ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ICC Champions Trophy: 'ಮಿನಿ ವಿಶ್ವಕಪ್‌' ಚಾಂಪಿಯನ್ಸ್‌ ಟ್ರೋಫಿಗೆ ದಿನಗಣನೆ

ಇದು 1996ರ ಏಕದಿನ ವಿಶ್ವಕಪ್​ ಬಳಿಕ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿರುವ ಮೊದಲ ಐಸಿಸಿ ಟೂರ್ನಿಯಾಗಿದೆ. 2027ರವರೆಗೆ ಭಾರತದಲ್ಲಿ ನಿಗದಿಯಾಗಿರುವ ಐಸಿಸಿ ಟೂರ್ನಿಗಳನ್ನೂ ಹೈಬ್ರಿಡ್​ ಮಾದರಿಯಲ್ಲಿ ನಡೆಸುವ ಸೂತ್ರದ ಅನ್ವಯ, ಪಾಕಿಸ್ತಾನ ಈ ಬಾರಿ ಚಾಂಪಿಯನ್ಸ್‌ ಟ್ರೋಫಿಯ ಆತಿಥ್ಯವನ್ನು ಉಳಿಸಿಕೊಂಡಿದೆ.

ಟೂರ್ನಿಯ ಸ್ವರೂಪ, ವೇಳಾಪಟ್ಟಿ, ತಂಡಗಳ ಸಂಪೂರ್ಣ ವಿವರ ಇಲ್ಲಿದೆ

Profile Abhilash BC Feb 17, 2025 11:40 AM

ಕರಾಚಿ: 8 ವರ್ಷದ ಬಳಿಕ ಮತ್ತೆ ಸದ್ದು ಮಾಡಲು ಸಿದ್ಧಗೊಂಡಿರುವ ಮಿನಿ ವಿಶ್ವಕಪ್‌ ಖ್ಯಾತಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೆ ಬುಧವಾರ(ಫೆ.19) ಚಾಲನೆ ಸಿಗಲಿದೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಅಗ್ರ-8 ಸ್ಥಾನ ಪಡೆದಿದ್ದ ತಂಡಗಳು ಮುಂದಿನ ಎರಡೂವರೆ ವಾರಗಳ ಕಾಲ ಚಾಂಪಿಯನ್ಸ್‌ ಟ್ರೋಫಿಗಾಗಿ ಸೆಣಸಾಟ ನಡೆಸಲಿವೆ. ಹಾಲಿ ಚಾಂಪಿಯನ್‌ ಭಾರತ ಮತ್ತು ಪಾಕಿಸ್ತಾನ ನಡುವಿನ ಒಂದೇ ಗುಂಪಿನಲ್ಲಿ ಕಾಣಿಸಿಕೊಂಡಿರುವುದು ಈ ಕೂಟದ ಆಕರ್ಷಣೆಗಳಲ್ಲೊಂದು. ಟೂರ್ನಿಯ ಸ್ವರೂಪ, ಪಂದ್ಯಗಳು, ವೇಳಾಪಟ್ಟಿ ಹಾಗೂ ತಂಡಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೈಬ್ರೀಡ್‌ ಮಾದರಿ

ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯ ವಿಶೇಷತೆ ಎಂದರೆ, ಹೈಬ್ರಿಡ್‌ ಮಾದರಿ. ಭಾರತ ತಂಡವನ್ನು ಪಾಕಿಸ್ತಾನದ ನೆಲಕ್ಕೆ ಕಾಲಿಡಲು ಬಿಸಿಸಿಐ ನಿರಾಕರಿಸಿದ ಕಾರಣ ಐಸಿಸಿ ಈ ಕ್ರಮ ಕೈಗೊಂಡಿದೆ. ಭಾರತದ ಪಂದ್ಯಗಳಿಗೆ ದುಬೈ ಆತಿಥ್ಯ ವಹಿಸಲಿದೆ. ಉಳಿದ 6 ತಂಡಗಳು ಪಾಕಿಸ್ತಾನದಲ್ಲಿ ಆಡಲಿದೆ. ಪಂದ್ಯಗಳು ಪಾಕಿಸ್ತಾನದ ಲಾಹೋರ್‌, ಕರಾಚಿ ಹಾಗೂ ರಾವಲ್ಪಿಂಡಿಯ ಜತೆಗೆ ದುಬೈನಲ್ಲಿ ನಡೆಯಲಿವೆ.

ಇದು 1996ರ ಏಕದಿನ ವಿಶ್ವಕಪ್​ ಬಳಿಕ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿರುವ ಮೊದಲ ಐಸಿಸಿ ಟೂರ್ನಿಯಾಗಿದೆ. 2027ರವರೆಗೆ ಭಾರತದಲ್ಲಿ ನಿಗದಿಯಾಗಿರುವ ಐಸಿಸಿ ಟೂರ್ನಿಗಳನ್ನೂ ಹೈಬ್ರಿಡ್​ ಮಾದರಿಯಲ್ಲಿ ನಡೆಸುವ ಸೂತ್ರದ ಅನ್ವಯ, ಪಾಕಿಸ್ತಾನ ಈ ಬಾರಿ ಆತಿಥ್ಯವನ್ನು ಉಳಿಸಿಕೊಂಡಿದೆ.

15 ಪಂದ್ಯಗಳು

19 ದಿನಗಳ ಕಾಲ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ಒಳಗೊಂಡ 3 ಲೀಗ್​ ಪಂದ್ಯಗಳು ಮತ್ತು ಒಂದು ಸೆಮಿಫೈನಲ್​ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್​ ಮತ್ತು ಇನ್ನೊಂದು ಸೆಮಿಫೈನಲ್​ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್​ನಲ್ಲಿ ನಿಗದಿಯಾಗಿವೆ. 2ನೇ ಸೆಮಿಫೈನಲ್​ ಮಾರ್ಚ್​ 2ರಂದು ಲಾಹೋರ್​ನಲ್ಲಿ ನಿಗದಿಯಾಗಿದೆ. ಮಾರ್ಚ್​ 9ರಂದು ನಡೆಯುವ ಫೈನಲ್‌ ಪಂದ್ಯ ಲಾಹೋರ್​ನಲ್ಲಿ ನಿಗದಿಯಾಗಿದೆ. ಆದರೆ ಭಾರತ ತಂಡ ಫೈನಲ್​ಗೆ ಅರ್ಹತೆ ಪಡೆದರೆ ಈ ಪಂದ್ಯ ದುಬೈನಲ್ಲಿ ನಡೆಯಲಿದೆ.

ಇದನ್ನೂ ಓದಿ India at ICC Champions Trophy: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತದ ಸಾಧನೆಯ ಹಿನ್ನೋಟ

ಟೂರ್ನಿ ಸ್ವರೂಪ

ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್​ ರಾಬಿನ್​ ಲೀಗ್​ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿ ಫೈನಲ್​ಗೇರಲಿವೆ. 2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಅಗ್ರ 8 ಸ್ಥಾನ ಪಡೆದ ತಂಡಗಳು ಟೂರ್ನಿಗೆ ನೇರ ಅರ್ಹತೆ ಪಡೆದಿತ್ತು.

ಮೀಸಲು ದಿನ

ಲೀಗ್​ ಪಂದ್ಯಗಳಿಗೆ ಮೀಸಲು ದಿನ ಇರುವುದಿಲ್ಲ. ಎರಡು ಸೆಮಿ ಫೈನಲ್‌ ಸೇರಿ ಫೈನಲ್‌ ಪಂದ್ಯಕ್ಕೆ ಮಾತ್ರ ಮೀಸಲು ದಿನ ನಿಗದಿಯಾಗಿದೆ. ಮಾರ್ಚ್​ 10 ಫೈನಲ್​ಗೆ ಮೀಸಲು ದಿನವಾಗಿದೆ.

ಗುಂಪುಗಳು

'ಎ': ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್​, ಬಾಂಗ್ಲಾದೇಶ.

'ಬಿ': ದಕ್ಷಿಣ ಆಫ್ರಿಕಾ, ಆಸ್ಟ್ರೆಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್.

ವೇಳಾಪಟ್ಟಿ

ಫೆ.19 ಪಾಕಿಸ್ತಾನ-ನ್ಯೂಜಿಲೆಂಡ್‌, ಸ್ಥಳ: ಕರಾಚಿ

ಫೆ. 20 ಬಾಂಗ್ಲಾದೇಶ-ಭಾರತ, ಸ್ಥಳ: ದುಬೈ

ಫೆ. 21 ಅಫ್ಘಾನಿಸ್ತಾನ-ದ. ಆಫ್ರಿಕಾ, ಸ್ಥಳ: ಕರಾಚಿ

ಫೆ. 22 ಆಸ್ಟ್ರೆಲಿಯಾ-ಇಂಗ್ಲೆಂಡ್, ಸ್ಥಳ:​ ಲಾಹೋರ್

ಫೆ. 23 ಭಾರತ-ಪಾಕಿಸ್ತಾನ,ಸ್ಥಳ: ದುಬೈ

ಫೆ. 24 ಬಾಂಗ್ಲಾದೇಶ-ನ್ಯೂಜಿಲೆಂಡ್‌, ಸ್ಥಳ:​ ರಾವಲ್ಪಿಂಡಿ

ಫೆ. 25 ಆಸ್ಟ್ರೆಲಿಯಾ-ದ. ಆಫ್ರಿಕಾ, ಸ್ಥಳ: ರಾವಲ್ಪಿಂಡಿ

ಫೆ. 26 ಅಫ್ಘಾನಿಸ್ತಾನ-ಇಂಗ್ಲೆಂಡ್, ಸ್ಥಳ:​ ಲಾಹೋರ್

ಫೆ. 27 ಪಾಕಿಸ್ತಾನ-ಬಾಂಗ್ಲಾದೇಶ, ಸ್ಥಳ: ರಾವಲ್ಪಿಂಡಿ

ಫೆ. 28 ಅಫ್ಘಾನಿಸ್ತಾನ-ಆಸ್ಟ್ರೆಲಿಯಾ, ಸ್ಥಳ: ಲಾಹೋರ್​

ಮಾ. 1 ದಕ್ಷಿಣ ಆಫ್ರಿಕಾ-ಇಂಗ್ಲೆಂಡ್, ಸ್ಥಳ:​ ಕರಾಚಿ

ಮಾ. 2 ಭಾರತ-ನ್ಯೂಜಿಲೆಂಡ್‌, ಸ್ಥಳ:​ ದುಬೈ

ಮಾ. 4 ಸೆಮಿಫೈನಲ್-1, ಸ್ಥಳ: ದುಬೈ

ಮಾ. 5 ಸೆಮಿಫೈನಲ್​-2, ಸ್ಥಳ: ಲಾಹೋರ್​

ಮಾ. 9 ಫೈನಲ್​ -ಸ್ಥಳ: ದುಬೈ/ಲಾಹೋರ್‌

ಎಲ್ಲ ಪಂದ್ಯ ಆರಂಭ: ಮಧ್ಯಾಹ್ನ 2.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್