ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RR vs MI: ದುಬಾರಿ ಓವರ್‌ ಎಸೆದು ಅನಗತ್ಯ ದಾಖಲೆ ಬರೆದ ದೀಪಕ್‌ ಚಹಾರ್‌

Deepak Chahar: ರಾಜಸ್ಥಾನ ಕೇವಲ 2.4 ಓವರ್‌ಗಳಲ್ಲೇ ಅರ್ಧಶತಕ ಪೂರ್ಣಗೊಳಿಸಿದ್ದು, ಐಪಿಎಲ್‌ ಇತಿಹಾಸದಲ್ಲೇ 2ನೇ ಅತಿ ವೇಗದ ಅರ್ಧಶತಕ ಎನಿಸಿಕೊಂಡಿದೆ. 2011ರಲ್ಲಿ ಕೊಚ್ಚಿ ಟಸ್ಕರ್ಸ್‌ ಕೇರಳ ವಿರುದ್ಧ ಆರ್‌ಸಿಬಿ 2.3 ಓವರ್‌ಗಳಲ್ಲೇ ಅರ್ಧಶತಕ ಗಳಿಸಿದ್ದು ಈಗಲೂ ದಾಖಲೆ.

ಮೊದಲ ಓವರ್‌ನಲ್ಲೇ 22 ರನ್‌ ಬಿಟ್ಟಿಕೊಟ್ಟು ಅನಗತ್ಯ ದಾಖಲೆ ಬರೆದ ಚಹಾರ್‌

deepak chahar -

Abhilash BC
Abhilash BC Apr 8, 2026 8:51 AM

ಗುವಾಹಟಿ, ಎ.8: ಮಂಗಳವಾರ ರಾತ್ರಿ ಗುವಾಹಟಿಯಲ್ಲಿ ಮಳೆಯಿಂದ ಬಾಧಿತವಾದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ವಿರುದ್ಧ ಮುಂಬೈ ಇಂಡಿಯನ್ಸ್ (RR vs MI) ಸೋಲು ಕಂಡಿತು. ಈ ಪಂದ್ಯದಲ್ಲಿ ದುಬಾರಿ ಬೌಲಿಂಗ್‌ ನಡೆಸಿದ ದೀಪಕ್‌ ಚಹಾರ್‌(Deepak Chahar) ಅನಗತ್ಯ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಮೊದಲ ಓವರ್‌ನಲ್ಲಿ 22 ರನ್ ಗಳಿಸುವ ಮೂಲಕ ದೀಪಕ್ ಚಹಾರ್‌ಗೆ ದಂಡಿಸಿದರು. 22 ರನ್‌ ಬಿಟ್ಟುಕೊಟ್ಟ ಚಹಾರ್‌ ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಪರ ಅತ್ಯಂತ ದುಬಾರಿ ಮೊದಲ ಓವರ್ ಎಸೆದ ಬೌಲರ್‌ ಎಂಬ ಹಣೆಪಟ್ಟಿ ಕಟ್ಟಿಕೊಂಡರು.

ಪಂದ್ಯದಲ್ಲಿ ಟಾಸ್‌ ಗೆದ್ದ ಮುಂಬೈ ಬೌಲಿಂಗ್‌ ಆಯ್ದುಕೊಂಡಿತು. ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 11 ಓವರ್‌ಗಳಲ್ಲಿ 3 ವಿಕೆಟ್‌ಗೆ 150 ರನ್‌ ಗಳಿಸಿತು. ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್‌-ವೈಭವ್‌ ಸೂರ್ಯವಂಶಿ ಕೇವಲ 4.6 ಓವರ್‌ಗಳಲ್ಲಿ 80 ರನ್‌ ಜೊತೆಯಾಟವಾಡಿ ಭದ್ರಬುನಾದಿ ಹಾಕಿಕೊಟ್ಟಿತು. ವೈಭವ್‌ ಕೇವಲ 14 ಎಸೆತಗಳಲ್ಲಿ 39 ರನ್‌ ಸಿಡಿಸಿ ಔಟಾದರೆ, ಕೊನೆವರೆಗೂ ಅಬ್ಬರಿಸಿದ ಜೈಸ್ವಾಲ್‌ 32 ಎಸೆತಕ್ಕೆ ಔಟಾಗದೆ 77 ರನ್‌ ಚಚ್ಚಿದರು. ಗುರಿ ಬೆನ್ನತ್ತಿದ ಮುಂಬೈ 11 ಓವರ್‌ನಲ್ಲಿ 9 ವಿಕೆಟ್‌ಗೆ 123 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

'ನಮ್ಮ ತಪ್ಪುಗಳಿಂದ ನಾವು ಪಾಠ ಕಲಿಯಬೇಕುʼ; ಸೋಲಿನ ಬಳಿಕ ಪಾಂಡ್ಯ ಹೇಳಿಕೆ

ಸ್ಟಾರ್ ಕ್ರಿಕೆಟಿಗರಾದ ಟ್ರ್ಯಾವಿಸ್ ಹೆಡ್, ನಿಕೋಲಸ್ ಪೂರನ್, ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್ ಐಪಿಎಲ್‌ನಲ್ಲಿ ಇದುವರೆಗೂ ಬುಮ್ರಾ ಎದುರು ಸಿಕ್ಸರ್ ಸಿಡಿಸಿಲ್ಲ. ಆದರೆ ವೈಭವ್ ತಾವೆದುರಿಸಿದ ಬುಮ್ರಾ ಮೊದಲ ಎಸೆತವನ್ನೇ ಸಿಕ್ಸರ್‌ಗಟ್ಟಿ ಗಮನಸೆಳೆದರು.

ರಾಜಸ್ಥಾನ ಕೇವಲ 2.4 ಓವರ್‌ಗಳಲ್ಲೇ ಅರ್ಧಶತಕ ಪೂರ್ಣಗೊಳಿಸಿದ್ದು, ಐಪಿಎಲ್‌ ಇತಿಹಾಸದಲ್ಲೇ 2ನೇ ಅತಿ ವೇಗದ ಅರ್ಧಶತಕ ಎನಿಸಿಕೊಂಡಿದೆ. 2011ರಲ್ಲಿ ಕೊಚ್ಚಿ ಟಸ್ಕರ್ಸ್‌ ಕೇರಳ ವಿರುದ್ಧ ಆರ್‌ಸಿಬಿ 2.3 ಓವರ್‌ಗಳಲ್ಲೇ ಅರ್ಧಶತಕ ಗಳಿಸಿದ್ದು ಈಗಲೂ ದಾಖಲೆ.

ಸಂಕ್ಷಿಪ್ತ ಸ್ಕೋರ್: ರಾಜಸ್ಥಾನ 11 ಓವರ್‌ನಲ್ಲಿ 150/3 (ಜೈಸ್ವಾಲ್‌ 77, ವೈಭವ್‌ 39, ಘಜಾನ್‌ಫರ್ 2-21), ಮುಂಬೈ 11 ಓವರ್‌ನಲ್ಲಿ 123/9 (ನಮನ್‌ 25, ಬರ್ಗರ್: 21/2 ಬಿಷ್ಣೋಯ್‌ 25/2 ).