ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಕೊಹ್ಲಿ, ವಾರ್ನರ್‌ ಮಹತ್ವದ ದಾಖಲೆ ಮುರಿಯಲು ಸಜ್ಜಾದ ರಾಹುಲ್‌

129 ಇನ್ನಿಂಗ್ಸ್‌ಗಳಲ್ಲಿ 4,949 ರನ್ ಗಳಿಸಿರುವ ರಾಹುಲ್‌, ಲಕ್ನೋ ವಿರುದ್ಧ 51 ರನ್‌ ಬಾರಿಸಿದರೆ ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಸೇರಿ ಹಲವು ದಿಗ್ಗಜ ಆಟಗಾರರ ದಾಖಲೆಯನ್ನು ಮುರಿದು ಐಪಿಎಲ್‌ನಲ್ಲಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ವೇಗವಾಗಿ 5,000 ಐಪಿಎಲ್ ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಕೊಹ್ಲಿ, ವಾರ್ನರ್‌ ಮಹತ್ವದ ದಾಖಲೆ ಮುರಿಯಲು ಸಜ್ಜಾದ ರಾಹುಲ್‌

Profile Abhilash BC Apr 22, 2025 11:21 AM

ಲಕ್ನೋ: ಮಂಗಳವಾರ (ಏಪ್ರಿಲ್ 22) ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 40 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಡೆಲ್ಲಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಇತಿಹಾಸವೊಂದನ್ನು ನಿರ್ಮಿಸಲು ಸಜ್ಜಾಗಿದ್ದಾರೆ. ಪಂದ್ಯದಲ್ಲಿ 51 ರನ್‌ ಬಾರಿಸಿದರೆ ಐಪಿಎಲ್‌ನಲ್ಲಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ವೇಗವಾಗಿ 5,000 ಐಪಿಎಲ್ ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಲಿದ್ದಾರೆ.

ಸದ್ಯ 129 ಇನ್ನಿಂಗ್ಸ್‌ಗಳಲ್ಲಿ 4,949 ರನ್ ಗಳಿಸಿರುವ ರಾಹುಲ್‌, ಲಕ್ನೋ ವಿರುದ್ಧ 51 ರನ್‌ ಬಾರಿಸಿದರೆ ಡೇವಿಡ್ ವಾರ್ನರ್ ಮತ್ತು ವಿರಾಟ್ ಕೊಹ್ಲಿ ಸೇರಿ ಹಲವು ದಿಗ್ಗಜ ಆಟಗಾರರ ದಾಖಲೆಯನ್ನು ಮುರಿದು ಐಪಿಎಲ್‌ನಲ್ಲಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ವೇಗವಾಗಿ 5,000 ಐಪಿಎಲ್ ರನ್ ಗಳಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ವಾರ್ನರ್‌ 135 ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ಸ್ಥಾಪಿಸಿದ್ದರು. ವಿರಾಟ್‌ ಕೊಹ್ಲಿ(157 ಇನಿಂಗ್ಸ್‌) ದ್ವಿತೀಯ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ವೇಗವಾಗಿ 5 ಸಾವಿರ ರನ್ ಗಳಿಸಿದವರು

ಡೇವಿಡ್ ವಾರ್ನರ್ - 135 ಇನ್ನಿಂಗ್ಸ್

ವಿರಾಟ್ ಕೊಹ್ಲಿ - 158 ಇನ್ನಿಂಗ್ಸ್

ಎಬಿ ಡಿವಿಲಿಯರ್ಸ್ - 161 ಇನ್ನಿಂಗ್ಸ್

ಶಿಖರ್ ಧವನ್ - 168 ಇನ್ನಿಂಗ್ಸ್

ಸುರೇಶ್ ರೈನಾ - 173 ಇನ್ನಿಂಗ್ಸ್

ರೋಹಿತ್ ಶರ್ಮಾ - 187 ಇನ್ನಿಂಗ್ಸ್

ಎಂಎಸ್ ಧೋನಿ - 208 ಇನ್ನಿಂಗ್ಸ್



ಇದನ್ನೂ ಓದಿ IPL 2025: ರಾಜಸ್ಥಾನ್‌ ವಿರುದ್ಧ ಕೇಳಿಬಂತು ಮ್ಯಾಚ್ ಫಿಕ್ಸಿಂಗ್ ಆರೋಪ

ರಾಹುಲ್‌ ಏಕಾನ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಉತ್ತಮ ಬ್ಯಾಟಿಂಗ್‌ ದಾಖಲೆ ಹೊಂದಿದ್ದಾರೆ. 12 ಇನ್ನಿಂಗ್ಸ್‌ಗಳಲ್ಲಿ 43.9 ಸರಾಸರಿಯಲ್ಲಿ 483 ರನ್ ಗಳಿಸಿದ್ದಾರೆ. ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ. ಹೀಗಾಗಿ ಇಂದಿನ ಲಕ್ನೋ ವಿರುದ್ಧದ ಪಂದ್ಯದಲ್ಲಿ ಅವರು ಸಿಡಿಯುವ ನಿರೀಕ್ಷೆ ಮಾಡಬಹುದು.

ಹಾಲಿ ಆವೃತ್ತಿಯಲ್ಲಿಯೂ ರಾಹುಲ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಆಡಿದ 6 ಪಂದ್ಯಗಳಿಂದ 266* ರನ್‌ ಬಾರಿಸಿದ್ದಾರೆ.