IND vs SL 1st Test Day 4: ಭಾರತ ತಂಡ 193ಕ್ಕೆ ಆಲ್‌ಔಟ್, ಶ್ರೀಲಂಕಾ ತಂಡಕ್ಕೆ 372 ರನ್ ಗುರಿ!
IND vs SL 1st Test Day 4: ಆಸಿತಾ ಫೆರ್ನಾಂಡೊ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಭಾರತ ತಂಡ, ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 193 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಎದುರಾಳಿ ಶ್ರೀಲಂಕಾ ತಂಡಕ್ಕೆ 372 ರನ್‌ಗಳ ಸವಾಲುದಾಯಕ ಗುರಿಯನ್ನು ಟೀಮ್ ಇಂಡಿಯಾ ನೀಡಿದೆ. ಭಾರತದ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ (66 ರನ್) ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಗಾಲೆ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ ಅರ್ಧಶತಕ ಸಿಡಿಸಿದರು. -
ಗಾಲೆ: ರಿಷಭ್ ಪಂತ್ (Rishabh Pant) ಅರ್ಧಶತಕದ ಹೊರತಾಗಿಯೂ ಭಾರತ ತಂಡ, ಆಸಿತಾ ಪೆರ್ನಾಂಡೊ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿ ಮೊದಲನೇ ಟೆಸ್ಟ್ ಪಂದ್ಯದ (IND vs SL) ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 193 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ ಎದುರಾಳಿ ಶ್ರೀಲಂಕಾ ತಂಡಕ್ಕೆ 372 ರನ್‌ಗಳ ಸವಾಲುದಾಯಕ ಗುರಿಯನ್ನು ನೀಡಿದೆ. ಎರಡನೇ ಇನಿಂಗ್ಸ್‌ನಲ್ಲಿ ಪ್ರವಾಸಿಗರು ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆದರೂ ಪ್ರಥಮ ಇನಿಂಗ್ಸ್‌ನಲ್ಲಿನ ಮುನ್ನಡೆ ಗಿಲ್ ಪಡೆಗೆ ನೆರವು ನೀಡಿತು.
ಮಂಗಳವಾರ ಇಲ್ಲಿನ ಗಾಲೆ ಇಂಟರ್‌ನ್ಯಾನಷಲ್ ಕ್ರೀಡಾಂಗಣದಲ್ಲಿ 178 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ತಂಡ ದೊಡ್ಡ ಮೊತ್ತವನ್ನು ಕಲೆ ಹಾಕಲು ಶ್ರೀಲಂಕಾ ಬೌಲರ್‌ಗಳು ಅವಕಾಶ ನೀಡಲಿಲ್ಲ. ರಿಷಭ್ ಪಂತ್ (66 ರನ್), ದೇವದತ್ ಪಡಿಕ್ಕಲ್ (44 ರನ್) ಹಾಗೂ ಕೆಎಲ್ ರಾಹುಲ್ (35 ರನ್) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಯಕ್ತಿಕ ಎರಡಂಕಿ ಮೊತ್ತವನ್ನು ದಾಟುವಲ್ಲಿ ವಿಫಲವಾದರು.
ʻನನ್ನನ್ನು ಉಳಿಸಿದ್ದಕ್ಕಾಗಿ ನಿಮಗೆ ಧನ್ಯವಾದʼ: ದೇವದತ್ ಪಡಿಕ್ಕಲ್‌ರನ್ನು ಅಪ್ಪಿಕೊಂಡ ಕೆಎಲ್ ರಾಹುಲ್!
ಆಸಿತಾ ಫೆರ್ನಾಂಡೊ ಮಾರಕ ಬೌಲಿಂಗ್ ದಾಳಿ
ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ನೆರವು ನೀಡಿದ್ದ ಪಿಚ್ ದ್ವಿತೀಯ ಇನಿಂಗ್ಸ್‌ನಲ್ಲಿ ವಿಶೇಷವಾಗಿ ನಾಲ್ಕನೇ ದಿನ ಬ್ಯಾಟಿಂಗ್‌ಗೆ ನೆರವು ನೀಡಲಿಲ್ಲ. ವಿಶೇಷವಾಗಿ ಲಂಕಾ ಬೌಲರ್‌ಗಳು ಮೇಲುಗೈ ಸಾಧಿಸಿದರು. ಆಶಿತಾ ಫೆರ್ನಾಂಡೊ ನಾಲ್ಕು ವಿಕೆಟ್‌ಗಳ ಸಾಧನೆ ಮಾಡಿದರೆ, ಪ್ರಭತ್ ಜಯಸೂರ್ಯ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಇದರ ಫಲವಾಗಿ ಶ್ರೀಲಂಕಾ, ಭಾರತವನ್ನು ಎರಡನೇ ಇನಿಂಗ್ಸ್‌ನಲ್ಲಿ ಬಹುಬೇಗ ಆಲ್‌ಔಟ್ ಮಾಡಲು ನೆರವು ನೀಡಿದರು. ಅಲ್ಲದೆ, ಭಾರತದ ಪರ ಯಶಸ್ವಿ ಜೈಸ್ವಾಲ್, ನಾಯಕ ಶುಭಮನ್ ಗಿಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ ಹಾಗೂ ಮಾನವ್ ಸುತಾರ್ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದರು.
Innings break!
— BCCI (@BCCI) August 18, 2026
Rishabh Pant top-scores with 66(69) in the 2nd innings as #TeamIndia set a target of 3⃣7⃣2⃣ for Sri Lanka!
Over to our bowlers 💪
Scorecard ▶️ https://t.co/M9LVyCAp8y#SLvIND pic.twitter.com/FAKQofDM5i
ರಿಷಭ್ ಪಂತ್ ನಿರ್ಣಾಯಕ ಅರ್ಧಶತಕ
ಭಾರತ ತಂಡದ ಪರ ನಾಲ್ಕನೇ ದಿನ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದು ರಿಷಭ್ ಪಂತ್. ಎಂದಿನಂತೆ ತಮ್ಮ ನೈಜ ಶೈಲಿಯಲ್ಲಿ ಬ್ಯಾಟ್ ಬೀಸಿದ ಪಂತ್, ನೆರೆದಿದ್ದ ಅಭಿಮಾನಿಗಳನ್ನು ಭರ್ಜರಿಯಾಗಿ ರಂಜಿಸಿದರು. ಅವರು ಆಡಿದ 69 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 66 ರನ್‌ಗಳನ್ನು ಬಾರಿಸಿದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವು ನೀಡಿದರು. ಇದಕ್ಕೂ ಮುನ್ನ ಕನ್ನಡಿಗರಾದ ಕೆಎಲ್ ರಾಹುಲ್ 35 ರನ್ ಹಾಗೂ ದೇವದತ್ ಪಡಿಕ್ಕಲ್ 44 ರನ್‌ಗಳನ್ನು ದಾಖಲಿಸಿದ್ದರು.
IND vs SL: ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಕನ್ನಡಿಗ ದೇವದತ್ ಪಡಿಕ್ಕಲ್!
284 ರನ್‌ಗೆ ಆಲ್‌ಔಟ್ ಆಗಿದ್ದ ಶ್ರೀಲಂಕಾ
ಇದಕ್ಕೂ ಮುನ್ನ ಪ್ರಥಮ ಇನ ಇನಿಂಗ್ಸ್‌ನಲ್ಲಿ ಆತಿಥೇಯ ಶ್ರೀಲಂಕಾ ತಂಡ 284 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಸೋನಲ್ ದಿನುಷಾ ಶತಕ ಹಾಗೂ ನಿರೋಶನ್ ಡಿಕ್ವೆಲ್ಲಾ ಅವರು 80 ರನ್‌ಗಳನ್ನು ಗಳಿಸಿದ್ದರು. ಭಾರತದ ಪರ ಮಾನವ್ ಸುತಾರ್ 4 ವಿಕೆಟ್ ಕಿತ್ತಿದ್ದರೆ, ರವೀಂದ್ರ ಜಡೇಜಾ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.
462 ರನ್ ಕಲೆ ಹಾಕಿದ್ದ ಟೀಮ್ ಇಂಡಿಯಾ
ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿದ್ದ ಭಾರತ ತಂಡ, ದೇವದತ್ ಪಡಿಕ್ಕಲ್ (167 ರನ್) ಅವರ ಶತಕದ ಬಲದಿಂದ ಪ್ರಥಮ ಇನಿಂಗ್ಸ್‌ನಲ್ಲಿ 462 ರನ್‌ಗಳನ್ನು ಕಲೆ ಹಾಕಿತ್ತು. ಪಡಿಕ್ಕಲ್ ಅವರ ಚೊಚ್ಚಲ ಶತಕದ ಜೊತೆಗೆ ಕೆಎಲ್ ರಾಹುಲ್ ಅವರು 82 ರನ್ ಹಾಗೂ ಧ್ರುವ್ ಜುರೆಲ್ 51 ರನ್‌ಗಳನ್ನು ಕಲೆ ಹಾಕಿದ್ದರು.