ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಿಂಬಡ್ತಿ ಪಡೆಯಲು ಕಾರಣವೇನು?
ಫೆಬ್ರವರಿ 10 ರಂದು ಮಂಗಳವಾರ ಬಿಸಿಸಿಐ ತನ್ನ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದ್ದು, ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರೂ ಭಾರಿ ಹಿನ್ನಡೆಯನ್ನು ಅನುಭವಿಸಿದ್ದಾರೆ. ʻಎ+ʼ ಗ್ರೇಡ್‌ನಿಂದ ಬಿ ಗ್ರೇಡ್‌ಗೆ ಈ ಇಬ್ಬರೂ ಹಿಂಬಡ್ತಿ ಪಡೆದಿದ್ದಾರೆ. ಆ ಮೂಲಕ ಇವರ ಸಂಬಳದಲ್ಲಿ ಶೇ 57 ರಷ್ಟು ಕಡಿತವಾಗಿದೆ.
ಎ+ ಗ್ರೇಡ್‌ನಲ್ಲಿ ಸ್ಥಾನ ಕಳೆದುಕೊಂಡ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ. -
ನವದೆಹಲಿ: ಆಧುನಿಕ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಅವರು ಫೆಬ್ರವರಿ 10 ರಂದು ಮಂಗಳವಾರ ಬಿಸಿಸಿಐ ಪ್ರಕಟಿಸಿದ 2025-26ರ ಸಾಲಿನ ಕೇಂದ್ರ ಗುತ್ತಿಗೆ (BCCI annual central contracts) ಪಟ್ಟಿಯಲ್ಲಿ ಭಾರಿ ಹಿನ್ನಡೆಯನ್ನು ಅನುಭವಿಸಿದ್ದಾರೆ. ʻಎ+ʼಗ್ರೇಡ್‌ನಿಂದ ಈ ಇಬ್ಬರೂ ʻಬಿʼ ಗ್ರೇಡ್‌ಗೆ ಹಿಂಬಡ್ತಿ ಪಡೆದಿದ್ದಾರೆ. ಇದರ ಪರಿಣಾಮವಾಗಿ ಕೊಹ್ಲಿ ಹಾಗೂ ರೋಹಿತ್ ಇಬ್ಬರ ಸಂಬಳದಲ್ಲಿ ಶೇ 57ರಷ್ಟು ಕಡಿತವಾಗಿದೆ. ಈ ಬದಲಾವಣೆಗೂ ಮುನ್ನ ದೀರ್ಘಾವಧಿ ಕಾಲ ಜಸ್‌ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಅವರೊಂದಿಗೆ ಕೊಹ್ಲಿ, ರೋಹಿತ್ ʻಎ+ʼ ದರ್ಜೆಯಲ್ಲಿದ್ದರು. ಇದೀಗ ಬುಮ್ರಾ ಹಾಗೂ ಜಡೇಜಾ ಕೂಡ ʻಎʼ ದರ್ಜೆಗೆ ಇಳಿದಿದ್ದಾರೆ. ಬುಮ್ರಾ ಹಾಗೂ ಜಡೇಜಾ ಜೊತೆಗೆ ಇದೀಗ ಶುಭಮನ್ ಗಿಲ್ ಎ ದರ್ಜೆಗೆ ಪ್ರಗತಿ ಕಂಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸೇರಿ ಒಟ್ಟು 7 ಮಂದಿ ಆಟಗಾರರು ಬಿ ದರ್ಜೆಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು 16 ಮಂದಿ ಆಟಗಾರರು ಸಿ ದರ್ಜೆಯಲ್ಲಿದ್ದಾರೆ. ನಿಗದಿತ ಅವಧಿಯಲ್ಲಿ ಅಗತ್ಯವಿರುವ ಕನಿಷ್ಠ ಸಂಖ್ಯೆಯ ಪಂದ್ಯಗಳನ್ನು ಅವರು ಪೂರೈಸಿದರೆ, ಹೆಚ್ಚಿನ ಆಟಗಾರರಿಗೂ ಅನುಪಾತದ ಆಧಾರದ ಮೇಲೆ ಗ್ರೇಡ್ ನೀಡಬಹದು.
ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ ಪ್ರಕಟ: ಕೊಹ್ಲಿ, ರೋಹಿತ್‌ಗೆ ಹಿಂಬಡ್ತಿ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಿಂಬಡ್ತಿ ಪಡೆಯಲು ಕಾರಣವೇನು?
ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಪಾಲಿಗೆ 2025-26 ಮೊದಲ ಸೀಸನ್ (2025 ಅಕ್ಟೋಬರ್ 1 ರಿಂದ 2026ರ ಸೆಪ್ಟಂಬರ್ 31) ಆಗಿದೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸದ್ಯ 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ಈಗಾಗಲೇ ಈ ಇಬ್ಬರೂ ವಿದಾಯ ಹೇಳಿದ್ದಾರೆ. ಬಿಸಿಸಿಐನ ಅಗ್ರ ದರ್ಜೆಯಲ್ಲಿ ಸ್ಥಾನ ಪಡೆಯಲು ಅಗತ್ಯವಾದ ಮಾನದಂಡಗಳನ್ನು ಇವರು ಹೊಂದಿಲ್ಲ. ಈ ಕಾರಣದಿಂದಲೇ ಕೊಹ್ಲಿ ಮತ್ತು ರೋಹಿತ್ ಶರ್ಮಾ ʻಬಿʼ ದರ್ಜೆಗೆ ಇಳಿದಿದ್ದಾರೆ.
ಇದಕ್ಕೂ ಮುನ್ನ ರೋಹಿತ್, ವಿರಾಟ್ ಅವರು ಒಂದು ವರ್ಷಕ್ಕೆ 7 ಕೋಟಿ ರು. ಗಳನ್ನು ಪಡೆಯುತ್ತಿದ್ದರು. ಇದೀಗ ಅವರು 3 ಕೋಟಿ ರು. ಗಳನ್ನು ಪಡೆಯಲಿದ್ದಾರೆ. ಇದರರ್ಥ ಅವರ ವಾರ್ಷಕ ಸಂಬಳದಲ್ಲಿ 4 ಕೋಟಿ ರು. ಗಳು ಕಡಿತವಾಗಿದೆ.
ಪಾಕ್ ಯೂಟರ್ನ್?; ಭಾರತ ಜತೆ ಟಿ20 ಪಂದ್ಯದ ಕುರಿತು ಇಂದು ಘೋಷಣೆ?
2025-26ರ ಸಾಲಿನ ಬಿಸಿಸಿಐ ಪುರುಷರ ವಾರ್ಷಿಕ ಗುತ್ತಿಗೆ ಪಟ್ಟಿ
ಎ+ (ವರ್ಷಕ್ಕೆ 7 ಕೋಟಿ ರು. ಗಳು) : ಯಾರೂ ಇಲ್ಲ
ಎ (ವರ್ಷಕ್ಕೆ 5 ಕೋಟಿ ರು. ಗಳು) : ರವೀಂದ್ರ ಜಡೇಜಾ, ಶುಭಮನ್ ಗಿಲ್, ಜಸ್‌ಪ್ರೀತ್ ಬುಮ್ರಾ
ಬಿ (ವರ್ಷಕ್ಕೆ 3 ಕೋಟಿ ರು. ಗಳು) : ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ
ಸಿ (ವರ್ಷಕ್ಕೆ ಒಂದು ಕೋಟಿ ರು. ಗಳು) : ಅಕ್ಷರ್ ಪಟೇಲ್, ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಪ್ರಸಿಧ್ ಕೃಷ್ಣ, ಆಕಾಶ್ ದೀಪ್, ಧ್ರುವ್ ಜುರೆಲ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ, ಸಾಯ್ ಸುದರ್ಶನ್, ರವಿ ಬಿಷ್ಣೋಯ್, ಋತುರಾಜ್ ಗಾಯಕ್ವಾಡ್
ಅಂಡರ್-19 ವಿಶ್ವಕಪ್ ಗೆದ್ದ ನಾಯಕ ಆಯುಷ್ ಮ್ಹಾತ್ರೆಗೆ ವಿಶೇಷ ಉಡುಗೊರೆ ನೀಡಿದ ಸಚಿನ್
ಎ+ ದರ್ಜೆಯನ್ನು ತೆಗೆಯಲು ಕಾರಣವೇನು?
ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ʻಎ+ʼ ದರ್ಜೆಯಲ್ಲಿ ತೆಗೆಯಲು ಕಾರಣವೇನೆಂದು ಬಿಸಿಸಿಐನ ಯಾವುದೇ ಅಧಿಕಾರಿ ಈ ಬಗ್ಗೆ ಮಾಹಿತಿ ನೀಡಿಲ್ಲ. ಕಳೆದ ತಿಂಗಳು ನಡೆದಿದ್ದ ಸಂವಾದದಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾತನಾಡುತ್ತಾ, ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಆಡಬಲ್ಲ ಆಟಗಾರರು ಈಗ ಲಭ್ಯವಿಲ್ಲ ಎಂದು ಹೇಳಿದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಟಿ20ಐ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ನಿರ್ಧಾರವನ್ನು ಉಲ್ಲೇಖಿಸಿ, ಇನ್ನು ಆಲ್-ಫಾರ್ಮ್ಯಾಟ್ ಸ್ಟಾರ್‌ಗಳು ಉಳಿದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದರು.