IPL 2025: ರಾಜಸ್ಥಾನ್ ವಿರುದ್ಧ ಕೇಳಿಬಂತು ಮ್ಯಾಚ್ ಫಿಕ್ಸಿಂಗ್ ಆರೋಪ
ನ್ಯೂಸ್ 18 ರಾಜಸ್ಥಾನಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಬಿಹಾನಿ, ತಂಡಕ್ಕೆ ಗೆಲ್ಲಲು ಕೆಲವೇ ರನ್‌ಗಳ ಅಗತ್ಯವಿದ್ದರೂ ರಾಜಸ್ಥಾನ್ ಸೋಲು ಕಂಡಿತ್ತು. ಇಲ್ಲಿ ಏನೋ ತಪ್ಪು ನಡೆದಿದೆ. 2013 ರಲ್ಲಿ ರಾಜಸ್ಥಾನ್ ತಂಡದ ಆಟಗಾರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಕ್ಕಿಬಿದ್ದರು. ಇದೀಗ ಈ ಆವೃತ್ತಿಯಲ್ಲಿಯೂ ಫಿಕ್ಸಿಂಗ್ ನಡೆಸಿದಂತೆ ಕಾಣುತ್ತಿದೆ ಎಂದು ಬಿಹಾನಿ ಗಂಭೀರ ಆರೋಪ ಮಾಡಿದ್ದಾರೆ.


ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಫಿಕ್ಸಿಂಗ್ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಬಿಸಿಸಿಐ ಐಪಿಎಲ್(IPL 2025)ನ ಎಲ್ಲ 10 ತಂಡಗಳ ಮಾಲಿಕರು, ಕೋಚ್, ಆಟಗಾರರು ಮತ್ತು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿತ್ತು. ಇದೀಗ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡದ ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ್ ತಂಡ ಆಘಾತಕಾರಿ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ರಾಜಸ್ಥಾನ್ ಕ್ರಿಕೆಟ್ ಅಸೋಸಿಯೇಷನ್ (RCA) ನ ತಾತ್ಕಾಲಿಕ ಸಮಿತಿ ಸಂಚಾಲಕ ಜೈದೀಪ್ ಬಿಹಾನಿ(Jaideep Bihani) ಅವರು ತಂಡದ ವಿರುದ್ಧ ಮ್ಯಾಚ್ ಫಿಕ್ಸಿಂಗ್(match fixing) ಆರೋಪ ಮಾಡಿದ್ದಾರೆ. ಇದೀಗ ಈ ಸುದ್ದಿ ಕ್ರಿಕೆಟ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ರಾಜಸ್ಥಾನ್ ತಂಡ ಈ ಹಿಂದೆ ಫಿಕ್ಸಿಂಗ್ ಪ್ರಕರಣದ ಅಡಿಯಲ್ಲಿ 2 ವರ್ಷಗಳ ಕಾಲ ಐಪಿಎಲ್‌ನಿಂದ ಬ್ಯಾನ್ ಆಗಿತ್ತು.
ಲಕ್ನೋ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ತಂಡಕ್ಕೆ ಗೆಲುವು ಸಾಧಿಸಲು ಕೇವಲ ಒಂಬತ್ತು ರನ್‌ಗಳ ಅಗತ್ಯವಿತ್ತು. ಕೈಯಲ್ಲಿ ಆರು ವಿಕೆಟ್‌ಗಳಿದ್ದವು. ಆದರೆ, ಎಲ್ಲರಿಗೂ ಆಶ್ಚರ್ಯವಾಗುವಂತೆ ರಾಜಸ್ಥಾನ್ ಈ ಮೊತ್ತವನ್ನು ಬಾರಿಸಲಾಗದೆ 2 ರನ್‌ಗಳ ವಿರೋಚಿತ ಸೋಲು ಕಂಡಿತ್ತು. ಇದಕ್ಕೂ ಮುನ್ನ ಡೆಲ್ಲಿ ವಿರುದ್ಧದ ಪಂದ್ಯವನ್ನು ಕೂಡ ಇದೇ ರೀತಿಯಲ್ಲಿ ಕಳೆದುಕೊಂಡಿತ್ತು.
ನ್ಯೂಸ್ 18 ರಾಜಸ್ಥಾನಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಬಿಹಾನಿ, ತಂಡಕ್ಕೆ ಗೆಲ್ಲಲು ಕೆಲವೇ ರನ್‌ಗಳ ಅಗತ್ಯವಿದ್ದರೂ ರಾಜಸ್ಥಾನ್ ಸೋಲು ಕಂಡಿತ್ತು. ಇಲ್ಲಿ ಏನೋ ತಪ್ಪು ನಡೆದಿದೆ. 2013 ರಲ್ಲಿ ರಾಜಸ್ಥಾನ್ ತಂಡದ ಆಟಗಾರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಸಿಕ್ಕಿಬಿದ್ದರು. ಇದೀಗ ಈ ಆವೃತ್ತಿಯಲ್ಲಿಯೂ ಫಿಕ್ಸಿಂಗ್ ನಡೆಸಿದಂತೆ ಕಾಣುತ್ತಿದೆ ಎಂದು ಬಿಹಾನಿ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ IPL 2025: ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಶುಭಮನ್ ಗಿಲ್
ಇತ್ತೀಚೆಗೆ ಹೈದರಾಬಾದ್‌ನ ಉದ್ಯಮಿಯೊಬ್ಬರು ಮ್ಯಾಚ್ ಫಿಕ್ಸಿಂಗ್‌ಗೆ ಯತ್ನಿಸುತ್ತಿದ್ದು ಪಂದ್ಯಾವಳಿಯಲ್ಲಿ ಭಾಗವಹಿಸುವವರೊಂದಿಗೆ ಆಟಗಾರರೊಂದಿಗೆ ಮತ್ತು ಫ್ರಾಂಚೈಸಿ ಮಾಲಕರೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿತ್ತು. ಈ ಉದ್ಯಮಿಗೆ ಬುಕ್ಕಿಗಳೊಂದಿಗೂ ಸಂಪರ್ಕವಿದೆ ಎಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಸಿಸಿಐ ಎಲ್ಲ ತಂಡಗಳಿಗೂ ಎಚ್ಚರಿಕೆ ನೀಡಿತ್ತು.
2013ರಲ್ಲಿ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಶ್ರೀಶಾಂತ್, ಅಜಿತ್ ಚಾಂಡಿಲಾ, ಅಂಕಿತ್ ಚೌಹಾಣ್ ಬಂಧನಕ್ಕೊಳಗಾಗಿ ಐಪಿಎಲ್‌ನಿಂದ ನಿಷೇಧಕ್ಕೊಳಗಾಗಿದ್ದರು. ಬಳಿಕ 2016 ಮತ್ತು 2017ರ ಆವೃತ್ತಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು 2 ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿತ್ತು.