IPL 2026: ಎರಡನೇ ಟ್ರೋಫಿ ಗೆದ್ದ ಆರ್‌ಸಿಬಿಗೆ ಆಘಾತ, 2027ರ ಐಪಿಎಲ್ ಮೊದಲನೇ ಪಂದ್ಯಕ್ಕೆ ಟಿಮ್ ಡೇವಿಡ್ ಬ್ಯಾನ್!
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಒಂದು ಹಿನ್ನಡೆಯಾಗಿದೆ. ಗುಜರಾತ್ ಟೈಟನ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘನೆ ಮಾಡಿದ ಆರ್‌ಸಿಬಿ ಆಲ್‌ರೌಂಡರ್ ಟಿಮ್ ಡೇವಿಡ್‌ಗೆ ಪಂದ್ಯದ ಸಂಭಾವನೆಯಲ್ಲಿ ಶೇ 50 ರಷ್ಟು ದಂಡ ಹಾಗೂ 2027ರ ಐಪಿಎಲ್ ಟೂರ್ನಿಯಲ್ಲಿ ಒಂದು ಪಂದ್ಯದಿಂದ ನಿಷೇಧ ಹೇರಲಾಗಿದೆ.
ಟಿಮ್ ಡೇವಿಡ್‌ಗೆ 2027ರ ಐಪಿಎಲ್‌ನಲ್ಲಿ ಒಂದು ಪಂದ್ಯ ನಿಷೇಧ. -
ಅಹಮದಾಬಾದ್: ಗುಜರಾತ್ ಟೈಟನ್ಸ್ ಎದುರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಸತತ ಎರಡನೇ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಆದರೆ, ಈ ಪಂದ್ಯದ ಬಳಿಕ ಆರ್‌ಸಿಬಿ ಪಾಲಿಗೆ ಕಹಿ ಸುದ್ದಿಯೊಂದು ಮೂಡಿಬಂದಿದೆ. ಫೈನಲ್ ಪಂದ್ಯದ ವೇಳೆ ಐಪಿಎಲ್ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಆರ್‌ಸಿಬಿ ಆಲ್‌ರೌಂಡರ್ ಟಿಮ್ ಡೇವಿಡ್‌ಗೆ (Tim David) ಭಾರಿ ದಂಡವನ್ನು ವಿಧಿಸುವ ಜೊತೆಗೆ ಎರಡು ಡೀಮೆರಿಟ್ ಅಂಕವನ್ನು ನೀಡಲಾಗಿದೆ. ಇದರ ಜೊತೆಗೆ ಮುಂದಿನ 2027ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಒಂದು ಪಂದ್ಯದಿಂದ ಡೇವಿಡ್ ಅವರನ್ನು ನಿಷೇಧ ಹೇರಲಾಗಿದೆ.
ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಈ ಘಟನೆ ನಡೆದಿತ್ತು. ಪಂದ್ಯದ ಸಂದರ್ಭದಲ್ಲಿ ಚೆಂಡನ್ನು (ಕ್ರಿಕೆಟ್ ಸಲಕರಣೆಗಳು, ನೀರಿನ ಬಾಟಲ್) ಆಟಗಾರರ ಮುಂದೆ ಅಥವಾ ಪಂದ್ಯದ ಅಧಿಕಾರಿಗಳ ಮುಂದೆ, ಅಂಪೈರ್‌ಗಳ ಮುಂದೆ, ಮ್ಯಾಚ್ ರೆಫರಿಗಳ ಮುಂದೆ ಅಥವಾ ಯಾವುದು ಮೂರನೇ ವ್ಯಕ್ತಿಯ ಮುಂದೆ ಅಪಾಯಕಾರಿಯಾಗಿ ಎಸೆಯುವ ನಿಯಮಕ್ಕೆ ಸಂಬಂಧಿಸಿದಂತೆ ಐಪಿಎಲ್‌ನ 2.9 ನಿಯಮವನ್ನು ಟಿಮ್ ಡೇವಿಡ್ ಉಲ್ಲಂಘನೆ ಮಾಡಿದ್ದಾರೆ.
ʻಇನ್ನೂ ನಮ್ಮ ಕೆಲಸ ಮುಗಿದಿಲ್ಲ, ಹ್ಯಾಟ್ರಿಕ್ ಗೆಲುವು ನಮ್ಮ ಗುರಿʼ: ರಜತ್ ಪಾಟಿದಾರ್ ಮತ್ತೊಂದು ಶಪಥ!
ಐಪಿಎಲ್ ಅಧಿಕೃತ ಹೇಳಿಕೆ
"ಪಂದ್ಯದ ಪ್ರಥಮ ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ವಿಕೆಟ್ ಉರುಳಿದ ಬಳಿಕ, ಟಿಮ್ ಡೇವಿಡ್ ಅವರು ಅಂಪೈರ್ ನಿತಿನ್ ಮೆನನ್ ಅವರಿಗೆ ನೆರವಾಗಿ ಆಕ್ರಮಣಕಾರಿಯಾಗಿ ಐಸ್ ಬ್ಯಾಗ್ ಅನ್ನು ಎಸೆದಿದ್ದರು. ಈ ಪ್ರಮಾದವನ್ನು ಆರ್‌ಸಿಬಿ ಆಲ್‌ರೌಂಡರ್ ಮ್ಯಾಚ್ ರೆಫರಿ ಅವರ ಮುಂದೆ ಒಪ್ಪಿಕೊಂಡಿದ್ದಾರೆ ಹಾಗೂ ಶಿಕ್ಷೆಯನ್ನು ಸ್ವೀಕರಿಸಿದ್ದಾರೆ," ಎಂದು ಐಪಿಎಲ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
🚨 News 🚨
— IndianPremierLeague (@IPL) June 1, 2026
Tim David of @RCBTweets has been fined 50% of his match fee for breaching Level 1 of the IPL's Code of Conduct for Players and Team Officials during the #TATAIPL 2026 Final against #GT at the Narendra Modi Stadium, Ahmedabad.
Details 🔽 https://t.co/FN8adJQ36s
"ಈ ಸೀಸನ್‌ನಲ್ಲಿ ಟಿಮ್ ಡೇವಿಡ್ ಮೂರನೇ ಲೆವೆಲ್ ಒಂದರ ಪ್ರಮಾದ ಇದಾಗಿದೆ. ಇದಕ್ಕೂ ಮುನ್ನ 20ನೇ ಪಂದ್ಯದಲ್ಲಿ ಮೊದಲನೇ ಪ್ರಮಾದವನ್ನು ಎಸಗಿದ್ದರು ಹಾಗೂ ಒಂದು ಡೀಮೆರಿಟ್ ಅಂಕವನ್ನು ಪಡೆದಿದ್ದರು. ಇದಾದ ಬಳಿಕ 54ನೇ ಪಂದ್ಯದಲ್ಲಿ ಎರಡನೇ ಪ್ರಮಾದವನ್ನು ಎಸಗಿದ ಬಳಿಕ ಎರಡು ಡೀಮೆರಿಟ್ ಅಂಕಗಳನ್ನು ಪಡೆದಿದ್ದರು. ಅವರ ಖಾತೆಗೆ ಒಟ್ಟು 5 ಡೀಮೆರಿಟ್ ಅಂಕಗಳನ್ನು ಪಡೆದಂತಾಯಿತು. ಇದರ ಪರಿಣಾಮ 2027ರ ಐಪಿಎಲ್ ಟೂರ್ನಿಯ ಆರ್‌ಸಿಬಿ ತಂಡದ ಮೊದಲನೇ ಪಂದ್ಯದಿಂದ ಟಿಮ್ ಡೇವಿಡ್ ಅವರನ್ನು ನಿಷೇಧ ಹೇರಲಾಗಿದೆ," ಎಂದು ಐಪಿಎಲ್ ತನ್ನ ಹೇಳಿಕೆಯಲ್ಲಿ ನೀಡಿದೆ.
The message is loud and clear 😉❤️#TATAIPL | #Final | #TheFinalLeap | #RCBvGT pic.twitter.com/FN8tCxND5g
— IndianPremierLeague (@IPL) June 1, 2026
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಬಳಿಕ ಸತತ ಎರಡನೇ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡ ಮೂರನೇ ತಂಡ ಎಂಬ ಕೀರ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾಜನವಾಯಿತು. ಒಂದಕ್ಕಿಂತೆ ಹೆಚ್ಚು ಐಪಿಎಲ್ ಕಪ್ ಗೆದ್ದ ನಾಲ್ಕನೇ ತಂಡ ಎನಿಸಿಕೊಂಡಿತು. ಈ ಸೀಸನ್‌ನಲ್ಲಿ ಆರ್‌ಸಿಬಿ ಪ್ರಶಸ್ತಿ ಗೆಲುವಿನ ಪಯಣದಲ್ಲಿ ಟಿಮ್ ಡೇವಿಡ್ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಇದೀಗ ಆರ್‌ಸಿಬಿ ಮುಂದಿನ ಐಪಿಎಲ್ ಟೂರ್ನಿಯಲ್ಲಿಯೂ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸಲು ಪ್ರಯತ್ನಿಸಲಿದೆ.