ಎದುರಾಳಿ ಆಟಗಾರನಿಗೆ ತುಳಿದರೂ ರೆಡ್ ಕಾರ್ಡ್ ಪಡೆಯದ ಮೆಸ್ಸಿ; ವಿವಾದಾತ್ಮಕ ವಿಡಿಯೊ ವೈರಲ್
Lionel Messi: ರೆಫರಿ ಶಿಳ್ಳೆ ಹೊಡೆದು ಅಲ್ಜೀರಿಯಾಕ್ಕೆ ಫ್ರೀ ಕಿಕ್ ನೀಡಿದರು, ಆದರೆ ಟ್ಯಾಕಲ್‌ನ ಅಜಾಗರೂಕತೆಯ ಹೊರತಾಗಿಯೂ ಮೆಸ್ಸಿಯ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳದಿದ್ದ ಬಗ್ಗೆ ಹಲವು ಫುಟ್ಬಾಲ್ ಅಭಿಮಾನಿಗಳು ಮತ್ತು ನೆಟ್ಟಿಗರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಆಕ್ರೋಶದ ಕಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ. ಮೆಸ್ಸಿ ಹ್ಯಾಟ್ರಿಕ್ ಗೋಲು ಬಾರಿಸಿದರೂ ಅವರ ಈ ಕೆಟ್ಟ ವರ್ತನೆಗೆ ದಿಕ್ಕಾರ ಎಂದಿದ್ದಾರೆ.
Lionel Messi -
ಕಾನ್ಸಾಸ್, ಜೂ. 17: ಭಾರತೀಯ ಕಾಲಮಾನ ಬುಧವಾರ ಬೆಳಗ್ಗೆ ನಡೆದ ಅಲ್ಜೀರಿಯಾ ವಿರುದ್ಧದ ಗ್ರೂಪ್ ʼಜೆʼ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಭರ್ಜರಿ ಗೆಲುವು ಸಾಧಿಸಿತು. ತಂಡದ ನಾಯಕ 39 ವರ್ಷದ ಲಿಯೋನೆಲ್ ಮೆಸ್ಸಿ(Lionel Messi) ರೋಮಾಂಚಕ ಹ್ಯಾಟ್ರಿಕ್ ಗೋಲು ಗಳಿಸುವ ಮೂಲಕ ಗೆಲುವಿನ ಹೀರೋ ಎನಿಸಿಕೊಂಡರು. ಆದರೆ ಮೆಸ್ಸಿ ಮೈದಾನದಲ್ಲಿ ಎದುರಾಳಿ ಆಟಗಾರನಿಗೆ ತುಳಿದಿದ್ದರೂ ಅವರಿಗೆ ರೆಫರಿ ರೆಡ್ ಕಾರ್ಡ್ ನೀಡದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಅರ್ಜೆಂಟೀನಾ ಪರ 17ನೇ ನಿಮಿಷದಲ್ಲಿ ಗೋಲು ಬಾರಿಸಿದ ಮೆಸ್ಸಿ ಅವರು ಗೋಲು ಗಳಿಸಿದ ಸ್ವಲ್ಪ ಸಮಯದ ನಂತರ, ಅಲ್ಜೀರಿಯಾದ ಐಸಾ ಮಂಡಿ ಅವರ ಕಾಲಿಗೆ ತುಳಿದರು. ಈ ವೇಳೆ ಐಸಾ ಮೈದಾನದಲ್ಲಿ ಕುಸಿದು ಬಿದ್ದರು. ತಕ್ಷಣ ಮೆಸ್ಸಿ ಇದು ಉದ್ದೇಶಪೂರ್ವಕವಲ್ಲ ಎನ್ನುವ ಸನ್ನೆ ಮಾಡಿದರೂ ನಗುತ್ತಲೇ ಇದ್ದರು. ವಿಡಿಯೊದಲ್ಲಿ ಸ್ಪಷ್ಟವಾಗಿ ಮೆಸ್ಸಿ ತುಳಿಯುವ ದೃಶ್ಯ ಕಂಡು ಬಂದರೂ ಕೂಡ ರೆಫರಿ ಎಲ್ಲೋ ಅಥವಾ ರೆಡ್ ಕಾರ್ಡ್ ನೀಡದೆ ಇದ್ದದ್ದು ಈಗ ಭಾರೀ ವಿವಾದ ಸೃಷ್ಟಿಸಿದೆ.
Messi just got away with an absolutely DISGUSTING challenge to an Algeria defenders leg.
— Banter FC (@FCBanter_) June 17, 2026
Red card or not?pic.twitter.com/2ZU2B5j4oH
ರೆಫರಿ ಶಿಳ್ಳೆ ಹೊಡೆದು ಅಲ್ಜೀರಿಯಾಕ್ಕೆ ಫ್ರೀ ಕಿಕ್ ನೀಡಿದರು, ಆದರೆ ಟ್ಯಾಕಲ್‌ನ ಅಜಾಗರೂಕತೆಯ ಹೊರತಾಗಿಯೂ ಮೆಸ್ಸಿಯ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳದಿದ್ದ ಬಗ್ಗೆ ಹಲವು ಫುಟ್ಬಾಲ್ ಅಭಿಮಾನಿಗಳು ಮತ್ತು ನೆಟ್ಟಿಗರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಆಕ್ರೋಶದ ಕಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ. ಮೆಸ್ಸಿ ಹ್ಯಾಟ್ರಿಕ್ ಗೋಲು ಬಾರಿಸಿದರೂ ಅವರ ಈ ಕೆಟ್ಟ ವರ್ತನೆಗೆ ದಿಕ್ಕಾರ ಎಂದಿದ್ದಾರೆ.
"ಅತ್ಯಂತ ಸ್ಪಷ್ಟವಾದ ಕೆಂಪು ಕಾರ್ಡ್, ಆದರೆ ಕನಿಷ್ಠ ಹಳದಿ ಕಾರ್ಡ್ ಕೂಡ ಸಿಗಲಿಲ್ಲ, ರಿವ್ಯೂ ಪರಿಶೀಲನೆಯ ನಂತರವೂ ತಪ್ಪು ಬೆಳಕಿಗೆ ಬರಲಿಲ್ಲ" ಎಂದು ಒಬ್ಬ ಅಭಿಮಾನಿ ಪೋಸ್ಟ್ ಮಾಡಿದ್ದಾರೆ.
Red card ♦️ for Lionel Messi, oh sorry, not even a yellow card 😵💫
— Ajay Jadeja (@AjayJadeja171) June 17, 2026
The South Africans were awarded two red cards, even though one was not even a yellow card, while FIFA'S favourite, Messi, got a clean chit, such a shame 🤪pic.twitter.com/NAS5Gyd8RO
39 ವರ್ಷದ ಮೆಸ್ಸಿ ಅರ್ಜೆಂಟೀನಾ ಪರ ವಿಶ್ವಕಪ್‌ನಲ್ಲಿ ಗೋಲು ಗಳಿಸುತ್ತಿದ್ದಂತೆ ಅರ್ಜೆಂಟೀನಾ ತಂಡದ ಪರ ಗೋಲು ಗಳಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ಅಪರೂಪದ ದಾಖಲೆಯನ್ನೂ ತಮ್ಮದಾಗಿಸಿಕೊಂಡರು.
ಎಂಬಪ್ಪೆ ಅವಳಿ ಗೋಲು; ಸೆನೆಗಲ್ ವಿರುದ್ಧ ಫ್ರಾನ್ಸ್‌ಗೆ 3-1 ಅಂತರದ ಗೆಲುವು
ಆರು ಫಿಫಾ ವಿಶ್ವಕಪ್‌ಗಳಲ್ಲಿ ಆಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಮೆಸ್ಸಿ ಪಾತ್ರರಾದರು. ಮೆಸ್ಸಿ 2006ರ ಜೂನ್‌ನಲ್ಲಿ 17ರಂದು ಸರ್ಬಿಯಾ ವಿರುದ್ಧ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ್ದರು. ಇಂದಿಗೆ ಅವರ ವಿಶ್ವಕಪ್ ಪಯಣಕ್ಕೆ 20 ವರ್ಷಗಳು ತುಂಬಿವೆ. ಈ ಸ್ಮರಣೀಯ ದಿನದಂದೇ ಅವರು ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿ ಮೆರೆದಾಡಿದರು. ಮೆಸ್ಸಿಗೆ ಇದು 200ನೇ ಅಂತರರಾಷ್ಟ್ರೀಯ ಪಂದ್ಯವೂ ಹೌದು.