ರಣಜಿ ಟ್ರೋಫಿ; ಡೆಲ್ಲಿಗೆ ಆಯುಷ್ ಬಡೋನಿ, ಮಹಾರಾಷ್ಟ್ರಕ್ಕೆ ಪೃಥ್ವಿ ಶಾ ನಾಯಕ
Delhi Ranji Trophy: ಕಳೆದ ಋತುವಿನಲ್ಲಿ, ಏಳು ಬಾರಿ ಚಾಂಪಿಯನ್ ಆಗಿರುವ ದೆಹಲಿ ತಂಡವು ಒಂದೂ ಪಂದ್ಯವನ್ನು ಗೆಲ್ಲಲು ವಿಫಲವಾಗಿ, ತನ್ನ ಗುಂಪಿನಲ್ಲಿ ಕೊನೆಯಿಂದ ಎರಡನೇ ಸ್ಥಾನ ಪಡೆಯಿತು. ಅದು ಆರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿತು ಮತ್ತು ಒಂದು ಪಂದ್ಯದಲ್ಲಿ ಸೋಲನುಭವಿಸಿತು.
Ayush Badoni -
ನವದೆಹಲಿ, ಅ.3: ಮುಂಬರುವ 2026-27ರ ರಣಜಿ ಟ್ರೋಫಿ ಋತುವಿನಲ್ಲಿ ದೆಹಲಿ ತಂಡವನ್ನು ಆಲ್‌ರೌಂಡರ್ ಆಯುಷ್ ಬಡೋನಿ ಮುನ್ನಡೆಸಲಿದ್ದಾರೆ. 'ಸರ್ವಿಸಸ್' ತಂಡದ ವಿರುದ್ಧ ನಡೆಯಲಿರುವ 'ಗ್ರೂಪ್ ಸಿ' ಆರಂಭಿಕ ಪಂದ್ಯದಲ್ಲಿ ಪೃಥ್ವಿ ಶಾ ಅವರನ್ನು ಮಹಾರಾಷ್ಟ್ರ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ.
ಪ್ರಮುಖ ರೆಡ್-ಬಾಲ್ ಟೂರ್ನಮೆಂಟಿಗಾಗಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) 16 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಯಶ್ ಧುಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಅನುಜ್ ರಾವತ್ ಮತ್ತು ಪ್ರಣವ್ ರಾಜ್‌ವಂಶಿ ಅವರನ್ನು ವಿಕೆಟ್-ಕೀಪರ್‌ಗಳಾಗಿ ಆಯ್ಕೆ ಮಾಡಲಾಗಿದೆ.
ದೆಹಲಿ ತಂಡವು ಬಂಗಾಳದ ವಿರುದ್ಧ ತನ್ನ 2026-27ರ ಅಭಿಯಾನವನ್ನು ಆರಂಭಿಸಲಿದೆ. ಈ ತಂಡವು ಎಲೈಟ್ ಟೂರ್ನಮೆಂಟ್‌ನ 'ಗ್ರೂಪ್ ಸಿ'ನಲ್ಲಿ ಗುಜರಾತ್, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಒಡಿಶಾ ಮತ್ತು ಸರ್ವಿಸಸ್ ತಂಡಗಳೊಂದಿಗೆ ಸ್ಥಾನ ಪಡೆದಿದೆ.
ಕಳೆದ ಋತುವಿನಲ್ಲಿ, ಏಳು ಬಾರಿ ಚಾಂಪಿಯನ್ ಆಗಿರುವ ದೆಹಲಿ ತಂಡವು ಒಂದೂ ಪಂದ್ಯವನ್ನು ಗೆಲ್ಲಲು ವಿಫಲವಾಗಿ, ತನ್ನ ಗುಂಪಿನಲ್ಲಿ ಕೊನೆಯಿಂದ ಎರಡನೇ ಸ್ಥಾನ ಪಡೆಯಿತು. ಅದು ಆರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿತು ಮತ್ತು ಒಂದು ಪಂದ್ಯದಲ್ಲಿ ಸೋಲನುಭವಿಸಿತು.
'ವಿಶ್ವಕಪ್‌ಗೆ ಇದು ಒಳ್ಳೆಯ ಸೂಚನೆಯಲ್ಲ'; ಸೋಲಿನ ಬಳಿಕ ನಾಯಕ ಗಿಲ್ ಬೇಸರ
ಮಹಾರಾಷ್ಟ್ರದ 16 ಸದಸ್ಯರ ಈ ತಂಡದಲ್ಲಿ ನಿಯಮಿತ ನಾಯಕ ಋತುರಾಜ್ ಗಾಯಕ್ವಾಡ್ ಇಲ್ಲ. ಪುದುಚೇರಿಯಲ್ಲಿ ಆಸ್ಟ್ರೇಲಿಯಾ 'ಎ' ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಅನಧಿಕೃತ ಏಕದಿನ ಸರಣಿಯಲ್ಲಿ ಅವರು ಭಾರತ 'ಎ' ತಂಡವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ಮೊದಲ ಪಂದ್ಯಕ್ಕೆ ಪೃಥ್ವಿ ಶಾ ನಾಯಕನಾಗಲಿದ್ದಾರೆ. ಈ ಅನಧಿಕೃತ ಏಕದಿನ ಪಂದ್ಯಗಳು ಅಕ್ಟೋಬರ್ 6, 9 ಮತ್ತು 11 ರಂದು ನಡೆಯಲಿವೆ. ಇತ್ತ ರಣಜಿ ಟ್ರೋಫಿಯ 2026-27ರ ಋತುವು ಅಕ್ಟೋಬರ್ 11 ರಿಂದ ಆರಂಭವಾಗಲಿದೆ.
ದೆಹಲಿ ತಂಡ
ಆಯುಷ್ ಬದೋನಿ (ನಾಯಕ), ಯಶ್ ಧುಲ್ (ವಿಸಿ), ಅನುಜ್ ರಾವತ್ (ವಿ.ಕೀ.), ಸನತ್ ಸಾಂಗ್ವಾನ್, ಆಯುಷ್ ದೋಸೆಜಾ, ದೇವ್ ಲಾಕ್ರಾ, ಹೃತಿಕ್ ಶೋಕೀನ್, ದಿವಿಜ್ ಮೆಹ್ರಾ, ಮನಿ ಗ್ರೆವಾಲ್, ಸಿಮರ್ಜೀತ್ ಸಿಂಗ್, ನವದೀಪ್ ಸೈನಿ, ಪ್ರಣವ್ ರಾಜವಂಶಿ (ವಿ.ಕೀ.), ಸಾರ್ಥಕ್ ರಂಜನ್, ತೇಜಸ್ವಿ, ಧ್ರುವ ಕೌಶಿಕ್, ಸುಮಿತ್ ಮಾಥುರ್.
ಮಹಾರಾಷ್ಟ್ರ ತಂಡ
ಪೃಥ್ವಿ ಶಾ (ನಾಯಕ), ಸಚಿನ್ ದಾಸ್, ದಿಗ್ವಿಜಯ್ ಪಾಟೀಲ್, ಅಂಕೀತ್ ಬವಾನೆ, ಹರ್ಷಲ್ ಕೇಟ್, ಸಿದ್ಧೇಶ್ ವೀರ್, ಸೌರಭ್ ನವಲೆ (ವಿ.ಕೀ.), ವಿಕ್ಕಿ ಓಸ್ತ್ವಾಲ್, ರಾಜವರ್ಧನ್ ಹಂಗರ್ಗೇಕರ್, ಮುಖೇಶ್ ಚೌಧರಿ, ಪ್ರದೀಪ್ ದಾಧೆ, ತನಯ್ ಸಾಂಘ್ವಿ, ವೈಭವ್ ದರ್ಕುಂಡೆ, ಹಿತೇಶ್ ವಾಲುಂಜ್, ರಿಷಿಕೇಶ್ ಸೋನಾವಾನೆ, ಅಥರ್ವ ಧರ್ಮಾಧಿಕಾರಿ.