ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs SL 1st test: ಮಾನವ್‌ ಸುತಾರ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಕಾಶ್‌ ಚೋಪ್ರಾ!

IND vs SL: ಯುವ ಸ್ಪಿನ್ನರ್ ಮಾನವ್ ಸುತಾರ್ ಅವರು ಭವಿಷ್ಯದಲ್ಲಿ ರವೀಂದ್ರ ಜಡೇಜಾ ಅವರ ದೀರ್ಘಕಾಲೀನ ಉತ್ತರಾಧಿಕಾರಿಯಾಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮಾಜಿ ಟೆಸ್ಟ್‌ ಆರಂಭಿಕ ಆಕಾಶ್‌ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಸುತಾರ್ ಅವರ ಬೌಲಿಂಗ್ ಈಗಾಗಲೇ ಜಡೇಜಾ ಅವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ ನೀಡುತ್ತಿದ್ದ ಪ್ರದರ್ಶನಕ್ಕಿಂತಲೂ ಸುಧಾರಿತ ರೂಪದಲ್ಲಿದೆ ಎಂದು ಚೋಪ್ರಾ ಹೇಳಿದ್ದಾರೆ.

ಮಾನವ್‌ ಸುತಾರ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಕಾಶ್‌ ಚೋಪ್ರ!

ಮಾನವ್‌ ಸುತಾರ್‌ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಕಾಶ್‌ ಚೋಪ್ರಾ. -

Profile
Ramesh Kote Aug 18, 2026 2:33 PM

ಗಾಲೆ: ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ (Manav Suthar) ಅವರ ಟೆಸ್ಟ್ ಕ್ರಿಕೆಟ್‌ನಲ್ಲಿನ ವೇಗದ ಬೆಳವಣಿಗೆಗೆ ಮಾಜಿ ಭಾರತ ಟೆಸ್ಟ್‌ ತಂಡದ ಮಾಜಿ ಆರಂಭಿಕ ಆಕಾಶ್ ಚೋಪ್ರಾ (Aakash Chopra) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭವಿಷ್ಯದಲ್ಲಿ ಸುತಾರ್ ಅವರು ರವೀಂದ್ರ ಜಡೇಜಾ (Ravindra Jadeja) ಅವರ ಸ್ಥಾನವನ್ನು ತುಂಬಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಾನವ್‌ ಸುತಾರ್‌ ಅವರು ಜಡೇಜಾ ಅವರ ‘ಅಪ್‌ಗ್ರೇಡ್ ವರ್ಷನ್’ ಎಂದು ಬಣ್ಣಿಸಿದ್ದಾರೆ.

ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ ಭಾರತದ ಮೊದಲ ಇನಿಂಗ್ಸ್‌ನಲ್ಲಿ 24 ವರ್ಷದ ಸತಾರ್ 76 ರನ್‌ಗಳಿಗೆ 4 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಈ ಪ್ರದರ್ಶನದ ಬಳಿಕ ಏಷ್ಯಾದ ಪಿಚ್‌ಗಳಲ್ಲಿ ಭಾರತ ತಂಡದ ಯೋಜನೆಗಳಲ್ಲಿ ಸುತಾರ್ ತಮ್ಮ ಸ್ಥಾನವನ್ನು ಈಗಾಗಲೇ ಭದ್ರಪಡಿಸಿಕೊಂಡಿದ್ದಾರೆಯೇ ಎಂದು ಚೋಪ್ರಾ ಅವರನ್ನು ಪ್ರಶ್ನೆ ಕೇಳಲಾಯಿತು.

“ನಾನು ಹೌದು ಎಂದು ಹೇಳುತ್ತೇನೆ. ಏಕೆಂದರೆ ಅವರು ಅತ್ಯಂತ ಬಲಿಷ್ಠ ಆಟಗಾರ. ಅವರು ಚೆಂಡನ್ನು ರಿಲೀಸ್‌ ಮಾಡುವಾಗ ಅದು ಡ್ರಿಫ್ಟ್ ಆಗುತ್ತದೆ, ಬೌನ್ಸ್ ಆಗುತ್ತದೆ ಮತ್ತು ತಿರುಗುತ್ತದೆ. ಬ್ಯಾಟರ್ ರಕ್ಷಣಾತ್ಮಕವಾಗಿ ಆಡುತ್ತಿದ್ದರೂ ಅವರು ವಿಕೆಟ್ ಪಡೆಯುತ್ತಾರೆ,” ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ʻನನ್ನನ್ನು ಉಳಿಸಿದ್ದಕ್ಕಾಗಿ ನಿಮಗೆ ಧನ್ಯವಾದʼ: ದೇವದತ್‌ ಪಡಿಕ್ಕಲ್‌ರನ್ನು ಅಪ್ಪಿಕೊಂಡ ಕೆಎಲ್‌ ರಾಹುಲ್‌!

“ರಕ್ಷಣಾತ್ಮಕವಾಗಿ ಆಡುತ್ತಿರುವ ಎದುರಾಳಿ ಬ್ಯಾಟರ್‌ ಅನ್ನೂ ಪದೇ-ಪದೇ ಸಂಕಷ್ಟಕ್ಕೆ ಸಿಲುಕಿಸುವ ಸಾಮರ್ಥ್ಯ ಇವರಲ್ಲಿದೆ ಹಾಗೂ ಈ ಆಟಗಾರನಲ್ಲಿ ಅಂಥಾ ವಿಶೇಷ ಸಾಮರ್ಥ್ಯವಿದೆ ಎಂಬುದು ಸ್ಪಷ್ಟವಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ.

“ಇದರ ಜೊತೆಗೆ ಅವರು ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಕೊಡುಗೆ ನೀಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ವಿದೇಶಿ ಪರಿಸ್ಥಿತಿಗಳಲ್ಲೂ ಅವರನ್ನು ತಂಡದ ಯೋಜನೆಯಲ್ಲಿ ಪರಿಗಣಿಸಬಹುದು. ರವೀಂದ್ರ ಜಡೇಜಾ ಒಂದು ಹಂತದಲ್ಲಿ ತಂಡದಿಂದ ಹೊರನಡೆಯಲಿದ್ದಾರೆ; ಆಗ ಅವರಂತಹ ಆಟಗಾರನ ಅಗತ್ಯವಿರುತ್ತದೆ. ಆದ್ದರಿಂದ ನಾನು ಸುತಾರ್ ಅವರನ್ನು ಜಡೇಜಾ ಅವರ ಉತ್ತರಾಧಿಕಾರಿಯಾಗಿ ನೋಡುತ್ತಿದ್ದೇನೆ. ನಾನು ಅವರನ್ನು ಕೇವಲ ಬೌಲರ್ ಆಗಿ ನೋಡಿದರೆ, ಅವರು ಜಡೇಜಾ ಅವರ ಅಪ್‌ಗ್ರೇಡ್ ವರ್ಷನ್ ಎಂದು ಹೇಳುತ್ತೇನೆ,” ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

IND vs SL: ಶ್ರೀಲಂಕಾ 284ಕ್ಕೆ ಆಲ್‌ಔಟ್‌, ಭಾರತ ತಂಡಕ್ಕೆ ದೊಡ್ಡ ಮುನ್ನಡೆ!

ರವೀಂದ್ರ ಜಡೇಜಾ ಸ್ಥಾನಕ್ಕೆ ಮಾನನ್‌ ಸುತಾರ್‌?

ಗಾಲೆಯಲ್ಲಿ ಮಾನವ್ ಸುತಾರ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ, ಅವರನ್ನು ರವೀಂದ್ರ ಜಡೇಜಾ ಅವರ ಉತ್ತರಾಧಿಕಾರಿಯಾಗಿ ನೋಡಬಹುದು ಎಂಬ ಆಕಾಶ್ ಚೋಪ್ರಾ ಅವರ ಅಭಿಪ್ರಾಯಕ್ಕೆ ಮತ್ತಷ್ಟು ಬಲ ನೀಡಿದೆ.

ಇನಿಂಗ್ಸ್‌ನ ಮೊದಲ ಎಸೆತದಲ್ಲೇ ದಿನೇಶ್ ಚಾಂಡಿಮಲ್ ಅವರನ್ನು ಔಟ್ ಮಾಡಿದ ಸುತಾರ್, ಬಳಿಕ ಲಹಿರು ಉದಾರಾ ಅವರ ವಿಕೆಟ್ ಕೂಡ ಪಡೆದರು. ಚೆಂಡಿನ ಫ್ಲೈಟ್, ಡಿಪ್, ಟರ್ನ್ ಮತ್ತು ಬೌನ್ಸ್ ಮೂಲಕ ಶ್ರೀಲಂಕಾ ಬ್ಯಾಟರ್‌ಗಳ ಮೇಲೆ ನಿರಂತರ ಒತ್ತಡ ಹೇರಿದರು.

ಅಂತಿಮವಾಗಿ ಸುತಾರ್ ನಾಲ್ಕು ವಿಕೆಟ್ ಪಡೆದಿದ್ದು, ಭಾರತದ ಬೌಲರ್‌ಗಳು ಶ್ರೀಲಂಕಾವನ್ನು 284 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದರೊಂದಿಗೆ ಭಾರತಕ್ಕೆ ಮೊದಲ ಇನಿಂಗ್ಸ್‌ನಲ್ಲಿ 178 ರನ್‌ಗಳ ಭರ್ಜರಿ ಮುನ್ನಡೆ ದೊರೆಯಿತು. ಇದಕ್ಕೂ ಮೊದಲು ಮೊಹಮ್ಮದ್ ಸಿರಾಜ್ ತಮ್ಮ ಎರಡನೇ ಎಸೆತದಲ್ಲೇ ನಿಶಾನ್ ಫೆರ್ನಾಂಡೊ ಅವರನ್ನು ಔಟ್ ಮಾಡಿದ್ದರು. ಕುಲ್‌ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಕೂಡ ತಲಾ ವಿಕೆಟ್ ಪಡೆದು ಬೌಲಿಂಗ್ ವಿಭಾಗಕ್ಕೆ ಕೊಡುಗೆ ನೀಡಿದರು.

IND vs SL: ಕಮಿಂದು ಮೆಂಡಿಸ್‌ರ ಸ್ಟನಿಂಗ್‌ ಕ್ಯಾಚ್‌ ಪಡೆದ ಶುಭಮನ್‌ ಗಿಲ್‌! ವಿಡಿಯೊ

ವಿದೇಶಿ ಪಿಚ್‌ಗಳಲ್ಲೂ ಉಪಯುಕ್ತ ಆಟಗಾರ

ಸುತಾರ್ ಕೇವಲ ಏಷ್ಯಾದ ಸ್ಪಿನ್ ಸ್ನೇಹಿ ಪಿಚ್‌ಗಳಿಗೆ ಮಾತ್ರ ಸೂಕ್ತವಾಗುವುದಿಲ್ಲ ಹಾಗೂ ಅವರ ಬ್ಯಾಟಿಂಗ್‌ ಸಾಮರ್ಥ್ಯ ಹೇಳಿದ್ದಾರೆ. ಅವರ ಬ್ಯಾಟಿಂಗ್ ಸಾಮರ್ಥ್ಯವೂ ಭಾರತಕ್ಕೆ ವಿದೇಶಿ ಪರಿಸ್ಥಿತಿಗಳಲ್ಲಿ ಹೆಚ್ಚಿನ ಆಯ್ಕೆಗಳನ್ನು ನೀಡಬಹುದು ಎಂಬುದು ಚೋಪ್ರಾ ಅವರ ಅಭಿಪ್ರಾಯ.

“ಸುತಾರ್ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅವರು ತಾವು ಉತ್ತಮ ಆಟಗಾರ ಎಂದು ನಿರಂತರವಾಗಿ ಸಾಬೀತುಪಡಿಸುತ್ತಿದ್ದಾರೆ. ಅವರು ಶ್ರೀ ಗಂಗಾನಗರದಿಂದ ಬಂದವರು. ಅದು ದೊಡ್ಡ ಕ್ರಿಕೆಟ್ ಕೇಂದ್ರವಲ್ಲ,” ಎಂದು ಚೋಪ್ರಾ ಹೇಳಿದ್ದಾರೆ.

“ಅಂತಹ ಸ್ಥಳದಿಂದ ಬಂದು ದೀರ್ಘ ಮಾದರಿಯ ಕ್ರಿಕೆಟ್ ಮೇಲೆ ಗಮನ ಕೇಂದ್ರೀಕರಿಸಿ ನಿರಂತರವಾಗಿ ವಿಕೆಟ್ ಪಡೆಯುವುದು ಗಮನಾರ್ಹ. ದುಲೀಪ್ ಟ್ರೋಫಿ, ಭಾರತ ‘ಎ’ ನಂತರ ಭಾರತ ತಂಡ, ಹೀಗೆ ಹಂತ ಹಂತವಾಗಿ ಮುನ್ನಡೆದಿದ್ದಾರೆ. ತಮ್ಮ ಮೊದಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವುದು ಅವರ ಸಾಮರ್ಥ್ಯವನ್ನು ತೋರಿಸುತ್ತದೆ,” ಎಂದು ಅವರು ಹೇಳಿದ್ದಾರೆ.