IND vs ENG Test: ಇಂದು ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳಲಿರುವ ಕೋಚ್ ಗಂಭೀರ್
ಗೌತಮ್ ಗಂಭೀರ್ ಮತ್ತೆ ಭಾರತ ತಂಡ ಸೇರುವುದು ಕೊಂಚ ತಡವಾಗಲಿದೆ ಹೀಗಾಗಿ ಮೊದಲ ಟೆಸ್ಟ್‌ಗೆ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಅವರು ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿತ್ತು. ಅಲ್ಲದೆ ಲಕ್ಷ್ಮಣ್ ಕೂಡ ಲಂಡನ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಗಂಭೀರ್ ತಾಯಿ ಆರೋಗ್ಯವಾದ ನಿಟ್ಟಿನಲ್ಲಿ ಲಂಡನ್‌ಗೆ ತೆರಳಿ ಅವರೇ ಕೋಚಿಂಗ್ ನಡೆಸಲಿದ್ದಾರೆ.


ನವದೆಹಲಿ: ತಾಯಿಯ ತುರ್ತು ವೈದ್ಯಕಿಯ ಪರಿಸ್ಥಿತಿಯಿಂದಾಗಿ ಹೋದ ವಾರ ತವರಿಗೆ ಮರಳಿದ್ದ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್(Gautam Gambhir) ಅವರು ಮಂಗಳವಾರ ತಂಡವನ್ನು(IND vs ENG Test) ಸೇರಿಕೊಳ್ಳಲಿದ್ದಾರೆ. ಜೂನ್ 11ರಂದು ಗಂಭೀರ್ ಅವರ ತಾಯಿ ಸೀಮಾ ಗಂಭೀರ್ ಅವರಿಗೆ ಹೃದಯಾಘಾತ ಆಗಿತ್ತು. ಹಾಗಾಗಿ, 12ರಂದು ಗಂಭೀರ್ ಅವರು ಕುಟುಂಬದವರೊಂದಿಗೆ ಲಂಡನ್‌ನಿಂದ ದೆಹಲಿಗೆ ಮರಳಿದ್ದರು.
ಸದ್ಯ ಗಂಭೀರ್ ಅವರ ತಾಯಿ ಆರೋಗ್ಯದಿಂದಿದ್ದಾರೆ(Gambhir's mother stable). ಅವರು ಮಂಗಳವಾರ ದೆಹಲಿಯಿಂದ ಲಂಡನ್‌ಗೆ ಪ್ರಯಾಣ ಬೆಳೆಸಲಿದ್ದು, ತಂಡದೊಂದಿಗೆ ಮಂಗಳವಾರವೇ ಕೂಡಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಗಂಭೀರ್ ಭಾರತಕ್ಕೆ ಮರಳಿದ ಕಾರಣ ಮೂರು ದಿನಗಳ ಭಾರತ ಹಾಗೂ ಭಾರತ ಎ ತಂಡಗಳು ಆಂತರಿಕ ಅಭ್ಯಾಸ ಪಂದ್ಯದಲ್ಲಿ ಸಹಾಯಕ ಕೋಚ್ ರಿಯಾನ್ ಟೆನ್ ಡೋಸೆಟ್, ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಮತ್ತು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮೇಲ್ವಿಚಾರಣೆಯಲ್ಲಿ ಪಂದ್ಯ ನಡೆದಿತ್ತು.
ಗೌತಮ್ ಗಂಭೀರ್ ಮತ್ತೆ ಭಾರತ ತಂಡ ಸೇರುವುದು ಕೊಂಚ ತಡವಾಗಲಿದೆ ಹೀಗಾಗಿ ಮೊದಲ ಟೆಸ್ಟ್‌ಗೆ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಅವರು ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿತ್ತು. ಅಲ್ಲದೆ ಲಕ್ಷ್ಮಣ್ ಕೂಡ ಲಂಡನ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಗಂಭೀರ್ ತಾಯಿ ಆರೋಗ್ಯವಾದ ನಿಟ್ಟಿನಲ್ಲಿ ಲಂಡನ್‌ಗೆ ತೆರಳಿ ಅವರೇ ಕೋಚಿಂಗ್ ನಡೆಸಲಿದ್ದಾರೆ.
ಇದನ್ನೂ ಓದಿ IND vs ENG Test: ಇಂಗ್ಲೆಂಡ್-ಭಾರತ ಟೆಸ್ಟ್ ಸರಣಿಗೆ ನನ್ನ ಹೆಸರು ಬೇಡ ಎಂದ ಸಚಿನ್
ಕೆಂಟ್ ಕೌಂಟಿ ಮೈದಾನದಲ್ಲಿ ನಡೆದಿದ್ದ ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ಭಾರತ ತಂಡದ ಕೆ.ಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಶಾರ್ದೂಲ್ ಠಾಕೂರ್ ಉತ್ತಮ ಪ್ರದರ್ಶನ ತೋರಿದ್ದರು. ಆದರೆ ಪ್ರಧಾನ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಸಿರಾಜ್ ಕಳಪೆ ಪ್ರದರ್ಶನ ತೋರಿದ್ದರು. ಇದು ಸರಣಿ ಆರಂಭಕ್ಕೂ ಮುನ್ನ ಕಳವಳ ಉಂಟುಮಾಡಿದೆ.