ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಭಾರತದ ಡ್ರೆಸ್ಸಿಂಗ್‌ ರೂಂಗೆ ತೆರಳಿ ಶೇಕ್‌ ಹ್ಯಾಂಡ್‌ಗೆ ಪ್ರಯತ್ನಿಸಿದ್ದೆವುʼ: ಸಲ್ಮಾನ್‌ ಅಲಿ ಆಘಾ!

2025ರ ಏಷ್ಯಾ ಕಪ್‌ ಟೂರ್ನಿಯ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ಆಟಗಾರರು, ಭಾರತ ತಂಡದ ಡ್ರೆಸ್ಸಿಂಗ್‌ ರೂಂಗೆ ಹೋಗಿ ಹ್ಯಾಂಡ್‌ ಶೇಕ್‌ ಮಾಡಲು ಪ್ರಯತ್ನಿಸಿದ್ದರು. ಆದರೆ, ಡ್ರೆಸ್ಸಿಂಗ್‌ ರೂಂ ಬಾಗಿಲನ್ನು ಮುಚ್ಚಲಾಗಿತ್ತು ಎಂದು ಪಾಕ್‌ ನಾಯಕ ಸಲ್ಮಾನ್‌ ಅಲಿ ಆಘಾ ತಿಳಿಸಿದ್ದಾರೆ. 2025ರ ಏಷ್ಯಾ ಕಪ್‌ ಟೂರ್ನಿಯಿಂದ ಇಲ್ಲಿಯವರೆಗೂ ಭಾರತ-ಪಾಕ್‌ ಆಟಗಾರರು ಪಂದ್ಯದ ಸಮಯದಲ್ಲಿ ಹ್ಯಾಂಡ್‌ ಶೇಕ್‌ ಮಾಡುತಿಲ್ಲ.

ಭಾರತದ ಆಟಗಾರರ ಜತೆ ಶೇಕ್‌ ಹ್ಯಾಂಡ್‌ಗೆ ಪ್ರಯತ್ನಿಸಿದ್ದೆವು: ಆಘಾ!

ಭಾರತ-ಪಾಕ್‌ ಪಂದ್ಯದ ಹ್ಯಾಂಡ್‌ ಶೇಕ್‌ ವಿವಾದದ ಬಗ್ಗೆ ಸಲ್ಮಾಲ್‌ ಆಘಾ ಮಾತು. -

Profile
Ramesh Kote May 2, 2026 6:56 PM

ನವದೆಹಲಿ: ಕಳೆದ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ನಡೆದಿದ್ದ ಹ್ಯಾಂಡ್‌ ಶೇಕ್‌ ವಿವಾದದ ಮೊದಲ ಘಟನೆಯನ್ನು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ (Salman Ali Agha) ಅವರು ನೆನಪಿಸಿಕೊಂಡಿದ್ದಾರೆ. ಪಂದ್ಯದ ನಂತರದ ಔಪಚಾರಿಕತೆಗಾಗಿ ತಮ್ಮ ತಂಡದ ಆಟಗಾರರು ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ಗೆ ತೆರಳಿ, ಹ್ಯಾಂಡ್‌ ಶೇಕ್‌ ಮಾಡಲು ಪ್ರಯತ್ನಿಸಿದ್ದರು. ಆದರೆ, ಟೀಮ್‌ ಇಂಡಿಯಾದ ಡ್ರೆಸ್ಸಿಂಗ್‌ ರೂಂ ಅನ್ನು ಮುಚ್ಚಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಆದರೆ, ಹಿಂದಿನ ವರ್ಷ ನಡೆದಿದ್ದ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮೂರು ಬಾರಿ ಮುಖಾಮುಖಿಯಾಗಿದ್ದವು. ಆ ವೇಳೆ ಎರಡೂ ತಂಡಗಳ ನಡುವೆ ಹ್ಯಾಂಡ್‌ ಶೇಕ್‌ (No Handshake) ಮಾಡಬಾರದೆಂಬ ನೀತಿಯನ್ನು ಆರಂಭಿಸಲಾಗಿತ್ತು.

ಪಹಲ್ಗಾಮ್‌ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಣ ರಾಜಕೀಯ ಭಿನ್ನಭಿಪ್ರಾಯದ ಕಾರಣ ಸೂರ್ಯಕುಮಾರ್ ಯಾದವ್ ಮತ್ತು ಅವರ ತಂಡ ಈ ರೀತಿಯ ನಿಲುವನ್ನು ಅನುಸರಿಸಿತ್ತು. ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಸಲ್ಮಾನ್‌ ಆಘಾ ಅವರು, ಟಾಸ್ ನಡೆಯುವ ಸ್ವಲ್ಪ ಸಮಯಕ್ಕೂ ಮೊದಲು ಮಾತ್ರ ಹ್ಯಾಂಡ್‌ ಶೇಕ್‌ ನಡೆಯುವುದಿಲ್ಲ ಎಂಬ ಮಾಹಿತಿ ತಮಗೆ ತಿಳಿಸಲಾಗಿತ್ತು ಎಂದು ರಿವೀಲ್‌ ಮಾಡಿದ್ದಾರೆ.

Women's T20 World Cup 2026: ಭಾರತ ಮಹಿಳಾ ತಂಡವನ್ನು ಪ್ರಕಟಿಸಿದ ಬಿಸಿಸಿಐ!

"ನಾನು ಟಾಸ್‌ಗೆ ಹೋಗಿದ್ದೆ. ಇದಕ್ಕೂ ಮುನ್ನ ಸುದ್ದಿಗೋಷ್ಠಿ ಇತ್ತು. ಈ ವೇಳೆ ಶೇಕ್‌ ಹ್ಯಾಂಡ್‌ ಇತ್ತು, ಟ್ರೋಫಿ ಶೂಟ್‌ ಹಾಗೂ ಇಲ್ಲಿಯೂ ಹ್ಯಾಂಡ್‌ ಶೇಕ್‌ ನಡೆದಿತ್ತು," ಎಂದು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಆಗಿರುವ ವಿಡಿಯೊದಲ್ಲಿ ತಿಳಿಸಿದ ಸಲ್ಮಾನ್‌ ಆಘಾ, "ನಾನು ಟಾಸ್‌ಗೆ ಹೋದಾಗ, ಎಲ್ಲವೂ ಸಾಮಾನ್ಯವಾಗಿತ್ತು. ಈ ಬಾರಿ ಸಂಗತಿಗಳು ಸಾಮಾನ್ಯವಾಗಿ ಇರುವುದಿಲ್ಲ ಎಂದು ನಾನು ಮೊದಲೇ ಅಂದುಕೊಂಡಿದ್ದೆ ಆದರೆ, ಹ್ಯಾಂಡ್‌ ಶೇಕ್‌ ಇರುವುದಿಲ್ಲ ಎಂದು ನನಗೆ ಯಾವುದೇ ಸುಳಿವು ಇರಲಿಲ್ಲ," ಎಂದು ತಿಳಿಸಿದ್ದಾರೆ.

IPL 2026: 200 ಸಿಕ್ಸರ್‌ಗಳ ಮೂಲಕ ದೊಡ್ಡ ದಾಖಲೆಯನ್ನು ಬರೆದ ಕೆಎಲ್‌ ರಾಹುಲ್‌!

ಡ್ರೆಸ್ಸಿಂಗ್‌ ರೂಂ ಮುಚ್ಚಲಾಗಿತ್ತು: ಸಲ್ಮಾನ್‌ ಆಘಾ

ಪಂದ್ಯದ ನಂತರ ಭಾರತ ತಂಡವನ್ನು ಅಭಿನಂದಿಸಲು ತಮ್ಮ ತಂಡದೊಂದಿಗೆ ಅವರ ಪೆವಿಲಿಯನ್‌ಗೆ (ಡ್ರೆಸ್ಸಿಂಗ್ ರೂಮ್) ತೆರಳಿದರೂ, ಬಾಗಿಲು ಮುಚ್ಚಲ್ಪಟ್ಟ ಸ್ಥಿತಿಯಲ್ಲಿತ್ತು ಎಂದು ಸಲ್ಮಾನ್‌ ಆಘಾ ಅವರು ಹೇಳಿದ್ದಾರೆ.



“ಇದಾದ ನಂತರ ಪಂದ್ಯ ಮುಕ್ತಾಯವಾಯಿತು. ನಾವು ಪಂದ್ಯವನ್ನು ಸೋತಿದ್ದೆವು. ಹ್ಯಾಂಡ್‌ಶೇಕ್‌ ಮಾಡಲು ನಾವು ಅವರ ಪೆವಿಲಿಯನ್‌ಗೆ ಹೋಗುತ್ತಿದ್ದೆವು. ಆದರೂ ಅವರು ಹ್ಯಾಂಡ್‌ ಶೇಕ್‌ ಮಾಡಲಿಲ್ಲ,” ಎಂದು ಅಘಾ ಹೇಳಿದ್ದಾರೆ.

ಅಫ್ಘಾನಿಸ್ತಾನ ಸರಣಿ, ಇಂಗ್ಲೆಂಡ್‌ ಪ್ರವಾಸದಿಂದ ಹರ್ಷಿತ್‌ ರಾಣಾ, ಆಕಾಶ್‌ ದೀಪ್ ಔಟ್‌?

“ನಾನು ಇದನ್ನು ಹಲವು ಬಾರಿ ಹೇಳಿದ್ದೇನೆ, ಇದು ಸರಿಯೆಂದು ನಾನು ಭಾಸುವುದಿಲ್ಲ,” ಎಂದು ಅಘಾ ಒತ್ತಿ ಹೇಳಿದ್ದಾರೆ. “ಏಕೆಂದರೆ ನಾವು ಒಂದು ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದೇವೆ, ನಾನು ಪಾಕಿಸ್ತಾನದ ಪರವಾಗಿ ಆಡುತ್ತೇನೆ, ಜನರು ನನ್ನನ್ನು ನೋಡುತ್ತಾರೆ ಮತ್ತು ಮಕ್ಕಳು ಅದನ್ನು ಅನುಸರಿಸುತ್ತಾರೆ. ಇದು ಮುಂದಿನ ದಿನ ಕ್ಲಬ್ ಪಂದ್ಯಗಳಲ್ಲಿ ನಡೆದರೆ, ಅಂತಿಮವಾಗಿ ಅದರ ಹೊಣೆ ನನ್ನ ಮೇಲೂ ಬರುತ್ತದೆ, ಏಕೆಂದರೆ ನಾನು ಕೂಡ ಅದರ ಭಾಗವಾಗಿದ್ದೇನೆ. ಆದ್ದರಿಂದ ನೀವು ಒಂದು ಮಾದರಿಯಾಗಿರುವಾಗ, ಇದನ್ನು ಮಾಡುವುದು ಒಳ್ಳೆಯದಲ್ಲ ಎಂದು ನಾನು ಭಾವಿಸುತ್ತೇನೆ.” ಎಂದರು.