IND vs ENG: ವಿರಾಟ್ ಕೊಹ್ಲಿಯ ಲಂಡನ್ ಮನೆಯಲ್ಲಿ ಶುಭಮನ್ ಗಿಲ್, ರಿಷಭ್ ಪಂತ್ ಮೀಟಿಂಗ್!
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಜೂನ್ 20 ರಂದು ಆರಂಭವಾಗಲಿದೆ. ರೋಹಿತ್ ಶರ್ಮಾ ನಿವೃತ್ತಿಯ ನಂತರ ಶುಭಮನ್ ಗಿಲ್ ನಾಯಕರಾಗಿದ್ದಾರೆ. ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಇಂಗ್ಲೆಂಡ್ ಸರಣಿಗೂ ಮುನ್ನ ಕೊಹ್ಲಿ ಗಿಲ್, ಪಂತ್ ಮತ್ತು ಕೆಲವು ಆಟಗಾರರನ್ನು ಲಂಡನ್ನಲ್ಲಿರುವ ತಮ್ಮ ಮನೆಗೆ ಆಹ್ವಾನಿಸಿದ್ದರು.

ವಿರಾಟ್ ಕೊಹ್ಲಿ ಮನೆಗೆ ಭೇಟಿ ನೀಡಿದ್ದ ಶುಭಮನ್ ಗಿಲ್, ರಿಷಭ್ ಪಂತ್.

ನವದೆಹಲಿ: ಜೂನ್ 20 ರಂದು ಲೀಡ್ಸ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ (IND vs ENG) ಆರಂಭವಾಗಲಿದೆ. ಈ ಕಠಿಣ ಪ್ರವಾಸದಲ್ಲಿ ಯುವ ಆಟಗಾರ ಶುಭಮನ್ ಗಿಲ್ (Shubman Gill) ತಂಡವನ್ನು ಮುನ್ನಡೆಸಲಿದ್ದಾರೆ. ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾದ ನಂತರ, ಶುಭಮನ್ ಗಿಲ್ ಅವರನ್ನು ಈ ಸ್ವರೂಪದಲ್ಲಿ ಭಾರತದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಇದರ ಜೊತೆಗೆ ರಿಷಭ್ ಪಂತ್ ಅವರಿಗೆ ಉಪನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ರೋಹಿತ್ ಶರ್ಮಾ ನಿವೃತ್ತಿಯ ನಂತರ, ಭಾರತದ ಅನುಭವಿ ಆಟಗಾರ ವಿರಾಟ್ ಕೊಹ್ಲಿ (Virat Kohli) ಕೂಡ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾದರು. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾಗೆ ಕಠಿಣ ಸವಾಲು ಎದುರಾಗಲಿದೆ.
ಇಂಗ್ಲೆಂಡ್ನ ಮಹತ್ವದ ಸರಣಿಗೆ ಮೊದಲು ಇಬ್ಬರೂ ಅನುಭವಿ ಆಟಗಾರರ ನಿವೃತ್ತಿ ಭಾರತಕ್ಕೆ ಆಘಾತಕಾರಿಯಾಗಿತ್ತು. ಭಾರತ ತಂಡ ಇಂಗ್ಲೆಂಡ್ ತಲುಪಿದೆ ಹಾಗೂ ಕಠಿಣ ತಯಾರಿಯನ್ನು ನಡೆಸುತ್ತಿದೆ. ಅಲ್ಲದೆ ಇಂಟ್ರಾ-ಸ್ಕ್ವಾಡ್ ಪಂದ್ಯಗಳನ್ನು ಸಹ ಆಡಿದೆ. ವಿರಾಟ್ ಕೊಹ್ಲಿ ಪ್ರಸ್ತುತ ತಮ್ಮ ಕುಟುಂಬದೊಂದಿಗೆ ಲಂಡನ್ನಲ್ಲಿದ್ದಾರೆ. ಐಪಿಎಲ್ ಆಡಿದ ನಂತರ ಕೊಹ್ಲಿ ಲಂಡನ್ಗೆ ಮರಳಿದ್ದರು.
IND vs ENG: ಶುಭಮನ್ ಗಿಲ್ ನಾಯಕತ್ವದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಜೋಸ್ ಬಟ್ಲರ್!
ವಿರಾಟ್ ಕೊಹ್ಲಿ ಮನೆಯಲ್ಲಿ 2 ಗಂಟೆಗಳ ಕಾಲ ಸಭೆ
ನಿವೃತ್ತಿಯ ಹೊರತಾಗಿಯೂ, ವಿರಾಟ್ ಕೊಹ್ಲಿ ಇಂಗ್ಲೆಂಡ್ ಸರಣಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಲೀಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ಗೂ ಕೆಲವು ದಿನಗಳ ಮುನ್ನ ಹೊಸ ಟೆಸ್ಟ್ ನಾಯಕ ಶುಭಮನ್ ಗಿಲ್, ಉಪನಾಯಕ ರಿಷಭ್ ಪಂತ್ ಮತ್ತು ಇತರ ಕೆಲವು ಆಟಗಾರರನ್ನು ಲಂಡನ್ನಲ್ಲಿರುವ ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ ಎಂದು ರೆವ್ಸ್ಪೋರ್ಟ್ಸ್ನ ವೀಡಿಯೊ ವರದಿಯಿಂದ ತಿಳಿದುಬಂದಿದೆ. ಸೋಮವಾರ ಕೆಂಟ್ನಲ್ಲಿ ಇಂಟ್ರಾ-ಸ್ಕ್ವಾಡ್ ಪಂದ್ಯ ಮುಗಿದ ನಂತರ ಭಾರತ ತಂಡ, ಒಂದು ದಿನದ ರಜೆಯನ್ನು ಹೊಂದಿತ್ತು. ಆದ್ದರಿಂದ ಆಟಗಾರರು ಕೊಹ್ಲಿಯನ್ನು ಭೇಟಿ ಮಾಡಲು ಸಾಧ್ಯವಾಗಿತ್ತು.
IND vs ENG Test: ಇಂದು ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳಲಿರುವ ಕೋಚ್ ಗಂಭೀರ್
ಈ ಸಭೆ ಯಾವುದರ ಬಗ್ಗೆ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿಲ್ಲ. ಮುಂಬರುವ ಸರಣಿಯ ಬಗ್ಗೆ ಅಥವಾ ಗಿಲ್ ಮತ್ತು ಪಂತ್ ಯುವ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದರ ಬಗ್ಗೆ ಇದು ಇದ್ದಿರಬಹುದು ಎಂದು ಊಹಿಸಲಾಗಿದೆ. ಆದಾಗ್ಯೂ, ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆದಿತ್ತು ಎಂದು ತಿಳಿದುಬಂದಿದೆ. ಭಾರತ ತಂಡವು ಮಂಗಳವಾರ ಲೀಡ್ಸ್ ತಲುಪುವ ನಿರೀಕ್ಷೆಯಿದೆ, ಅಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ತಂಡವನ್ನು ಭೇಟಿಯಾಗಲಿದ್ದಾರೆ.
ಭಾರತ ಟೆಸ್ಟ್ ತಂಡ: ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿ.ಕೀ, ಉಪ ನಾಯಕ), ಕಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಕರುಣ್ ನಾಯರ್, ಧ್ರುವ್ ಜುರೆಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಶಾರ್ದುಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃೆಷ್ಣ, ಕುಲ್ದೀಪ್ ಯಾದವ್, ಆಕಾಶ್ ದೀಪ್, ಅರ್ಷದೀಪ್ ಸಿಂಗ್.