ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಾಕ್‌ ವಿರುದ್ಧ 5 ವಿಕೆಟ್‌ ಕಿತ್ತು ಹಲವು ದಾಖಲೆ ಬರೆದ ದೀಪ್ತಿ ಶರ್ಮಾ

Deepti Sharma Breaks World Record: ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಸ್ಮೃತಿ ಮಂಧಾನ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 170 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು 17 ಓವರ್‌ಗಳಲ್ಲಿ 106 ರನ್‌ಗಳಿಗೆ ಆಲೌಟ್‌ ಆಯಿತು.

ಪಾಕ್‌ ವಿರುದ್ಧ 5 ವಿಕೆಟ್‌ ಕಿತ್ತು ವಿಶ್ವ ದಾಖಲೆ ನಿರ್ಮಿಸಿದ ದೀಪ್ತಿ ಶರ್ಮಾ

Deepti Sharma -

Abhilash BC
Abhilash BC Jun 15, 2026 8:26 AM

ಎಡ್ಜ್‌ಬಾಸ್ಟನ್, ಜೂ.15: ಮಹಿಳಾ ಟಿ20 ವಿಶ್ವಕಪ್ ಟೂರ್ನಿ(Women's T20 World Cup)ಯಲ್ಲಿ ಭಾರತ ತಂಡ ಗೆಲುವಿನ ಶುಭಾರಂಭ ಮಾಡಿದೆ. ಭಾನುವಾರ ನಡೆದಿದ್ದ ಪಂದ್ಯದಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ದ 64 ರನ್ ಅದ್ಭುತ ಗೆಲುವು ಸಾಧಿಸಿ ಮೆರೆದಾಡಿತು. ಪಂದ್ಯದಲ್ಲಿ 5 ವಿಕೆಟ್‌ ಕಿತ್ತ ಸ್ಪಿನ್‌ ಆಲ್‌ರೌಂಡರ್‌ ದೀಪ್ತಿ ಶರ್ಮಾ(Deepti Sharma) ಈ ಸಾಧನೆಯ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದರು.

28 ವರ್ಷದ ಆಫ್-ಸ್ಪಿನ್ನರ್ ನಾಲ್ಕು ಓವರ್‌ಗಳಲ್ಲಿ ಕೇವಲ 10 ರನ್‌ ಬಿಟ್ಟುಕೊಟ್ಟು 5 ವಿಕೆಟ್‌ ಕೆಡವಿದರು. ಇದು ಅವರ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ. ಮಾತ್ರವಲ್ಲದೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತೀಯ ಮಹಿಳಾ ತಂಡದ ಪರ ಅತ್ಯುತ್ತಮ ಪ್ರದರ್ಶನವಾಗಿದೆ. ಪ್ರಿಯಾಂಕಾ ರಾಯ್ (2009 ರಲ್ಲಿ ಪಾಕಿಸ್ತಾನದ ವಿರುದ್ಧ 5/16) ಮತ್ತು ರೇಣುಕಾ ಸಿಂಗ್ ಠಾಕೂರ್ (2023 ರಲ್ಲಿ ಇಂಗ್ಲೆಂಡ್ ವಿರುದ್ಧ 5/15) ನಂತರ ಮಹಿಳಾ ಟಿ 20 ವಿಶ್ವಕಪ್‌ನಲ್ಲಿ ಐದು ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮಹಿಳಾ ಟಿ20 ವಿಶ್ವಕಪ್‌; ಪಾಕ್‌ ಮಣಿಸಿ ಭಾರತ ಗೆಲುವಿನ ಶುಭಾರಂಭ

ಮಹಿಳಾ ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಲೆಯನ್ನು ದೀಪ್ತಿ ನಿರ್ಮಿಸಿದರು. ದೀಪ್ತಿ ಈಗ 145 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ 166* ವಿಕೆಟ್‌ಗಳನ್ನು ಕಿತ್ತು ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಇದಕ್ಕೂ ಮುನ್ನ ದಾಖಲೆ ಥೈಲ್ಯಾಂಡ್ ಸ್ಪಿನ್ನರ್ ತಿಪಟಚಾ ಪುಟ್ಟವಾಂಗ್ ಹೆಸರಿನಲ್ಲಿತ್ತು. ಅವರು 165 ವಿಕೆಟ್‌ ಪಡೆದಿದ್ದರು.

ಮಹಿಳಾ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್‌ಗಳು

166 - ದೀಪ್ತಿ ಶರ್ಮಾ

165 - ತಿಪಟಚಾ ಪುಟ್ಟವಾಂಗ್

160 - ಹೆನ್ರಿಯೆಟ್ ಇಶಿಮ್ವೆ

152 - ಮೇಗನ್ ಶುಟ್

148 - ಓ ಕಾಮ್ಚೊಂಫು



"ವಿಕೆಟ್ ಸಿಗದಿದ್ದಾಗ ನಾನು ಚಿಂತಿಸಲಿಲ್ಲ ಏಕೆಂದರೆ ಸರಿಯಾದ ಸಮಯ ಬಂದಾಗ ನಾನು ಮುಂದೆ ಹೆಜ್ಜೆ ಹಾಕುತ್ತೇನೆ ಎಂದು ನನಗೆ ತಿಳಿದಿತ್ತು" ಎಂದು ದೀಪ್ತಿ ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದಲ್ಲಿ ಹೇಳಿದರು.

"ಟರ್ನ್ ಆನ್ ಆಫರ್ ಇದ್ದ ಕಾರಣ ನನಗೆ ಈ ರೀತಿಯ ವಿಕೆಟ್‌ಗಳು ಇಷ್ಟ. ನಾನು ನನ್ನ ವೇಗವನ್ನು ಬದಲಾಯಿಸಿದೆ. ಚೆಂಡು ತಿರುಗುತ್ತಿದ್ದರಿಂದ, ನಾನು ಸರಿಯಾದ ಪ್ರದೇಶಗಳಲ್ಲಿ ಬೌಲಿಂಗ್ ಮಾಡಿದೆ. ಇದು ಯಶಸ್ಸು ಕಂಡಿತು" ಎಂದರು.

ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಸ್ಮೃತಿ ಮಂಧಾನ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 170 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು 17 ಓವರ್‌ಗಳಲ್ಲಿ 106 ರನ್‌ಗಳಿಗೆ ಆಲೌಟ್‌ ಆಯಿತು.