ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fatima Sana: ಪಾಕ್‌ ಮಹಿಳಾ ಕ್ರಿಕೆಟ್ ನಾಯಕಿ ಫಾತಿಮಾ ಸನಾಗೆ ಧೋನಿಯೇ ಸ್ಫೂರ್ತಿ!

ವಿಶ್ವಕಪ್‌ಗೆ ಈಗಾಗಲೇ ಪಾಕ್‌ ತಂಡ ಪ್ರಕಟಗೊಂಡಿದೆ. ಅಚ್ಚರಿ ಎಂಬಂತೆ ತಂಡದಲ್ಲಿ ಒಟ್ಟು 7 ಅನ್‌ಕ್ಯಾಪ್ಡ್ ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ. 20 ವರ್ಷದ ಐಮನ್ ಫಾತಿಮಾ ಜತೆಗೆ, ಇತರ ಆರು ಆಟಗಾರ್ತಿಯರನ್ನು ಮೊದಲ ಬಾರಿಗೆ ಏಕದಿನ ವಿಶ್ವಕಪ್ ತಂಡದಲ್ಲಿ ಹೆಸರಿಸಲಾಗಿದೆ. ಅವರೆಂದರೆ ನಟಾಲಿಯಾ ಪರ್ವೈಜ್, ರಮೀನ್ ಶಮಿಮ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್, ಶವಾಲ್ ಜುಲ್ಫಿಕರ್ ಮತ್ತು ಸೈದಾ ಅರೂಬ್ ಶಾ.

ಪಾಕ್‌ ಮಹಿಳಾ ಕ್ರಿಕೆಟ್ ನಾಯಕಿ ಫಾತಿಮಾ ಸನಾಗೆ ಧೋನಿಯೇ ಸ್ಫೂರ್ತಿ!

-

Abhilash BC Abhilash BC Sep 4, 2025 8:50 AM

ಕರಾಚಿ: ಮಹಿಳಾ ಏಕದಿನ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕಿ ಫಾತಿಮಾ ಸನಾ(Fatima Sana), ‘ಕ್ಯಾಪ್ಟನ್ ಕೂಲ್’ ಧೋನಿ(MS Dhoni) ರೀತಿ ಇರಲು ಬಯಸುತ್ತೇನೆ ಎಂದಿದ್ದಾರೆ. 'ಪ್ರಮುಖ ಟೂರ್ನಿಗಳಲ್ಲಿ ತಂಡ ಮುನ್ನಡೆಸುವುದಕ್ಕೆ ಹಿಂಜರಿಕೆ ಇದ್ದೇ ಇರುತ್ತದೆ. ಆದರೆ ಭಾರತ ತಂಡದ ಮಾಜಿ ನಾಯಕ ಧೋನಿಯಿಂದ ಸ್ಫೂರ್ತಿ ಪಡೆಯಲು ಯತ್ನಿಸುತ್ತೇನೆ' ಎಂದರು.

"ಭಾರತ ಹಾಗೂ ಸಿಎಸ್‌ಕೆ ತಂಡಗಳ ನಾಯಕರಾಗಿ ಧೋನಿ ತಂಡವನ್ನು ಮುನ್ನಡೆಸಿದ ಪಂದ್ಯಗಳನ್ನು ನೋಡಿದ್ದೇನೆ. ಮೈದಾನದಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರ, ಶಾಂತತೆ ಹಾಗೂ ಅವರು ತಮ್ಮ ಆಟಗಾರರನ್ನು ಬೆಂಬಲಿಸುವ ರೀತಿಯಿಂದ ಕಲಿಯಲು ಸಾಕಷ್ಟಿದೆ. ನಾನು ನಾಯಕತ್ವದ ಜವಾಬ್ದಾರಿ ಪಡೆದಾಗ, ಧೋನಿಯಂತೆ ಆಡಬೇಕೆಂದು ಭಾವಿಸಿದ್ದೆ. ಅವರ ಸಂದರ್ಶನಗಳನ್ನು ಕೂಡ ನೋಡಿ ಬಹಳಷ್ಟು ಕಲಿತಿದ್ದೇನೆ. ಅವರಿಂದ ಸ್ಪೂರ್ತಿ ಪಡೆದರುವ ನಾನು ಈ ಬಾರಿ ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಲು ಎದುರು ನೋಡುತ್ತಿದೆ ಎಂಉ ಹೇಳಿದರು.

ವಿಶ್ವಕಪ್‌ನ ಎಲ್ಲಾ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿರುವ ಪಾಕಿಸ್ತಾನ, ಅಕ್ಟೋಬರ್ 2 ರಂದು ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಫೈನಲ್ ತಲುಪಿದರೆ, ಟೂರ್ನಿಯ ಅಂತಿಮ ಪಂದ್ಯವೂ ಕೊಲಂಬೊದಲ್ಲಿ ನಡೆಯಲಿದೆ.

ವಿಶ್ವಕಪ್‌ಗೆ ಈಗಾಗಲೇ ಪಾಕ್‌ ತಂಡ ಪ್ರಕಟಗೊಂಡಿದೆ. ಅಚ್ಚರಿ ಎಂಬಂತೆ ತಂಡದಲ್ಲಿ ಒಟ್ಟು 7 ಅನ್‌ಕ್ಯಾಪ್ಡ್ ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ. 20 ವರ್ಷದ ಐಮನ್ ಫಾತಿಮಾ ಜತೆಗೆ, ಇತರ ಆರು ಆಟಗಾರ್ತಿಯರನ್ನು ಮೊದಲ ಬಾರಿಗೆ ಏಕದಿನ ವಿಶ್ವಕಪ್ ತಂಡದಲ್ಲಿ ಹೆಸರಿಸಲಾಗಿದೆ. ಅವರೆಂದರೆ ನಟಾಲಿಯಾ ಪರ್ವೈಜ್, ರಮೀನ್ ಶಮಿಮ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್, ಶವಾಲ್ ಜುಲ್ಫಿಕರ್ ಮತ್ತು ಸೈದಾ ಅರೂಬ್ ಶಾ.

ಇದನ್ನೂ ಓದಿ ಮಹಿಳಾ ವಿಶ್ವಕಪ್‌: ತರಬೇತಿ ಶಿಬಿರಕ್ಕಾಗಿ 20 ಸದಸ್ಯರ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ

ಪಾಕಿಸ್ತಾನ ತಂಡ

ಫಾತಿಮಾ ಸನಾ (ನಾಯಕಿ), ಮುನೀಬಾ ಅಲಿ ಸಿದ್ದಿಕಿ (ಉಪನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಐಮನ್ ಫಾತಿಮಾ, ನಶ್ರಾ ಸುಂಧು, ನಟಾಲಿಯಾ ಪರ್ವೈಜ್, ಒಮೈಮಾ ಸೊಹೈಲ್, ರಮೀನ್ ಶಮೀಮ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್, ಶಾವಾಲ್ ಜುಲ್ಫಿಕರ್, ಸಿದ್ರಾ ಅಮಿನ್, ಸಿದ್ರಾ ಅಮಿನ್, ಸಿದಾ ಅಮಿನ್.