ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶ್ರೀಲಂಕಾ ವಿರುದ್ಧದ ಮಹಿಳಾ 5 ಟಿ20 ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

India vs Sri Lanka Women’s T20I series: ಶ್ರೀಲಂಕಾ ವಿರುದ್ಧದ ಸರಣಿಯ ನಂತರ ಮಹಿಳಾ ಪ್ರೀಮಿಯರ್ ಲೀಗ್ (WPL) ನ ನಾಲ್ಕನೇ ಸೀಸನ್ ನಡೆಯಲಿದ್ದು, ನಂತರ ಭಾರತವು ಫೆಬ್ರವರಿ-ಮಾರ್ಚ್‌ನಲ್ಲಿ ಬಹು-ಸ್ವರೂಪದ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.

ಶ್ರೀಲಂಕಾ ವಿರುದ್ಧದ ಮಹಿಳಾ 5 ಟಿ20 ಪಂದ್ಯಗಳ ವೇಳಾಪಟ್ಟಿ ಪ್ರಕಟ

Indian women's cricket team (file photo) -

Abhilash BC
Abhilash BC Nov 28, 2025 3:22 PM

ನವದೆಹಲಿ: ಏಕದಿನ ವಿಶ್ವಕಪ್ ಗೆಲುವಿನ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತವರಿನಲ್ಲಿ ಮೊದಲ ಸರಣಿಯನ್ನಾಡಲು ಸಜ್ಜಾಗಿದೆ. ಪ್ರವಾಸಿ ಶ್ರೀಲಂಕಾ(India vs Sri Lanka) ವಿರುದ್ಧ 5 ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ(BCCI) ಶುಕ್ರವಾರ ಪ್ರಕಟಿಸಿದೆ.

ಡಿಸೆಂಬರ್ 21 ರಿಂದ 30 ರವರೆಗೆ ವಿಶಾಖಪಟ್ಟಣ ಮತ್ತು ತಿರುವನಂತಪುರದಲ್ಲಿ ಪಂದ್ಯಗಳು ನಡೆಯಲಿವೆ. ಇದೇ ಅವಧಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಬಾಂಗ್ಲಾದೇಶ ವಿರುದ್ಧ ತವರು ಸರಣಿಯನ್ನು ಆಡಬೇಕಿತ್ತು, ಆದರೆ ನಂತರ ಎರಡೂ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಅದನ್ನು ಮುಂದೂಡಲಾಗಿತ್ತು.

2016 ರ ನಂತರ ಲಂಕಾ ತಂಡವು ಭಾರತದಲ್ಲಿ ಮೊದಲ ಬಾರಿಗೆ ಟಿ 20 ಐ ದ್ವಿಪಕ್ಷೀಯ ಸರಣಿಯನ್ನು ಆಡಲಿದೆ. ಕೊನೆಯ ಸರಣಿಯಲ್ಲಿ ಆತಿಥೇಯ ಭಾರತವು ಆ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು. ಶ್ರೀಲಂಕಾ ವಿರುದ್ಧದ ಸರಣಿಯ ನಂತರ ಮಹಿಳಾ ಪ್ರೀಮಿಯರ್ ಲೀಗ್ (WPL) ನ ನಾಲ್ಕನೇ ಸೀಸನ್ ನಡೆಯಲಿದ್ದು, ನಂತರ ಭಾರತವು ಫೆಬ್ರವರಿ-ಮಾರ್ಚ್‌ನಲ್ಲಿ ಬಹು-ಸ್ವರೂಪದ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.

ಇದನ್ನೂ ಓದಿ IND vs SA: ರಾಂಚಿಯಲ್ಲಿ ಬ್ಯಾಟಿಂಗ್‌ ಅಭ್ಯಾಸ ಆರಂಭಿಸಿದ ಕೊಹ್ಲಿ, ರೋಹಿತ್‌

ಸರಣಿಯ ವೇಳಾಪಟ್ಟಿ

1ನೇ T20I - ಡಿಸೆಂಬರ್ 21 - ವಿಶಾಖಪಟ್ಟಣ

2ನೇ T20I - ಡಿಸೆಂಬರ್ 23 - ವಿಶಾಖಪಟ್ಟಣ

3 ನೇ T20I - ಡಿಸೆಂಬರ್ 26 - ತಿರುವನಂತಪುರಂ

4 ನೇ T20I - ಡಿಸೆಂಬರ್ 28 - ತಿರುವನಂತಪುರಂ

5 ನೇ T20I - ಡಿಸೆಂಬರ್ 30 - ತಿರುವನಂತಪುರಂ