ಭಾರತದ ಬಿಗಿ ಹಿಡಿತದಲ್ಲಿ ಮುಲ್ಲನ್‌ಪುರ ಟೆಸ್ಟ್; ಫಾಲೋ ಆನ್ ಭೀತಿಯಲ್ಲಿ ಆಫ್ಘಾನ್
India vs Afghanistan: 2ನೇ ದಿನದಾಟದಲ್ಲಿ ವಾಷಿಂಗ್ಟನ್ ಸುಂದರ್ ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸುಂದರ್ 68 ಎಸೆತಗಳಿಂದ 52 ರನ್ ಬಾರಿಸಿದರು. ಅವರ ಅರ್ಧಶತಕ ಪೂರ್ತಿಗೊಳಿಸುತ್ತಿದ್ದಂತೆ ಭಾರತ ಡಿಕ್ಲೇರ್ ಘೋಷಿಸಿತು.
Afghanistan -
ಮುಲ್ಲನ್‌ಪುರ, ಜೂ.7: ಭಾರತ ವಿರುದ್ಧ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಫ್ಘಾನಿಸ್ತಾನ(India vs Afghanistan) ಫಾಲೋ ಆನ್ ಭೀತಿಯಲ್ಲಿದೆ. ಭಾರತ 8ಕ್ಕೆ 564ರನ್ ಗಳಿಸಿದರೆ, ಆಫ್ಘಾನ್ 113 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದು, ಇನ್ನೂ 451 ರನ್‌ಗಳ ಹಿನ್ನಡೆಯಲ್ಲಿದೆ. ಮೂರು ದಿನಗಳ ಆಟ ಕೂಡ ಬಾಕಿ ಇರುವ ಕಾರಣ ಭಾರತ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ.
ಭಾರತದ ಬೃಹತ್ ಮೊತ್ತವನ್ನು ಬೆನ್ನಟ್ಟಿಸಲಾರಂಭಿಸಿದ ಆಫ್ಘಾನ್ ತಂಡಕ್ಕೆ ಪದಾರ್ಪಣ ಪಂದ್ಯವನ್ನಾಡಿದ ಮಾನವ್ ಸುತಾರ್ ತಾನೇಸೆದ ಮೊದಲ ಓವರ್‌ನಲ್ಲಿಯೇ ಆಘಾತವಿಕ್ಕಿದರು. ಅಬ್ದುಲ್ ಮಲಿಕ್(16) ವಿಕೆಟ್ ಕಿತ್ತು ಚೊಚ್ಚಲ ಅಂತಾರಾಷ್ಟ್ರೀಯ ವಿಕೆಟ್ ಖಾತೆ ತೆರೆದರು. ದಿನದಾಟದ ಅಂತ್ಯಕ್ಕೆ 21 ರನ್‌ಗೆ ಒಟ್ಟಾರೆ ಮೂರು ವಿಕೆಟ್ ಕಿತ್ತರು. ಸದ್ಯ ರಹಮತ್ ಶಾ 43 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಫ್ಸರ್ ಜಜೈ(3) ವಿಕೆಟ್ ಪತನಗೊಳ್ಳುತ್ತಿದ್ದಂತೆ ದಿನದಾಟ ಮುಕ್ತಾಯಗೊಳಿಸಲಾಯಿತು. ನಾಯಕ ಹಶ್ಮತುಲ್ಲಾ ಶಾಹಿದಿ(20), ಆರಂಭಕಾರ ಸೇದಿಕುಲ್ಲಾ ಅಟಲ್(17) ಸಣ್ಣ ಮೊತ್ತಕ್ಕೆ ವಿಕೆಟ್ ಕಳೆದುಕೊಂಡರು. ಕನ್ನಡಿಗ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದರು.
ಡಾನ್ ಬ್ರಾಡ್ಮನ್ ಜತೆ ಎಲೈಟ್ ಪಟ್ಟಿ ಸೇರಿದ ಶುಭಮನ್ ಗಿಲ್
ಇದಕ್ಕೂ ಮುನ್ನ 3 ವಿಕೆಟ್ ನಷ್ಟಕ್ಕೆ 368 ರನ್ ಗಳಿಸಿದ್ದಲ್ಲಿಂದ ಭಾನುವಾರ 2ನೇ ದಿನದಾಟ ಆರಂಭಿಸಿದ ಭಾರತ 196ರನ್ ಕಲೆಹಾಕಿ ಒಟ್ಟಾರೆ 564ರನ್‌ಗಳಿಸಿತು. 103 ರನ್ ಗಳಿಸಿದ್ದ ಶುಭಮನ್ ಗಿಲ್ 23 ರನ್ ಗಳಿಸಿ ಒಟ್ಟಾರೆ 126ರನ್ ಬಾರಿಸಿದರು. 50 ರನ್ ಗಳಿಸಿದ್ದ ರಿಷಭ್ ಪಂತ್ ತಮ್ಮ ಮೊತ್ತವನ್ನು 81ರನ್‌ಗೆ ವಿಸ್ತರಿಸಿದರು.ಈ ಜೋಡಿ 4 ವಿಕೆಟ್‌ಗೆ 169 ರನ್ ಒಟ್ಟುಗೂಡಿಸಿತು.
Stumps on Day 2️⃣
— BCCI (@BCCI) June 7, 2026
A fantastic bowling effort led by debutant Manav Suthar's 3️⃣ wickets 👏
We will begin Day 3 with #TeamIndia ahead by 451 runs 💪
Scorecard ▶️ https://t.co/Au50EfVM30#INDvAFG | @IDFCFIRSTBank pic.twitter.com/BOIhdoFz8W
2ನೇ ದಿನದಾಟದಲ್ಲಿ ವಾಷಿಂಗ್ಟನ್ ಸುಂದರ್ ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸುಂದರ್ 68 ಎಸೆತಗಳಿಂದ 52 ರನ್ ಬಾರಿಸಿದರು. ಅವರ ಅರ್ಧಶತಕ ಪೂರ್ತಿಗೊಳಿಸುತ್ತಿದ್ದಂತೆ ಭಾರತ ಡಿಕ್ಲೇರ್ ಘೋಷಿಸಿತು.
ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ ಆಲ್‌ರೌಂಡರ್ ಮಾನವ್ ಸುತಾರ್ ತಲಾ ಎರಡು ಸಿಕ್ಸರ್ ಮತ್ತು ಬೌಂಡರಿ ನೆರವಿನಿಂದ 28ರನ್ ಗಳಿಸಿದರು. ಅಂತಿಮ ಹಂತದಲ್ಲಿ ವೇಗಿ ಮೊಹಮ್ಮದ್ ಸಿರಾಜ್ 22 ರನ್ ಕೊಡುಗೆ ನೀಡಿದರು. ಆಫ್ಘಾನ್ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಮೊಹಮ್ಮದ್ ಸಲೀಂ 6 ವಿಕೆಟ್ ಪಡೆದರು.