ಭಾರತ vs ಪಾಕ್ ಟಿ20 ವಿಶ್ವಕಪ್ ಪಂದ್ಯಕ್ಕೆ ಲಂಕಾ ಪೊಲೀಸರಿಂದ ಬಿಗಿ ಭದ್ರತೆ
T20 World Cup 2026: ಬಾಂಗ್ಲಾಗೆ ಭಾರತದಲ್ಲಿ ಆಡಲು ಸಮಸ್ಯೆಯಿದೆ ಹೊರತು ಶ್ರೀಲಂಕಾದಲ್ಲಿ ಅಲ್ಲ. ಹೀಗಾಗಿ ಪಾಕ್ ಹೊರಬಿದ್ದರೆ, ಬಾಂಗ್ಲಾ ಕ್ರಿಕೆಟ್ ಮಂಡಳಿಯ ಬೇಡಿಕೆಯಂತೆ ಬಾಂಗ್ಲಾ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದು, ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
File photo: India and Pakistan -
ಕೊಲಂಬೊ, ಜ. 29: ಟಿ20 ವಿಶ್ವಕಪ್(T20 World Cup 2026) ಪಂದ್ಯಾವಳಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(India vs Pakistan) ನಡುವಣ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಇತ್ತಂಡಗಳ ನಡುವಣ ಪಂದ್ಯ ಫೆ.15 ರಂದು ಕೊಲಂಬೊದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಪಂದ್ಯಕ್ಕೆ ಭಾರೀ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಪಂದ್ಯಾವಳಿ ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಶ್ರೀಲಂಕಾ ಹೆಚ್ಚಿನ ಆದ್ಯತೆ ನೀಡಿದೆ ಮತ್ತು ಭಾರತ-ಪಾಕಿಸ್ತಾನ ಪಂದ್ಯಗಳಿಗೆ ವಿಶೇಷ ಗಮನ ಹರಿಸುತ್ತಿದೆ ಎಂದು ಕ್ರೀಡಾ ಸಚಿವ ಸುನಿಲ್ ಕುಮಾರ ಗಮಗೆ ಎಎಫ್‌ಪಿಗೆ ತಿಳಿಸಿದರು.
ಸಾಮಾನ್ಯವಾಗಿ ಭೇಟಿ ನೀಡುವ ರಾಷ್ಟ್ರಗಳ ಮುಖ್ಯಸ್ಥರನ್ನು ಕಾಪಾಡಲು ನಿಯೋಜಿಸಲಾದ ಎಲೈಟ್ ಕಮಾಂಡೋ ಘಟಕಗಳನ್ನು ಭಾಗವಹಿಸುವ ಎಲ್ಲಾ ತಂಡಗಳನ್ನು ರಕ್ಷಿಸಲು ನಿಯೋಜಿಸಲಾಗುವುದು ಎಂದು ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
"ಆಟಗಾರರು ವಿಮಾನ ನಿಲ್ದಾಣದಿಂದ ಹೊರಬಂದ ಸಮಯದಿಂದ ತಮ್ಮ ವಿಮಾನಕ್ಕೆ ಹಿಂತಿರುಗುವವರೆಗೆ, ಅವರನ್ನು ಸಶಸ್ತ್ರ ಕಾವಲುಗಾರರು ರಕ್ಷಿಸುತ್ತಾರೆ" ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.
ರಾಜಕೀಯ ದ್ವೇಷದಿಂದಾಗಿ ಪಾಕಿಸ್ತಾನ ಭಾರತದಲ್ಲಿ ತನ್ನ ಪಂದ್ಯಗಳನ್ನು ಆಡಲು ನಿರಾಕರಿಸಿತು, ಇದರಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಪಂದ್ಯಗಳನ್ನು ತಟಸ್ಥ ಶ್ರೀಲಂಕಾಕ್ಕೆ ಸ್ಥಳಾಂತರಿಸಿತು. ಭದ್ರತಾ ಭಯದಿಂದಾಗಿ ಬಾಂಗ್ಲಾದೇಶ ಕೂಡ ತನ್ನ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಲು ಪ್ರಯತ್ನಿಸಿತು, ಆದರೆ ಐಸಿಸಿ ಆ ವಿನಂತಿಯನ್ನು ತಿರಸ್ಕರಿಸಿತು. ಬಾಂಗ್ಲಾದೇಶ ಪಂದ್ಯಾವಳಿಯಿಂದ ಹಿಂದೆ ಸರಿಯಿತು ಮತ್ತು ಸ್ಕಾಟ್ಲೆಂಡ್ ಅನ್ನು ಬದಲಿಯಾಗಿ ಆಯ್ಕೆ ಮಾಡಲಾಯಿತು.
ಟಿ20 ವಿಶ್ವಕಪ್‌ಗೂ ಮುನ್ನ ಭಾರತದ ದೊಡ್ಡ ಸವಾಲು ತೋರಿಸಿದ ರೋಹಿತ್ ಶರ್ಮಾ
"ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವಿನ ಈ ವಿವಾದಗಳಲ್ಲಿ, ನಾವು ತಟಸ್ಥರಾಗಿದ್ದೇವೆ. ಇವೆಲ್ಲವೂ ಸ್ನೇಹಪರ ರಾಷ್ಟ್ರಗಳು" ಎಂದು ಕ್ರಿಕೆಟ್ ಕಾರ್ಯದರ್ಶಿ ಬಂಡುಲಾ ದಿಸನಾಯಕೆ ಹೇಳಿದರು.
ಪಾಕ್ ತಂಡ ಟೂರ್ನಿ ಬಹಿಷ್ಕರಿಸಿದರೆ ಬದಲಿ ತಂಡವಾಗಿ ಬಾಂಗ್ಲಾದೇಶವೇ ವಿಶ್ವಕಪ್‌ಗೆ ವಾಪಸ್ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಪಾಕ್ ತಂಡ ಈಗ ‘ಎ’ ಗುಂಪಿನಲ್ಲಿದೆ. ತಂಡದ ಎಲ್ಲಾ ಪಂದ್ಯಗಳು ಲಂಕಾದಲ್ಲಿ ನಿಗದಿಯಾಗಿದೆ. ಪಾಕ್ ತಂಡ ಟೂರ್ನಿ ಬಹಿಷ್ಕರಿಸಿದರೆ, ಬದಲಿ ತಂಡವಾಗಿ ಬಾಂಗ್ಲಾದೇಶ ಟೂರ್ನಿಗೆ ಪ್ರವೇಶಿಸಬಹುದು. ಬಾಂಗ್ಲಾಗೆ ಭಾರತದಲ್ಲಿ ಆಡಲು ಸಮಸ್ಯೆಯಿದೆ ಹೊರತು ಶ್ರೀಲಂಕಾದಲ್ಲಿ ಅಲ್ಲ. ಹೀಗಾಗಿ ಪಾಕ್ ಹೊರಬಿದ್ದರೆ, ಬಾಂಗ್ಲಾ ಕ್ರಿಕೆಟ್ ಮಂಡಳಿಯ ಬೇಡಿಕೆಯಂತೆ ಬಾಂಗ್ಲಾ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದು, ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.