ರಾಹಲ್ ಅರ್ಧಶತಕ; ಗೆಲುವಿನೊಂದಿಗೆ ಅಭಿಯಾನ ಮುಗಿಸಿದ ಡೆಲ್ಲಿ ಕ್ಯಾಪಿಟಲ್ಸ್
IPL 2026: ಹಾಲಿ ಆವೃತ್ತಿಯಲ್ಲಿ ಡೆಲ್ಲಿ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕನ್ನಡಿಗ ಕೆ.ಎಲ್ ರಾಹುಲ್ ತಂಡದ ಕೊನೆಯ ಲೀಗ್ ಪಂದ್ಯದಲ್ಲಿಯೂ ಭರ್ಜರಿ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ಫಿಯರ್‌ಲೆಸ್ ಬ್ಯಾಟಿಂಗ್ ನಡೆಸಿದ ರಾಹುಲ್ 30 ಎಸೆತಗಳಿಂದ 60 ರನ್ ಕಲೆಹಾಕಿದರು. ಸಿಡಿದದ್ದು 4 ಸಿಕ್ಸರ್ ಮತ್ತು 5 ಬೌಂಡರಿ. ಒಟ್ಟಾರೆ 14 ಪಂದ್ಯಗಳಿಂದ ರಾಹುಲ್ 593 ರನ್ ಬಾರಿಸಿದರು.
KL Rahul ended his IPL 2026 with a solid fifty -
ಕೋಲ್ಕತಾ, ಮೇ 24: 19ನೇ ಆವೃತ್ತಿಯ ಐಪಿಎಲ್(IPL 2026) ಟೂರ್ನಿಯ ಲೀಗ್ ಹಂತಕ್ಕೆ ತೆರೆ ಬಿದ್ದಿದೆ. ಭಾನುವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(KKR vs DC) ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 40 ರನ್ ಅಂತರದ ಗೆಲುವು ಸಾಧಿಸುವುದರೊಂದಿಗೆ ಲೀಗ್ ಹಂತ ಮುಕ್ತಾಯ ಕಂಡಿತು. ಇನ್ನು ಪ್ಲೇ ಆಫ್ ಸುತ್ತಿನ ಪಂದ್ಯಗಳು ನಡೆಯಲಿವೆ. ಪ್ಲೇ ಆಫ್ ಪಂದ್ಯಗಳು ಮೇ 26 ರಂದು ಧರ್ಮಶಾಲಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಕ್ವಾಲಿಫೈಯರ್ 1 ಪಂದ್ಯದೊಂದಿಗೆ ಪ್ರಾರಂಭವಾಗಲಿವೆ.
ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಕನ್ನಡಿಕ ಕೆ.ಎಲ್ ರಾಹುಲ್(60) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 203 ರನ್ ಬಾರಿಸಿತು.
ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಕೆಕೆಆರ್ ನಾಯಕ ಅಜಿಂಕ್ಯಾ ರಹಾನೆ ಅವರ ಅರ್ಧಶತಕದ ಹೊರತಾಗಿಯೂ 18.4 ಓವರ್‌ಗಳಲ್ಲಿ 163ರನ್‌ಗೆ ಸರ್ವಪತನ ಕಂಡು ತವರಿನಲ್ಲಿ ಸೋಲಿನೊಂದಿಗೆ ತನ್ನ ಅಭಿಯಾನ ಮುಗಿಸಿತು. ಗೆಲುವು ಕಂಡ ಡೆಲ್ಲಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
The hat-trick was right there! 🤏🥺
— IndianPremierLeague (@IPL) May 24, 2026
So close yet so far for Kuldeep Yadav 🫣
Updates ▶️ https://t.co/Uo07zwiknq#TATAIPL | #KhelBindaas | #KKRvDC | @imkuldeep18 pic.twitter.com/pJ9wOsEIb4
ಚೇಸಿಂಗ್ ವೇಳೆ ರಹಾನೆ ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಾಗದ್ದು ಕೆಕೆಆರ್ ತಂಡದ ಸೋಲಿಗೆ ಕಾರಣವಾಯಿತು. ಕಳೆದ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪಡೆದಿದ್ದ ಮನೀಷ್ ಪಾಂಡೆ ತಲಾ ಎರಡು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ 25 ರನ್ ಗಳಿಸಿದರು. ಇದೇ ವೇಳೆ ಅವರು ಐಪಿಎಲ್‌ನಲ್ಲಿ 4 ಸಾವಿರ ರನ್ ಮೈಲುಗಲ್ಲು ಪೂರ್ತಿಗೊಳಿಸಿದರು.
ಐಪಿಎಲ್ ಪ್ಲೇ-ಆಫ್‌ಗೆ ಅಖಾಡ ಸಿದ್ಧ; ನಾಲ್ಕು ತಂಡಗಳ ಪಂದ್ಯದ ವೇಳಾಪಟ್ಟಿ ಹೀಗಿದೆ
ಫಿನ್ ಅಲೆನ್(20) ಬೇಗನೆ ನಿರ್ಗಮಿಸಿದ್ದು ಕೂಡ ತಂಡಕ್ಕೆ ಹಿನ್ನಡೆಯಾಯಿತು. ಪಾಂಡೆ ಮತ್ತು ಅಲೆನ್ ವಿಕೆಟ್ ಲುಂಗಿ ಎನ್‌ಗಿಡಿ ಪಾಲಾಯಿತು. ಕ್ಯಾಮರೂನ್ ಗ್ರೀನ್(2), ರಿಂಕು ಸಿಂಗ್(0) ಕೂಡ ವಿಫಲರಾದರು. ಅಂತಿಮವಾಗಿ ರಹಾನೆ, ತಲಾ 4 ಬೌಂಡರಿ ಮತ್ತು ಸಿಕ್ಸರ್ ನೆರವಿನಿಂದ 63 ರನ್ ಗಳಿಸಿ ಕುಲ್‌ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. ರಹಾನೆ ವಿಕೆಟ್ ಪತನಗೊಳ್ಳುತ್ತಿದ್ದಂತೆ ತಂಡದ ಸೋಲು ಕೂಡ ಖಚಿತಗೊಂಡಿತು. ಡೆಲ್ಲಿ ಪರ ಕುಲ್‌ದೀಪ್ 3 ವಿಕೆಟ್ ಕಿತ್ತರು. ಇದು ಪ್ರಸಕ್ತ ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಪ್ರದರ್ಶನ.
ರಾಹುಲ್ ಬೊಂಬಾಟ್ ಬ್ಯಾಟಿಂಗ್
ಹಾಲಿ ಆವೃತ್ತಿಯಲ್ಲಿ ಡೆಲ್ಲಿ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕನ್ನಡಿಗ ಕೆ.ಎಲ್ ರಾಹುಲ್ ತಂಡದ ಕೊನೆಯ ಲೀಗ್ ಪಂದ್ಯದಲ್ಲಿಯೂ ಭರ್ಜರಿ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ಫಿಯರ್‌ಲೆಸ್ ಬ್ಯಾಟಿಂಗ್ ನಡೆಸಿದ ರಾಹುಲ್ 30 ಎಸೆತಗಳಿಂದ 60 ರನ್ ಕಲೆಹಾಕಿದರು. ಸಿಡಿದದ್ದು 4 ಸಿಕ್ಸರ್ ಮತ್ತು 5 ಬೌಂಡರಿ. ಇದೇ ವೇಳೆ ಆರಂಭಿಕನಾಗಿ ಐಪಿಎಲ್ ಇತಿಹಾಸದಲ್ಲಿ 5 ಸಾವಿರ ರನ್ ಗಡಿ ದಾಟಿದ ಮೂರನೇ ಭಾರತೀಯ ಆಟಗಾರ ಎನಿಸಿದರು. ಒಟ್ಟಾರೆ ಈ ಬಾರಿ 14 ಪಂದ್ಯಗಳಿಂದ ರಾಹುಲ್ 593 ರನ್ ಬಾರಿಸಿದರು.
6️⃣0️⃣ runs of unfiltered KLaass! 🤌
— IndianPremierLeague (@IPL) May 24, 2026
Updates ▶️ https://t.co/Uo07zwiknq#TATAIPL | #KhelBindaas | #KKRvDC | @klrahul pic.twitter.com/8Xw0aq2qOv
ನಾಯಕ ಅಕ್ಷರ್ ಪಟೇಲ್ 39 ರನ್ ಗಳಿಸಿದರು. ಆರಂಭಿಕ ಬ್ಯಾಟರ್ ಅಭಿಷೇಕ್ ಪೋರೆಲ್(22), ಯುವ ಬ್ಯಾಟರ್ ಸಾಹಿಲ್ ಪರಾಖ್(24) ಗಳಿಸಿದರು. ಕೆಲ ಕ್ರಮಾಂಕದಲ್ಲಿ ಡೇವಿಡ್ ವಿಲ್ಲರ್(28) ಉಪಯುಕ್ತ ಕೊಡುಗೆ ನೀಡಿದರು. ಕೆಕೆಆರ್ ಪರ ಸೌರಭ್ ದುಬೆ 2 ವಿಕೆಟ್ ಕಿತ್ತರು.