ಫಿಫಾ ವಿಶ್ವಕಪ್‌ಗೆ 48 ತಂಡಗಳು ಅಂತಿಮ; ಈ ಬಾರಿಯೂ ಅರ್ಹತೆ ಪಡೆಯದ ಇಟಲಿ
FIFA World Cup 2026: ನಾಲ್ಕು ಬಾರಿ ವಿಶ್ವಕಪ್ ಗೆದ್ದಿರುವ ಇಟಲಿ ತಂಡ ಈ ಬಾರಿಯೂ ಪಂದ್ಯಾವಳಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಬೋಸ್ನಿಯಾ ಮತ್ತು ಹರ್ಜೆಗೋವಿನಾ ವಿರುದ್ಧದ ಪ್ಲೇಆಫ್ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತು ಅರ್ಹತಾ ಸುತ್ತಿನಲ್ಲೇ ಹೊರಬಿತ್ತು.
FIFA World Cup trophy -
ವಾಷಿಂಗ್ಟನ್, ಎ.1: ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾದಲ್ಲಿ ನಡೆಯಲಿರುವ ಮುಂಬರುವ ಬಹುನಿರೀಕ್ಷಿತ ಫಿಫಾ ವಿಶ್ವಕಪ್(FIFA World Cup 2026)ನಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ 48 ತಂಡಗಳು ಭಾಗವಹಿಸಲು ಸಜ್ಜಾಗಿವೆ. ಮೊದಲ ಬಾರಿಗೆ, ಏಳು ಖಂಡಗಳ ತಂಡಗಳು ಜಾಗತಿಕ ಫುಟ್ಬಾಲ್ ಸಂಭ್ರಮದಲ್ಲಿ ಕಾಣಿಸಿಕೊಳ್ಳಲಿದೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿದ್ದರೆ, 2022 ರ ಆವೃತ್ತಿಯ ಹಲವಾರು ತಂಡಗಳು ಈ ಬಾರಿ ಅವಕಾಶ ಪಡೆದಿಲ್ಲ.
ಈ ಪಂದ್ಯಾವಳಿ ಜೂನ್ 11 ರಂದು ಆರಂಭವಾಗಲಿದ್ದು, 16 ನಗರಗಳಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ. ಅಮೆರಿಕವು ಜುಲೈ 19 ರಂದು ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಾಕೌಟ್ ಸುತ್ತುಗಳು ಮತ್ತು ಫೈನಲ್ ಸೇರಿದಂತೆ 78 ಪಂದ್ಯಗಳನ್ನು ಆಯೋಜಿಸಲಿದೆ. ಇತರ ಎರಡು ಆತಿಥೇಯರಾದ ಕೆನಡಾ ಮತ್ತು ಮೆಕ್ಸಿಕೊ ತಲಾ 13 ಪಂದ್ಯಗಳನ್ನು ಆಯೋಜಿಸಲಿದ್ದು, ಹೆಚ್ಚಿನವು ಗುಂಪು ಹಂತದಲ್ಲಿ ನಡೆಯಲಿವೆ.
ಐಪಿಎಲ್ ತೊರೆದು ಪಾಕ್ ಲೀಗ್ ಆಡಲು ನಿರ್ಧರಿಸಿದ ಕಾರಣ ತಿಳಿಸಿದ ಝಾಂಪಾ
ನಾಲ್ಕು ಬಾರಿ ವಿಶ್ವಕಪ್ ಗೆದ್ದಿರುವ ಇಟಲಿ ತಂಡ ಈ ಬಾರಿಯೂ ಪಂದ್ಯಾವಳಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಬೋಸ್ನಿಯಾ ಮತ್ತು ಹರ್ಜೆಗೋವಿನಾ ವಿರುದ್ಧದ ಪ್ಲೇಆಫ್ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತು ಅರ್ಹತಾ ಸುತ್ತಿನಲ್ಲೇ ಹೊರಬಿತ್ತು. ಬುಧವಾರ ನಡೆದ ಇಂಟರ್-ಕಾನ್ಫೆಡರೇಷನ್ ಪ್ಲೇಆಫ್‌ನಲ್ಲಿ ಇರಾಕ್ ಮತ್ತು ಬೊಲಿವಿಯಾ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಇರಾಕ್ 2-1 ಅಂತರದಿಂದ ಗೆದ್ದು FIFA ವಿಶ್ವಕಪ್‌ಗೆ ಅರ್ಹತೆ ಪಡೆದ ಕೊನೆಯ ತಂಡವಾಯಿತು.
FIFA ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡಗಳು ಮತ್ತು ಗುಂಪುಗಳು
ಗುಂಪು ಎ: ಮೆಕ್ಸಿಕೊ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಜೆಕಿಯಾ
ಗುಂಪು ಬಿ: ಕೆನಡಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಕತಾರ್, ಸ್ವಿಟ್ಜರ್‌ಲ್ಯಾಂಡ್
ಗುಂಪು ಸಿ: ಬ್ರೆಜಿಲ್, ಮೊರಾಕೊ, ಹೈಟಿ, ಸ್ಕಾಟ್ಲೆಂಡ್
ಗುಂಪು ಡಿ: ಯುಎಸ್ಎ, ಪರಾಗ್ವೆ, ಆಸ್ಟ್ರೇಲಿಯಾ, ಟರ್ಕಿಯೆ
ಗುಂಪು ಇ: ಜರ್ಮನಿ, ಕುರಾಕಾವೊ, ಐವರಿ ಕೋಸ್ಟ್, ಈಕ್ವೆಡಾರ್
ಗುಂಪು ಎಫ್: ನೆದರ್‌ಲ್ಯಾಂಡ್ಸ್, ಜಪಾನ್, ಸ್ವೀಡನ್, ಟುನೀಶಿಯಾ
ಗುಂಪು ಜಿ: ಬೆಲ್ಜಿಯಂ, ಈಜಿಪ್ಟ್, ಇರಾನ್, ನ್ಯೂಜಿಲೆಂಡ್
ಗುಂಪು ಎಚ್: ಸ್ಪೇನ್, ಕೇಪ್ ವರ್ಡೆ, ಸೌದಿ ಅರೇಬಿಯಾ, ಉರುಗ್ವೆ
ಗುಂಪು ಐ: ಫ್ರಾನ್ಸ್, ಸೆನೆಗಲ್, ನಾರ್ವೆ, ಇರಾಕ್
ಗುಂಪು ಜೆ: ಅರ್ಜೆಂಟೀನಾ, ಅಲ್ಜೀರಿಯಾ, ಆಸ್ಟ್ರಿಯಾ, ಜೋರ್ಡಾನ್
ಗುಂಪು ಕೆ: ಪೋರ್ಚುಗಲ್, ಡಿಆರ್ ಕಾಂಗೋ, ಉಜ್ಬೇಕಿಸ್ತಾನ್, ಕೊಲಂಬಿಯಾ
ಗುಂಪು ಎಲ್: ಇಂಗ್ಲೆಂಡ್, ಕ್ರೊಯೇಷಿಯಾ, ಘಾನಾ, ಪನಾಮ