ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CSK vs RCB: ಆರ್‌ಸಿಬಿ-ಚೆನ್ನೈ ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೀಗಿದೆ

ಮಾರ್ಚ್‌ 28 ರಂದು ಚೆನ್ನೈನಲ್ಲಿ ಮಳೆ ಸಾಧ್ಯತೆ ಇಲ್ಲ. ಆದರೆ ತಾಪಮಾನವು 26 ರಿಂದ 27 ಡಿಗ್ರಿಗಳವರೆಗೆ ಇರಲಿದೆ ಎಂದು ಹವಾಮಾನ ತಿಳಿಸಿದೆ. ರಾತ್ರಿಯ ವೇಳೆ ಕೊಂಚ ಇಬ್ಬನಿ ಕಾಟ ಕೂಡ ಇರುವ ಸಾಧ್ಯತೆ ಇದೆ.

ಆರ್‌ಸಿಬಿ-ಚೆನ್ನೈ ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೀಗಿದೆ

Profile Abhilash BC Mar 27, 2025 2:49 PM

ಚೆನ್ನೈ: ಐಪಿಎಲ್‌ನ(IPL 2025) ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(CSK vs RCB) ನಾಳೆ(ಶುಕ್ರವಾರ) ಸೆಣಸಾಟ ನಡೆಸಲಿದೆ. ಈ ಪಂದ್ಯಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ(M. A. Chidambaram Stadium) ಅಣಿಯಾಗಿದೆ. ಇತ್ತಂಡಗಳ ಈ ಪಂದ್ಯದ ಪಿಚ್‌ ರಿಪೋಟ್‌, ಹವಾಮಾನ, ಮತ್ತು ಮುಖಾಮುಖಿ ದಾಖಲೆ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಿಚ್‌ ರಿಪೋರ್ಟ್‌

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನ ಪಿಚ್ ಸ್ಪಿನ್ನರ್‌ಗಳಿಗೆ ಸ್ವರ್ಗ ಎಂದು ಪರಿಗಣಿಸಲಾಗಿದೆ. ಈ ಮೈದಾನದಲ್ಲಿ ಸ್ಪಿನ್ನರ್‌ಗಳಿಗೆ ಸಾಕಷ್ಟು ನೆರವು ಸಿಗುತ್ತದೆ. ಕಳೆದ ಐಪಿಎಲ್​ನಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 170 ರನ್ ಆಗಿತ್ತು. ಪಂದ್ಯ ಸಾಗಿದಂತೆ ಪಿಚ್​ನಲ್ಲಿ ಬದಲಾವಣೆ ಕಂಡುಬರುವುದರಿಂದ ಇಲ್ಲಿ ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್‌ ನಡೆಸಿದರ ಸೂಕ್ತ. ಇಲ್ಲಿ ನಡೆದ ಹೆಚ್ಚಿನ ಪಂದ್ಯಗಳಲ್ಲಿ ಚೇಸಿಂಗ್‌ ಮಾಡಿದ ತಂಡಕ್ಕೆ ಗೆಲುವಿಗಿಂತ ಹೆಚ್ಚಾಗಿ ಸೋಲು ಎದುರಾಗಿದೆ.

ಹವಾಮಾನ ವರದಿ

ಮಾರ್ಚ್‌ 28 ರಂದು ಚೆನ್ನೈನಲ್ಲಿ ಮಳೆ ಸಾಧ್ಯತೆ ಇಲ್ಲ. ಆದರೆ ತಾಪಮಾನವು 26 ರಿಂದ 27 ಡಿಗ್ರಿಗಳವರೆಗೆ ಇರಲಿದೆ ಎಂದು ಹವಾಮಾನ ತಿಳಿಸಿದೆ. ರಾತ್ರಿಯ ವೇಳೆ ಕೊಂಚ ಇಬ್ಬನಿ ಕಾಟ ಕೂಡ ಇರುವ ಸಾಧ್ಯತೆ ಇದೆ.



ಮುಖಾಮುಖಿ

ಆರ್‌ಸಿಬಿ ಮತ್ತು ಚೆನ್ನೈ ತಂಡ ಚೆಪಾಕ್‌ ಸ್ಟೇಡಿಯಂನಲ್ಲಿ ಇದುವರೆಗೆ 9 ಪಂದ್ಯಗಳನ್ನು ಆಡಿದೆ. ಈ ಪೈಕಿ ಚೆನ್ನೈ ತಂಡ ಗರಿಷ್ಠ 8 ಪಂದ್ಯ ಗೆದ್ದಿದೆ. ಆರ್‌ಸಿಬಿ ಕೇವಲ ಒಂದು ಪಂದ್ಯ ಮಾತ್ರ ಜಯಿಸಿದೆ. ಒಟ್ಟಾರೆಯಾಗಿ ಐಪಿಎಲ್‌ನಲ್ಲಿ 33 ಪಂದ್ಯಗಳನ್ನು ಆಡಿದ್ದು ಚೆನ್ನೈ 21, ಆರ್‌ಸಿಬಿ 11 ಪಂದ್ಯ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

ಇದನ್ನೂ ಓದಿ IPL 2025 Points Table: ಕೆಕೆಆರ್‌ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

ಸಂಭಾವ್ಯ ತಂಡಗಳು

ಚೆನ್ನೈ ಸೂಪರ್‌ ಕಿಂಗ್ಸ್‌: ಋತುರಾಜ್ ಗಾಯಕ್ವಾಡ್(ನಾಯಕ), ರಚಿನ್ ರವೀಂದ್ರ, ದೀಪಕ್ ಹೂಡಾ, ಶಿವಂ ದುಬೆ, ರವೀಂದ್ರ ಜಡೇಜಾ, ಸ್ಯಾಮ್ ಕರನ್‌, ಎಂಎಸ್ ಧೋನಿ(ವಿ.ಕೀ), ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ನಾಥನ್ ಎಲ್ಲಿಸ್, ಖಲೀಲ್ ಅಹ್ಮದ್.

ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಪ್ ಸಾಲ್ಟ್ (ವಿ.ಕೀ.), ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ,ಸುಯಾಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್‌ ಕುಮಾರ್‌.