಂಗಾಳ ಕ್ರಿಕೆಟ್ ಮಂಡಳಿಯ ಮುಖ್ಯ ಫಿಸಿಯೊ ಆಗಿಯೂ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಅವರು ಬಂಗಾಳ ಹಿರಿಯ ರಣಜಿ ತಂಡದೊಂದಿಗೆ ಕೆಲಸ ಮಾಡಿದ್ದರು.

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ನೀವು ಆಡುತ್ತೀರಾ? ರೋಹಿತ್‌ ಶರ್ಮಾ ಉತ್ತರ ಹೀಗಿದೆ!

ಹೊಸ ಫಿಸಿಯೊ ನೇಮಕಕ್ಕೆ ಬಿಸಿಸಿಐ ಸಿದ್ಧತೆ

ಕಮಲೇಶ್ ಜೈನ್ ಸದ್ಯ ನೋಟಿಸ್ ಅವಧಿಯನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಸಹಾಯಕ ಸಿಬ್ಬಂದಿಯಲ್ಲಿನ ಮುಖ್ಯ ಫಿಸಿಯೋಥೆರಪಿಸ್ಟ್ ಸ್ಥಾನಕ್ಕೆ ಬಿಸಿಸಿಐ ಶೀಘ್ರದಲ್ಲೇ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಆಟಗಾರರ ಗಾಯದ ಸಮಸ್ಯೆಗಳು ಮತ್ತು ಫಿಟ್‌ನೆಸ್ ಕುರಿತು ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿ ಬಿಸಿಸಿಐ ಕೈಗೊಂಡಿರುವ ಈ ನಿರ್ಧಾರವು ಭಾರತೀಯ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.