2027ರ ವಿಶ್ವಕಪ್ ಹೊಸ ನಿಮಯದ ಪ್ರಕಾರ ಸೆಮಿಫೈನಲ್ ತಲುಪಲು ಭಾರತ ಎಷ್ಟು ಪಂದ್ಯ ಗೆಲ್ಲಬೇಕು?
2027 World Cup: ಭಾರತವು ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಜಿಂಬಾಬ್ವೆ ಮತ್ತು ಜೊತೆಗೆ A ಗುಂಪಿನಲ್ಲಿದೆ. ಇನ್ನೊಂದು ತಂಡ ಕ್ವಾಲಿಫೈಯರ್ ಆಡಿ ಅರ್ಹತೆ ಪಡೆಯಬೇಕಿದೆ. ಪರಿಷ್ಕೃತ ಸ್ವರೂಪದ ಪ್ರಕಾರ ಸ್ಪರ್ಧೆಯು ಸೂಪರ್ ಸಿರೀಸ್, 12-ತಂಡಗಳ ಗುಂಪು ಹಂತ ಮತ್ತು ಸೆಮಿಫೈನಲ್ ಮತ್ತು ಫೈನಲ್‌ಗೆ ಮುನ್ನ ಸೂಪರ್ 7 ಪಂದ್ಯ ನಡೆಯಲಿದೆ.
Shubman Gill (R) and Virat Kohli -
ನವದೆಹಲಿ, ಅ.2: 2023 ರಲ್ಲಿ ತವರಿನಲ್ಲಿ ನಡೆದ ಫೈನಲ್ ನೋವಿನ ಸೋಲಿನ ನಂತರ, ಭಾರತವು 2027 ರಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಪುರುಷರ ODI ವಿಶ್ವಕಪ್‌ನಲ್ಲಿ ಆಡಲಿದೆ. ಈಗಾಗಲೇ ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು ಭಾರತ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 7 ರಂದು ಕೇಪ್ ಟೌನ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸುತ್ತದೆ. ಹೊಸ ಮಾದರಿಯ ವಿಶ್ವಕಪ್‌ನಲ್ಲಿ ಸೆಮಿ ಫೈನಲ್ ಅಹರ್ತೆ ಪಡೆಯಬೇಕಿದ್ದರೆ ಭಾರತ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬ ಮಾಹಿತಿ ಇಲ್ಲಿದೆ.
ಭಾರತವು ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಜಿಂಬಾಬ್ವೆ ಮತ್ತು ಜೊತೆಗೆ A ಗುಂಪಿನಲ್ಲಿದೆ. ಇನ್ನೊಂದು ತಂಡ ಕ್ವಾಲಿಫೈಯರ್ ಆಡಿ ಅರ್ಹತೆ ಪಡೆಯಬೇಕಿದೆ. ಪರಿಷ್ಕೃತ ಸ್ವರೂಪದ ಪ್ರಕಾರ ಸ್ಪರ್ಧೆಯು ಸೂಪರ್ ಸಿರೀಸ್, 12-ತಂಡಗಳ ಗುಂಪು ಹಂತ ಮತ್ತು ಸೆಮಿಫೈನಲ್ ಮತ್ತು ಫೈನಲ್‌ಗೆ ಮುನ್ನ ಸೂಪರ್ 7 ಪಂದ್ಯ ನಡೆಯಲಿದೆ.
ODI World Cup 2027: ಅ 10ಕ್ಕೆ ಪಾಕ್ ಪಂದ್ಯ, ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!
ಸೂಪರ್ 7 ಹಂತಕ್ಕೆ ಪ್ರಗತಿ ಸಾಧಿಸಲು, ಸ್ವಯಂಚಾಲಿತ ಅರ್ಹತೆಯನ್ನು ಗಳಿಸಲು ಭಾರತವು ಎ ಗುಂಪಿನಲ್ಲಿ ಅಗ್ರ ಮೂರು ಸ್ಥಾನಗಳನ್ನು ಗಳಿಸಬೇಕು. ಕನಿಷ್ಠ ಮೂರು ಗೆಲುವುಗಳು ಶುಭಮನ್ ಗಿಲ್ ಅವರ ತಂಡವು ಮುಂದಿನ ಸುತ್ತಿಗೆ ಹೋಗುವುದನ್ನು ಖಾತರಿಪಡಿಸಬೇಕು. ಸೂಪರ್ 7 ರ ರೌಂಡ್ ರಾಬಿನ್ ಹಂತದಲ್ಲಿ, ಅಗ್ರ 4 ರಲ್ಲಿ ಸ್ಥಾನ ಪಡೆಯಲು ಮತ್ತು ಸೆಮಿಫೈನಲ್‌ಗೆ ಮುನ್ನಡೆಯಲು ಭಾರತಕ್ಕೆ ಕನಿಷ್ಠ ನಾಲ್ಕು ಜಯಗಳ ಅಗತ್ಯವಿದೆ.
ಭಾರತದ ವೇಳಾಪಟ್ಟಿ
ಗುಂಪು ಹಂತ
7 ಅಕ್ಟೋಬರ್- ಭಾರತ vs ಆಸ್ಟ್ರೇಲಿಯಾ (ಕೇಪ್ ಟೌನ್)
10 ಅಕ್ಟೋಬರ್ - ಭಾರತ vs ಪಾಕಿಸ್ತಾನ(ಜೋಹಾನ್ಸ್‌ಬರ್ಗ್)
14 ಅಕ್ಟೋಬರ್- ಭಾರತ vs ಅಫ್ಘಾನಿಸ್ತಾನ(ತ್ಶ್ವಾನೆ)
17 ಅಕ್ಟೋಬರ್- ಭಾರತ vs ಕ್ವಾಲಿಫೈಯರ್ A(ಬ್ಲೋಮ್‌ಫಾಂಟೈನ್)
24 ಅಕ್ಟೋಬರ್- ಜಿಂಬಾಬ್ವೆ vs ಭಾರತ(ವಿಕ್ಟೋರಿಯಾ ಫಾಲ್ಸ್)
ಸೂಪರ್ 7 (ಶ್ರೇಯಾಂಕಿತ ತಂಡಗಳು ಅರ್ಹತೆ ಪಡೆದರೆ)
28 ಅಕ್ಟೋಬರ್- ಭಾರತ (A1) vs ಆಸ್ಟ್ರೇಲಿಯಾ (A2) (ವಿಕ್ಟೋರಿಯಾ ಫಾಲ್ಸ್)
31 ಅಕ್ಟೋಬರ್- ದಕ್ಷಿಣ ಆಫ್ರಿಕಾ (B2) vs ಭಾರತ (A1)(ಜೋಹಾನ್ಸ್‌ಬರ್ಗ್)
4 ನವೆಂಬರ್- ಭಾರತ (A1) vs ನ್ಯೂಜಿಲೆಂಡ್ (B1)( ಪಾರ್ಲ್)
7 ನವೆಂಬರ್- ಭಾರತ (A1) vs ಪಾಕಿಸ್ತಾನ (A3) (ಕೇಪ್ ಟೌನ್)
11 ನವೆಂಬರ್- ಭಾರತ (A1) vs ಇಂಗ್ಲೆಂಡ್ (AB4) (ಗೆಬೆರ್ಹಾ)
14 ನವೆಂಬರ್- ಭಾರತ (A1) vs ಶ್ರೀಲಂಕಾ (B3) (ಡರ್ಬನ್)