ಕುಟುಂಬಕ್ಕೆ ಸಮಯ ನೀಡಲು ಬಡ್ತಿ ನಿರಾಕರಿಸಿದ ಉದ್ಯೋಗಿ: ರಿಯಲ್ ʼಫ್ಯಾಮಿಲಿ ಮ್ಯಾನ್ʼ ನಡೆಗೆ ನೆಟ್ಟಿಗರ ಮೆಚ್ಚುಗೆ
Viral News: ಇಲ್ಲೊಬ್ಬರು ಉದ್ಯೋಗದಲ್ಲಿ ಪ್ರಮೋಷನ್ ಸಿಕ್ಕರೂ ಕುಟುಂಬಕ್ಕಾಗಿ ಈ ಬಡ್ತಿಯನ್ನು ನಿರಾಕರಿಸಿದ್ದಾರೆ. ಉತ್ತಮ ಸಂಬಳ ದೊರಕುವ ಅವಕಾಶ ಸಿಕ್ಕರೂ ಆ ವ್ಯಕ್ತಿ ಕುಟುಂಬದ ಸಂತೋಷಕ್ಕಾಗಿ ನಿರಾಕರಿಸಿದ್ದು, ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ- -
ದೆಹಲಿ, ಏ. 30: ಆಧುನಿಕ ಯುಗದಲ್ಲಿ ಉದ್ಯೋಗ ಎಂಬುದು ಪ್ರತಿಯೊಬ್ಬರಿಗೂ ಅನಿವಾರ್ಯ. ಅದರಲ್ಲೂ ಉತ್ತಮ ಪ್ಯಾಕೇಜ್, ಹೆಚ್ಚು ಸೌಕರ್ಯ ಇರುವ ಉದ್ಯೋಗ ಪಡೆಯಲು ಹೆಚ್ಚಿನವರು ಬಯಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಉದ್ಯೋಗದಲ್ಲಿ ಪ್ರಮೋಷನ್ ಸಿಕ್ಕರೂ ಕುಟುಂಬಕ್ಕಾಗಿ ಬಡ್ತಿಯನ್ನು ನಿರಾಕರಿಸುವ ಮೂಲಕ ಮಾದರಿಯಾಗಿದ್ದಾರೆ. ಉತ್ತಮ ಸಂಬಳ ದೊರೆಯವ ಅವಕಾಶ ಸಿಕ್ಕರೂ ಅವರು ಕುಟುಂಬದ ಸಂತೋಷಕ್ಕಾಗಿ ಅವಕಾಶ ನಿರಾಕರಿಸಿದ್ದಾರೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದ್ದು ನೆಟ್ಟಿಗರು ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ವೃತ್ತಿಯ ಜತೆಗೆ ಕುಟುಂಬಕ್ಕೂ ಆದ್ಯತೆ ನೀಡುವುದು ಬಹಳ ಮುಖ್ಯ. ಅದೇ ರೀತಿ ಒಬ್ಬ ಉದ್ಯೋಗಿಗೆ, ಅವರ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಬೇಕಾದ ವೇಳೆಯಲ್ಲೇ ಉತ್ತಮ ಸಂಬಳ ಪಡೆಯುವ ಅವಕಾಶ ಸಿಕ್ಕಿದೆ. ಕೆಲಸಕ್ಕೆ ಆಯ್ಕೆಯಾದ ಕೆಲವೇ ದಿನದಲ್ಲಿ ಅವರು ತಮ್ಮ ಕೌಶಲ್ಯ ಪ್ರದರ್ಶಿಸಿ ಪ್ರತಿಭಾವಂತ ಎನಿಸಿಕೊಂಡರು. ಹೀಗಾಗಿ ಕಂಪನಿ ಅವರ ಶ್ರಮವನ್ನು ಗಮನಿಸಿ ಅವರಿಗೆ ಉನ್ನತ ಹುದ್ದೆ ಮತ್ತು ಸಂಬಳದ ಏರಿಕೆಯ ಆಫರ್ ನೀಡಿತು.
ಕಂಪನಿಯು ಈ ಉದ್ಯೋಗಿಗೆ 9.5/10 ಅಂಕಗಳನ್ನು ನೀಡಿದೆ. 4 ತಿಂಗಳೊಳಗೆ ಅವರು ಎಲ್ಲರ ನಿರೀಕ್ಷೆ ಮೀರಿದ್ದರು. ಒಂದು ವರ್ಷದ ಅವಧಿಗೆ ಇವರಿಗೆ 'ಎಕ್ಸೆಪ್ಷನಲ್ ಪರ್ಫಾರ್ಮರ್' ಅತ್ಯುತ್ತಮ ವರ್ಕರ್ ಎಂಬ ಆವಾರ್ಡ್ ನೀಡಿದೆ. ಹೀಗಾಗಿ ಕಂಪನಿಯು ಅವರಿಗೆ ಬಡ್ತಿ ಮತ್ತು ಸಂಬಳ ಹೆಚ್ಚಳದ ನಿರ್ಧಾರ ಮಾಡಿತು. ಆದರೆ ಉದ್ಯೋಗಿ ಇದನ್ನು ನಿರಾಕರಿಸಿದ್ದು ಕಂಪನಿಯ ಮುಖ್ಯಸ್ಥರೇ ಅಚ್ಚರಿಗೆ ಒಳಗಾಗಿದ್ದಾರೆ.
ವಿಡಿಯೊ ಮಾಡುತ್ತ ಮೈಮರೆತು ಚರಂಡಿಗೆ ಬಿದ್ದ ಯುವತಿ
ಪ್ರಮೋಷನ್ ಒಪ್ಪಿಕೊಂಡರೆ ಪ್ರಧಾನ ಕಚೇರಿಗೆ ಸ್ಥಳಾಂತರಿಸುವುದು, ಹೆಚ್ಚಿನ ಕೆಲಸ ತೆಗೆದುಕೊಳ್ಳುವುದು ಮತ್ತು ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯುವುದು ಅಗತ್ಯವಾಗಿತ್ತು. "ನನ್ನ ಪತ್ನಿಗೆ ಇತ್ತೀಚೆಗೆ ಹೆರಿಗೆಯಾಗಿದ್ದು, ಹೀಗಾಗಿ ಆಕೆಗೆ, ಚಿಕ್ಕ ಮಗುವಿಗೆ ಸಮಯ ನೀಡಬೇಕಾಗುತ್ತದೆ. ಪ್ರತಿದಿನ ಸಂಜೆ 5 ಗಂಟೆಗೆ ಮನೆಗೆ ತೆರಳಿ ಪತ್ನಿಗೆ ವಿಶ್ರಾಂತಿ ಪಡೆಯಲು ಅವಕಾಶ ನೀಡುತ್ತೇನೆ. ಈ ಸಮಯದಲ್ಲಿ ನಾನು ಮಗುವಿನ ಆರೈಕೆ ಮಾಡುತ್ತೇನೆ. ಈ ಕೆಲಸದ ಬಡ್ತಿ ಪಡೆದರೆ ನನಗೆ ಕುಟುಂಬಕ್ಕೆ ಸಮಯ ನೀಡಲು ಕಷ್ಟವಾಗುತ್ತದೆ. ಆದ್ದರಿಂದ ನಾನು ಇರುವ ಸ್ಥಳದಲ್ಲಿಯೇ ಇರಲು ಬಯಸುತ್ತೇನೆʼʼ ಎಂದಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ಸದ್ಯ ಈ ವಿಚಾರ ನೆಟ್ಟಿಗರ ಗಮನ ಸೆಳೆದಿದ್ದು, ಉದ್ಯೋಗಿಯ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಹೆಚ್ಚಿನವರು ನಿಮ್ಮ ಆಯ್ಕೆ ಸರಿಯಾಗಿದೆ. ನೀವು ಜವಾಬ್ದಾರಿಯುತ ಕೆಲಸಗಾರ ಎಂದಿದ್ದಾರೆ. ಇನ್ನೊಬ್ಬರು "ಬಡ್ತಿ ಎಂದರೆ ಹೆಚ್ಚು ಒತ್ತಡ, ಹೆಚ್ಚು ಸಮಯ ಅದು ಯೋಗ್ಯವಲ್ಲ" ಎಂದು ಹೇಳಿದ್ದಾರೆ.