ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Points Table: ಗೆದ್ದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ವಿಫಲವಾದ ಡೆಲ್ಲಿ

ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ತಂಡ ಆರ್‌ಸಿಬಿ(RCB vs DC) ವಿರುದ್ಧ ಆರು ವಿಕೆಟ್‌ ಅಂತರದ ಗೆಲುವು ಸಾಧಿಸಿದರೂ ಅಂಕಪಟ್ಟಿ(IPL 2025 Points Table)ಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ವಿಫಲವಾಗಿದೆ. ರನ್‌ರೇಟ್‌ ಆಧಾರದಲ್ಲಿ ಮುಂದಿರುವ ಗುಜರಾತ್‌ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಸೋಲು ಕಂಡ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ.

ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ವಿಫಲವಾದ ಡೆಲ್ಲಿ

Profile Abhilash BC Apr 11, 2025 6:23 AM

ಬೆಂಗಳೂರು: ಕನ್ನಡಿಗ ಕೆ.ಎಲ್‌ ರಾಹುಲ್‌ ಅವರ ಬೊಂಬಾಟ್‌ ಬ್ಯಾಟಿಂಗ್‌ ನೆರವಿನಿಂದ ಗುರುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಐಪಿಎಲ್‌(IPL 2025) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ತಂಡ ಆರ್‌ಸಿಬಿ(RCB vs DC) ವಿರುದ್ಧ ಆರು ವಿಕೆಟ್‌ ಅಂತರದ ಗೆಲುವು ಸಾಧಿಸಿದರೂ ಅಂಕಪಟ್ಟಿ(IPL 2025 Points Table)ಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ವಿಫಲವಾಗಿದೆ. ರನ್‌ರೇಟ್‌ ಆಧಾರದಲ್ಲಿ ಮುಂದಿರುವ ಗುಜರಾತ್‌ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಸೋಲು ಕಂಡ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ.

ಡೆಲ್ಲಿ ತಂಡ ಆಡಿದ ಎಲ್ಲ ನಾಲ್ಕು ಪಂದ್ಯ ಗೆದ್ದು 8 ಅಂಕ ಹೊಂದಿದೆ. ಅಗ್ರಸ್ಥಾನಿ ಗುಜರಾತ್‌ 5 ಪಂದ್ಯಗಳಿಂದ ನಾಲ್ಕು ಗೆಲುವು ಮತ್ತು ಒಂದು ಸೋಲಿನೊಂದಿಗೆ 8 ಅಂಕ ಹೊಂದಿದೆ. ಆದರೆ ರನ್‌ರೇಟ್‌ನಲ್ಲಿ ಗುಜರಾತ್‌ ಮುಂದಿರುವ ಕಾರಣ ಅಗ್ರಸ್ಥಾನ ಪಡೆದಿದೆ.

ಆರೆಂಜ್‌ ಮತ್ತು ಪರ್ಪಲ್‌ ಕ್ಯಾಪ್‌ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ನಿಕೋಲಸ್‌ ಪೂರನ್‌( 288 ರನ್‌) ಆರೆಂಜ್‌ ಕ್ಯಾಪ್‌ ಪಡೆದರೆ, ನೂರ್‌ ಅಹ್ಮದ್‌( 11 ವಿಕೆಟ್‌) ಪರ್ಪಲ್‌ ಕ್ಯಾಪ್‌ ಹೊಂದಿದ್ದಾರೆ.

ಗುರುವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ಉತ್ತಮ ಆರಂಭದ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್‌ಗೆ 163 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ರಾಹುಲ್‌ ಅವರ ಅಜೇಯ ಅರ್ಧಶತಕದ ನೆರವಿನಿಂದ 17.5 ಓವರ್‌ಗಳಲ್ಲಿ 4 ವಿಕೆಟ್‌ಗೆ 169 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಇದನ್ನೂ ಓದಿ IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವಕ್ಕೆ ಮರಳಿದ ಎಂಎಸ್‌ ಧೋನಿ! ಋತುರಾಜ್‌ ಗಾಯಕ್ವಾಡ್‌ ಔಟ್‌

ತವರಿನ ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್‌ ನಡೆಸಿದ ರಾಹುಲ್‌ 53 ಎಸೆತಗಳಿಂದ ಅಜೇಯ 93 ರನ್‌ ಬಾರಿಸಿದರು. ಅವರ ಈ ಸೊಗಸಾದ ಬ್ಯಾಟಿಂಗ್‌ನಲ್ಲಿ 6 ಸಿಕ್ಸರ್‌ ಮತ್ತು 7 ಬೌಂಡರಿ ಸಿಡಿಯಿತು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಲಭಿಸಿತು.