ದಕ್ಷಿಣ ಆಫ್ರಿಕಾ ಎದುರು 19 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ ವೈಭವ್ ಸೂರ್ಯವಂಶಿ!
ಭಾರತ ಅಂಡರ್-19 ಮತ್ತು ದಕ್ಷಿಣ ಆಫ್ರಿಕಾ ಅಂಡರ್-19 ನಡುವಿನ ಎರಡನೇ ಯೂತ್ ಏಕದಿನ ಪಂದ್ಯ ಬೆನೋನಿಯಲ್ಲಿ ನಡೆಯಿತು. ಭಾರತದ ನಾಯಕ ಹಾಗೂ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು ಕೇವಲ 19 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದಾರೆ.
19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ. -
ನವದೆಹಲಿ: ಭಾರತ ಅಂಡರ್-19 (India U-19 Team) ತಂಡದ ನಾಯಕ ವೈಭವ್ ಸೂರ್ಯವಂಶಿ (Vaibhav Suryavanshi), ದಕ್ಷಿಣ ಆಫ್ರಿಕಾ (South Africa U-19) ಕಿರಿಯರ ತಂಡದ ವಿರುದ್ಧ ಸ್ಪೋಟಕ ಅರ್ಧಶತಕವನ್ನು ಬಾರಿಸಿದ್ದಾರೆ. ಎರಡನೇ ಯೂಥ್ ಒಡಿಐ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ 14ರ ವಯಸ್ಸಿನ ಸೂರ್ಯವಂಶಿ, ಕಡಿಮೆ ಎಸೆತಗಳಲ್ಲಿ ಫಿಫ್ಟಿ ಸಿಡಿಸಿದ್ದಾರೆ. ಅವರು ಕೇವಲ 19 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಆ ಮೂಲಕ ತಮ್ಮ ಸ್ಪೋಟಕ ಬ್ಯಾಟಿಂಗ್ ಫಾರ್ಮ್ ಅನ್ನು ಮುಂದುವರಿಸಿದ್ದಾರೆ.
ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ, 24 ಎಸೆತಗಳಲ್ಲಿ 283.33 ಸ್ಟ್ರೈಕ್ ರೇಟ್‌ನಲ್ಲಿ 68 ರನ್ ಗಳಿಸಿದರು. ಈ ಬಿರುಗಾಳಿಯ ಇನಿಂಗ್ಸ್‌ನಲ್ಲಿ, ವೈಭವ್ ಸೂರ್ಯವಂಶಿ 10 ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು. ದಕ್ಷಿಣ ಆಫ್ರಿಕಾದ ಬಯಾಂಡ ಮಜೋಲಾ ಎಸೆದ ಎಂಟನೇ ಓವರ್‌ನಲ್ಲಿ ಸೂರ್ಯವಂಶಿ ತಮ್ಮ ಅರ್ಧಶತಕವನ್ನು ತಲುಪಿದರು.
VHT 2025-26: ಮುಂಬೈ ತಂಡದ ನಾಯಕತ್ವಕ್ಕೆ ಮರಳಿದ ಶ್ರೇಯಸ್ ಅಯ್ಯರ್!
ವೈಭವ್ ಸೂರ್ಯವಂಶಿ ತಮ್ಮ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ 19 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ನಂತರ ಆ ಓವರ್‌ನ ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಬಾರಿಸಿದರು, ನಂತರ ನಾಲ್ಕನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಹೀಗೆ ಸೂರ್ಯವಂಶಿ ಆ ಓವರ್‌ನಲ್ಲಿ 23 ರನ್‌ಗಳನ್ನು ಚಚ್ಚಿದರು.
🚨 CAPTAIN VAIBHAV SURYAVANSHI GOES BONKERS! 🚨
— 𝐂𝐫𝐢𝐜𝐤𝐞𝐭𝐗𝐭𝐫𝐚. (@cricket12craze) January 5, 2026
- 68 off just 24 balls vs South Africa U-19 💥
10 SIXES, 1 FOUR — and he’s only 14 years old! 🥶🔥#VaibhavSooryavanshi #IPL2026
pic.twitter.com/1tutAkSrGI
36 ಎಸೆತಗಳಲ್ಲಿ ಶತಕ ಬಾರಿಸಿದ್ದ ವೈಭವ್
ವೈಭವ್ ಸೂರ್ಯವಂಶಿ 2025-26ರ ವಿಜಯ್ ಹಝಾರೆ ಟ್ರೋಫಿ ಟೂರ್ನಿಯಲ್ಲಿಯಲ್ಲಿಯೂ ಬಿಹಾರ ಪರ ಆಡಿದ್ದಾರೆ. ಅರುಣಾಚಲ ವಿರುದ್ಧದ ಪಂದ್ಯದಲ್ಲಿ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದ್ದರು. ರಾಂಚಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಸೂರ್ಯವಂಶಿ 190 ರನ್ ಗಳಿಸಿದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಭಾರತೀಯ ಆಟಗಾರನೊಬ್ಬ ಗಳಿಸಿದ ನಾಲ್ಕನೇ ವೇಗದ ಶತಕ ಇದಾಗಿದೆ. ಸೂರ್ಯವಂಶಿ ಕಳೆದ ವರ್ಷದಿಂದ ಸ್ಥಿರವಾಗಿ ರನ್ ಗಳಿಸುತ್ತಿದ್ದಾರೆ ಮತ್ತು ಅವರ ಬ್ಯಾಟಿಂಗ್‌ನಲ್ಲಿ ಪ್ರಭಾವಶಾಲಿಯಾಗಿದ್ದಾರೆ. ವೈಭವ್ ಖಂಡಿತವಾಗಿಯೂ ಆಯ್ಕೆದಾರರ ಪರಿಶೀಲನೆಗೆ ಒಳಗಾಗುತ್ತಾರೆ. ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ಭಾರತದ ಮುಂದಿನ ದೊಡ್ಡ ಆಟಗಾರನಾಗಬಹುದು.
246 ರನ್ ಗುರಿ ನೀಡಿದ್ದ ದಕ್ಷಿಣ ಆಫ್ರಿಕಾ
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ, ಜೇಸನ್ ರಾವೆಲ್ಸ್ ಅವರ ಶತಕದ ಬಲದಿಂದ 49.3 ಓವರ್‌ಗಳಿಗೆ 245 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆ ಮೂಲಕ ಎದುರಾಳಿ ಭಾರತ ಅಂಡರ್-19 ತಂಡಕ್ಕೆ 246 ರನ್‌ಗಳ ಗುರಿಯನ್ನು ನೀಡಿತ್ತು. ಆತಿಥೇಯರ ಪರ ಅದ್ಭುತವಾಗಿ ಬ್ಯಾಟ್ ಮಾಡಿದ ಜೇಸನ್ ರಾವೆಲ್ಸ್ 113 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 114 ರನ್‌ಗಳನ್ನು ಕಲೆ ಹಾಕಿದ್ದರು. 246 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ, 12.4 ಓವರ್‌ಗಳ ಹೊತ್ತಿಗೆ ಎರಡು ವಿಕೆಟ್ ನಷ್ಟಕ್ಕೆ 115 ರನ್‌ಗಳನ್ನು ಗಳಿಸಿದೆ ಹಾಗೂ ಗೆಲ್ಲಲು ಇನ್ನೂ 115 ರನ್ ಬೇಕಿದೆ.