IPL 2025 jerseys: ಬಿಸಿಸಿಐ ಕಚೇರಿಯಿಂದ 6.5 ಲಕ್ಷ ರೂ. ಮೌಲ್ಯದ ಐಪಿಎಲ್ ಜೆರ್ಸಿ ಕಳವು
ಆನ್‌ಲೈನ್ ಜೂಜಾಟದ ಚಟಕ್ಕೆ ಹಣಕಾಸು ಒದಗಿಸಲು ಅಸ್ಲಂ ಖಾನ್ ಅವುಗಳನ್ನು ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೆರ್ಸಿಗಳನ್ನು ಹರಿಯಾಣದ ಆನ್‌ಲೈನ್ ಡೀಲರ್‌ಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಬೆಳೆಸಿ ಈ ಕೃತ್ಯ ಮಾಡಿದ್ದಾನೆ.


ನವದೆಹಲಿ: 2025ರ 18ನೇ ಆವೃತ್ತಿಯ ಐಪಿಎಲ್ ಟೂರ್ನಿ(IPL 2025) ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣ ಸಮೀಪ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ದುರ್ಘಟನೆ ಸಂಭವಿಸಿತ್ತು. ಇದೀಗ ಬಿಸಿಸಿಐ ಕಚೇರಿಯಿಂದ 6.5 ಲಕ್ಷ ರೂ.ಮೌಲ್ಯದ ಐಪಿಎಲ್ 2025ರ ಜೆರ್ಸಿಗಳು(IPL 2025 jerseys) ಕಳ್ಳತನವಾದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಚೇರಿಯಿಂದ 6.5 ಲಕ್ಷ ರೂಪಾಯಿ ಮೌಲ್ಯದ ಐಪಿಎಲ್ 2025 ಜೆರ್ಸಿಗಳನ್ನು ಕಳವು ಮಾಡಲಾಗಿದೆ ಎಂದು ವರದಿಯಾಗಿದೆ. 40 ವರ್ಷದ ಭದ್ರತಾ ಸಿಬ್ಬಂದಿ ದರೋಡೆಯ ಹಿಂದಿನ ಅಪರಾಧಿಯಾಗಿದ್ದು, ಆತನನ್ನು ಬಂಧಿಸಲಾಗಿದೆ. ವರದಿಯ ಪ್ರಕಾರ, ಬಂಧಿತ ಗಾರ್ಡ್ ಫಾರೂಕ್ ಅಸ್ಲಂ ಖಾನ್ 261 ಜೆರ್ಸಿಗಳನ್ನು ಕದ್ದಿದ್ದು, ಪ್ರತಿಯೊಂದೂ ಸುಮಾರು 2500 ರೂಪಾಯಿಗಳ ಬೆಲೆಬಾಳುವ ಜೆರ್ಸಿಯಾಗಿತ್ತು ಎಂದು ತಿಳಿದುಬಂದಿದೆ.
ಆನ್‌ಲೈನ್ ಜೂಜಾಟದ ಚಟಕ್ಕೆ ಹಣಕಾಸು ಒದಗಿಸಲು ಅಸ್ಲಂ ಖಾನ್ ಅವುಗಳನ್ನು ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೆರ್ಸಿಗಳನ್ನು ಹರಿಯಾಣದ ಆನ್‌ಲೈನ್ ಡೀಲರ್‌ಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಬೆಳೆಸಿ ಈ ಕೃತ್ಯ ಮಾಡಿದ್ದಾನೆ.
ಸ್ಟೋರ್ ರೂಮಿನಿಂದ ಸ್ಟಾಕ್ ಕಾಣೆಯಾಗಿದೆ ಎಂದು ಲೆಕ್ಕಪರಿಶೋಧನೆಯಲ್ಲಿ ತೋರಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ನಂತರ ಬಿಸಿಸಿಐ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಗಾರ್ಡ್ ಅಸ್ಲಂ ಖಾನ್ ಪೆಟ್ಟಿಗೆಯಲ್ಲಿ ಜೆರ್ಸಿಗಳೊಂದಿಗೆ ಹೊರಟು ಹೋಗುತ್ತಿರುವುದು ಕಂಡುಬಂದಿದೆ.
ಜೆರ್ಸಿಗಳು ಕಳ್ಳತನ ಮಾಡಿದ್ದು ಎಂದು ತಿಳಿದಿರಲಿಲ್ಲ. ಕಚೇರಿಯಲ್ಲಿ ನಡೆಯುತ್ತಿರುವ ನವೀಕರಣ ಕಾರ್ಯದ ಕಾರಣದಿಂದಾಗಿ ಜೆರ್ಸಿಗಳು ಸ್ಟಾಕ್ ಕ್ಲಿಯರೆನ್ಸ್ ಮಾರಾಟದ ಭಾಗವಾಗಿದೆ ಎಂದು ಅಸ್ಲಂ ಖಾನ್ ಹೇಳಿದ ಕಾರಣ ನಾವು ಜೆರ್ಸಿಗಳನ್ನು ಖರೀದಿ ಮಾಡಿದ್ದಾಗಿ ಹರಿಯಾಣದ ಆನ್‌ಲೈನ್ ಡೀಲರ್ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ.
ಕಳವಾದ 261 ಜೆರ್ಸಿಗಳ ಪೈಕಿ 50 ಜೆರ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಸ್ಲಂ ಖಾನ್ ಆನ್‌ಲೈನ್ ಡೀಲರ್‌ನಿಂದ ಹಣವನ್ನು ನೇರವಾಗಿ ತನ್ನ ಬ್ಯಾಕ್ ಖಾತೆಗೆ ಪಡೆದಿರುವುದಾಗಿ ಹೇಳಿದರು. ಆನ್‌ಲೈನ್ ಜೂಜಾಟದಿಂದ ತಾನು ಎಲ್ಲಾ ಹಣವನ್ನು ಕಳೆದುಕೊಂಡಿದ್ದೇನೆ ಎಂದು ಅಸ್ಲಂ ಖಾನ್ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ IND vs ENG: IND vs ENG: ಕನ್ನಡಿಗ ಕರುಣ್ ನಾಯರ್‌ರ ಟೆಸ್ಟ್ ವೃತ್ತಿ ಜೀವನ ಅಂತ್ಯ? ಫ್ಯಾನ್ಸ್ ಪ್ರತಿಕ್ರಿಯೆ!