ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

3-ಇನ್-1 ಖಾತೆಗಾಗಿ ಆಕ್ಸಿಸ್ ಸೆಕ್ಯುರಿಟೀಸ್ ಜೊತೆ ಪಾಲುದಾರಿಕೆ ಘೋಷಿಸಿದ ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಆಕ್ಸಿಸ್ ಸೆಕ್ಯುರಿಟೀಸ್ನ ಪರಿಣತಿಯೊಂದಿಗೆ, ಗ್ರಾಹಕರು ಈಗ ಸುಧಾರಿತ ವ್ಯಾಪಾರ ವೇದಿಕೆಗಳು, ಹೊಂದಿ ಕೊಳ್ಳುವ ಬ್ರೋಕರೇಜ್ ಯೋಜನೆಗಳು ಮತ್ತು ಆಳವಾದ ಸಂಶೋಧನಾ ಒಳನೋಟ ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಇವೆಲ್ಲವನ್ನು ಹೂಡಿಕೆಯನ್ನು ಸರಳೀಕರಿಸಲು ಮತ್ತು ಗ್ರಾಹಕರಿಗೆ ಅವರ ಹಣಕಾಸಿನ ಗುರಿಗಳನ್ನು ಸಾಧಿಸುವುದಕ್ಕಾಗಿ ಸಹಾಯ ಮಾಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.

3-ಇನ್-1 ಖಾತೆಗಾಗಿ ಆಕ್ಸಿಸ್ ಸೆಕ್ಯುರಿಟೀಸ್ ಜೊತೆ ಪಾಲುದಾರಿಕೆ

-

Ashok Nayak
Ashok Nayak Nov 28, 2025 4:13 PM

ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿಮಿಟೆಡ್(Utkarsh Small Finance Bank) (ಉತ್ಕರ್ಷ್ SFBL) ಇಂದು ತನ್ನ ಗ್ರಾಹಕರಿಗೆ ಸಮಗ್ರ ವ್ಯಾಪಾರ ಮತ್ತು ಹೂಡಿಕೆ ಸೇವೆಗಳನ್ನು ಒದಗಿಸುವುದಕ್ಕಾಗಿ ಆಕ್ಸಿಸ್ ಸೆಕ್ಯುರಿಟೀಸ್ ಜೊತೆ ಕಾರ್ಯತಂತ್ರದ ಪಾಲುದಾರಿಕೆ ಘೋಷಿಸಿದೆ. ಮುಂದಿನ ಪೀಳಿಗೆಯ ಹಣಕಾಸು ಪರಿಹಾರ ಗಳನ್ನು ತಲುಪಿಸುವ ಉದ್ದೇಶಕ್ಕಾಗಿ ಬ್ಯಾಂಕಿನ ಸಾಮರ್ಥ್ಯಗಳನ್ನು ವಿಸ್ತರಿಸುವಲ್ಲಿ ಈ ಸಹಯೋಗ ವು ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ.

ಈ ಪಾಲುದಾರಿಕೆಯು ವಿಶಿಷ್ಟವಾದ 3-ಇನ್-1 ಖಾತೆಯನ್ನು ಪರಿಚಯಿಸುತ್ತಿದ್ದು, ಇದು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನೊಂದಿಗೆ ಉಳಿತಾಯ ಖಾತೆ ಹಾಗೂ ಆಕ್ಸಿಸ್ ಸೆಕ್ಯುರಿಟೀಸ್ನಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ಸರಾಗವಾಗಿ ಸಂಯೋಜಿಸುತ್ತದೆ. ಈ ಕೊಡುಗೆಯನ್ನು ಗ್ರಾಹಕರಿಗೆ ಬ್ಯಾಂಕಿಂಗ್ ಮತ್ತು ಹೂಡಿಕೆಗಾಗಿ ಅನುಕೂಲಕರವಾಗಿರುವಂತಹ ಸಮಗ್ರ ವೇದಿಕೆ ಒದಗಿಸುವು ದಕ್ಕಾಗಿ ವಿನ್ಯಾಸಗೊಳಿಸಲಾಗಿದೆ.

ಉಳಿತಾಯ ಮತ್ತು ಚಾಲ್ತಿ ಖಾತೆಗಳು (ಕರೆಂಟ್ ಅಕೌಂಟ್ಗಳು), ಠೇವಣಿಗಳು, ಸಾಲಗಳು, ವಿಮೆ ಮತ್ತು ಹೂಡಿಕೆ ಉತ್ಪನ್ನಗಳು ಸೇರಿದಂತೆ ಸಂಪೂರ್ಣ ಶ್ರೇಣಿಯ ಹಣಕಾಸು ಸೇವೆಗಳನ್ನು ನೀಡುವ ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ಕಾರ್ಯತಂತ್ರದೊಂದಿಗೆ ಹೊಂದಿಕೊಂಡಂತೆ, ಆಕ್ಸಿಸ್ ಸೆಕ್ಯುರಿಟೀಸ್ನೊಂದಿಗಿನ ಈ ಪಾಲುದಾರಿಕೆಯು ಗ್ರಾಹಕರು ಶಾಖೆಗಳು, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ನೆರವಿನ ಸೇವೆಗಳಂತಹ ಬಹು ಚಾನೆಲ್ಗಳ ಮೂಲಕ ಬ್ಯಾಂಕಿಂಗ್ ಮತ್ತು ಹೂಡಿಕೆಯನ್ನು ಸರಾಗವಾಗಿ ಸಂಯೋಜಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ:

ಆಕ್ಸಿಸ್ ಸೆಕ್ಯುರಿಟೀಸ್ನ ಪರಿಣತಿಯೊಂದಿಗೆ, ಗ್ರಾಹಕರು ಈಗ ಸುಧಾರಿತ ವ್ಯಾಪಾರ ವೇದಿಕೆಗಳು, ಹೊಂದಿಕೊಳ್ಳುವ ಬ್ರೋಕರೇಜ್ ಯೋಜನೆಗಳು ಮತ್ತು ಆಳವಾದ ಸಂಶೋಧನಾ ಒಳನೋಟ ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಇವೆಲ್ಲವನ್ನು ಹೂಡಿಕೆಯನ್ನು ಸರಳೀಕರಿಸಲು ಮತ್ತು ಗ್ರಾಹಕರಿಗೆ ಅವರ ಹಣಕಾಸಿನ ಗುರಿಗಳನ್ನು ಸಾಧಿಸುವುದಕ್ಕಾಗಿ ಸಹಾಯ ಮಾಡುವ ಉದ್ದೇಶ ದಿಂದ ವಿನ್ಯಾಸಗೊಳಿಸಲಾಗಿದೆ. ಈ ಸಹಯೋಗವು ಅನುಕೂಲತೆ, ಆಯ್ಕೆ ಮತ್ತು ವಿಶ್ವಾಸವನ್ನು ನೀಡುವುದರೊಂದಿಗೆ ಬಲವಾದ ಆರ್ಥಿಕ ಭವಿಷ್ಯವನ್ನು ನಿರ್ಮಿಸುವಲ್ಲಿ ಗ್ರಾಹಕರನ್ನು ಸಬಲ ಗೊಳಿಸುತ್ತದೆ.

ಉತ್ಕರ್ಷ್ ಸ್ಮಾಲ್ ಫೈನಾನ್ಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಆದ ಗೋವಿಂದ್ ಸಿಂಗ್ ಅವರು, ಪಾಲುದಾರಿಕೆಯ ಬಗ್ಗೆ ಮಾತನಾಡುತ್ತಾ, “ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕಿನಲ್ಲಿ, ನಮ್ಮ ಗ್ರಾಹಕರಿಗೆ ಸಮಗ್ರ ಹಣಕಾಸು ಪರಿಹಾರಗಳನ್ನು ತಲುಪಿಸಲು ನಾವು ಬದ್ಧರಾಗಿದ್ದೇವೆ. ಆಕ್ಸಿಸ್ ಸೆಕ್ಯುರಿಟೀಸ್ನೊಂದಿಗಿನ ಈ ಕಾರ್ಯತಂತ್ರದ ಮೈತ್ರಿಯು ನಮ್ಮ ಸೇವಾ ಪ್ರತಿಪಾದನೆಯನ್ನು ಬಲಪಡಿಸುವುದರ ಜೊತೆಗೆ ಗ್ರಾಹಕರು ಸರಾಗವಾಗಿ ಹೂಡಿಕೆ ಮಾಡಲು ಮತ್ತು ದೀರ್ಘಾವಧಿಯ ಸಂಪತ್ತನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ವೈವಿಧ್ಯಮಯ ಗ್ರಾಹಕ ವಿಭಾಗಗಳನ್ನು ಪೂರೈಸಲು ಮತ್ತು ಗ್ರಾಹಕರ ಒಟ್ಟಾರೆ ಬ್ಯಾಂಕಿಂಗ್ ಅನುಭವವನ್ನು ಹೆಚ್ಚಿಸಲು ನಾವು ಈ ಕೊಡುಗೆಯನ್ನು ವಿನ್ಯಾಸಗೊಳಿಸಿದ್ದೇವೆ” ಎಂದು ಹೇಳಿದರು.

ಆಕ್ಸಿಸ್ ಸೆಕ್ಯುರಿಟೀಸ್ನ MD ಮತ್ತು CEO ಆದ ಪ್ರಣವ್ ಹರಿದಾಸನ್ ಅವರು ಈ ಸಹಯೋಗದ ಬಗ್ಗೆ ಪ್ರತಿಕ್ರಿಯಿಸುತ್ತಾ, “ನಾವು ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನೊಂದಿಗೆ ಪಾಲುದಾರಿಕೆಯನ್ನು ಹೊಂದಲು ಮತ್ತು ನಮ್ಮ ಹೂಡಿಕೆ ಹಾಗೂ ವ್ಯಾಪಾರ ಪರಿಹಾರಗಳನ್ನು ಬ್ಯಾಂಕ್ನ ಗ್ರಾಹಕರಿಗೆ ವಿಸ್ತರಿಸಲು ಉತ್ಸುಕರಾಗಿದ್ದೇವೆ. ನಮ್ಮ ತಂತ್ರಜ್ಞಾನ ಆಧಾರಿತ ವೇದಿಕೆಗಳು, ಸಂಶೋಧನಾ ಸಾಮರ್ಥ್ಯಗಳು ಮತ್ತು ಸಮಗ್ರ ಉತ್ಪನ್ನ ಸೂಟ್ ಮೂಲಕ, ಹೂಡಿಕೆಯನ್ನು ಸರಳ, ಅರ್ಥಗರ್ಭಿತ ಮತ್ತು ಹೆಚ್ಚು ಲಭ್ಯವಾಗುವ ಹಾಗೆ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಗ್ರಾಹಕರಿಗೆ ಅರ್ಥಪೂರ್ಣವಾದ ಮೌಲ್ಯವನ್ನು ನೀಡುವಂತಹ ದೀರ್ಘಾವಧಿಯ ಪಾಲುದಾರಿಕೆಯನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.

ಉತ್ಕರ್ಷ್ SFBL, ಮೈಕ್ರೋ-ಬ್ಯಾಂಕಿಂಗ್ ಸಾಲಗಳು (JLG ಸಾಲಗಳು), MSME ಸಾಲಗಳು, ಗೃಹ ಸಾಲಗಳು ಮತ್ತು ಆಸ್ತಿ ಮೇಲಿನ ಸಾಲಗಳಂತಹ ಉತ್ಪನ್ನಗಳನ್ನು ನೀಡುವುದರ ಜೊತೆಗೆ, ಕಡಿಮೆ ಸೇವೆಯನ್ನು ಪಡೆಯುತ್ತಿರುವ ಮತ್ತು ಸೇವೆಯನ್ನು ಪಡೆಯದ ವಿಭಾಗಗಳಿಗೆ ಸೇವೆಯನ್ನು ನೀಡುವುದರ ಕಡೆ ಗಮನ ಹರಿಸುವುದನ್ನು ಮುಂದುವರೆಸಿದೆ. ಬ್ಯಾಂಕ್ ತನ್ನ ಟ್ಯಾಬ್ಲೆಟ್ ಆಧಾರಿತ ನೆರವಿನ ಮಾದರಿಯಾದ ʼಡಿಜಿ ಆನ್-ಬೋರ್ಡಿಂಗ್ʼ ಮೂಲಕ ಅನುಕಲಕರವಾದ ದಿಜಿಟಲ್ ಆನ್ಬೋರ್ಡಿಂಗ್ ಸೌಲಭ್ಯವನ್ನು ಸಹ ಒದಗಿಸುತ್ತಿದ್ದು, ಇದು ಗ್ರಾಹಕರು ಶಾಖೆಗೆ ಭೇಟಿ ನೀಡದೆ ಖಾತೆಗಳನ್ನು ತೆರೆಯಲು ಅನುವು ಮಾಡಿಕೊಡುತ್ತದೆ.