IPL 2025 Points Table: ಅಗ್ರಸ್ಥಾನ ಮತ್ತಷ್ಟು ಗಟ್ಟಿಗೊಳಿಸಿದ ಗುಜರಾತ್
ಪಂಜಾಬ್ ಕಿಂಗ್ಸ್ 4ನೇ ಸ್ಥಾನದಲ್ಲಿದರೆ, ಲಕ್ನೋ ಸೂಪರ್ ಜೈಂಟ್ಸ್ 5ನೇ ಸ್ಥಾನಿಯಾಗಿದೆ. ಮುಂಬೈ ಇಂಡಿಯನ್ಸ್ (6), ರಾಜಸ್ಥಾನ್ ರಾಯಲ್ಸ್(8), ಸನ್‌ರೈಸರ್ಸ್ ಹೈದರಾಬಾದ್(9) ಮತ್ತು ಚೆನ್ನೈ ಸೂಪರ್ ಕಿಂಗ್ಸ್(10) ನೇ ಸ್ಥಾನದಲ್ಲಿದೆ. ಆರೆಂಜ್ ಕ್ಯಾಪ್ ಸಾಯಿ ಸುದರ್ಶನ್(417 ರನ್) ಮತ್ತು ಪರ್ಪಲ್ ಕ್ಯಾಪ್ ಪ್ರಸಿದ್ಧ್ ಕೃಷ್ಣ(16 ವಿಕೆಟ್) ಬಳಿ ಇದೆ.


ಕೋಲ್ಕತಾ: ಸೋಮವಾರ ರಾತ್ರಿ ನಡೆದಿದ್ದ ಐಪಿಎಲ್(IPL 2025) ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು 39 ರನ್‌ಗಳಿಂದ ಮಣಿಸಿದ ಗುಜರಾತ್ ಟೈಟಾನ್ಸ್(GT vs KKR) ತಂಡ ಅಂಕಪಟ್ಟಿ(IPL 2025 Points Table)ಯಲ್ಲಿ ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಸೋಲು ಕಂಡ ಕೆಕೆಆರ್ 7ನೇ ಸ್ಥಾನಕ್ಕೆ ಕುಸಿದಿದೆ. ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ ದ್ವಿತೀಯ ಸ್ಥಾನದಲ್ಲಿದ್ದರೆ, ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಇಂದು(ಮಂಗಳವಾರ) ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕಾದಾಟ ನಡೆಸಲಿವೆ.
ಪಂಜಾಬ್ ಕಿಂಗ್ಸ್ 4ನೇ ಸ್ಥಾನದಲ್ಲಿದರೆ, ಲಕ್ನೋ ಸೂಪರ್ ಜೈಂಟ್ಸ್ 5ನೇ ಸ್ಥಾನಿಯಾಗಿದೆ. ಮುಂಬೈ ಇಂಡಿಯನ್ಸ್ (6), ರಾಜಸ್ಥಾನ್ ರಾಯಲ್ಸ್(8), ಸನ್‌ರೈಸರ್ಸ್ ಹೈದರಾಬಾದ್(9) ಮತ್ತು ಚೆನ್ನೈ ಸೂಪರ್ ಕಿಂಗ್ಸ್(10) ನೇ ಸ್ಥಾನದಲ್ಲಿದೆ. ಆರೆಂಜ್ ಕ್ಯಾಪ್ ಸಾಯಿ ಸುದರ್ಶನ್(417 ರನ್) ಮತ್ತು ಪರ್ಪಲ್ ಕ್ಯಾಪ್ ಪ್ರಸಿದ್ಧ್ ಕೃಷ್ಣ(16 ವಿಕೆಟ್) ಬಳಿ ಇದೆ.
Match-winning knock ✅
— IndianPremierLeague (@IPL) April 21, 2025
Cementing #GT's 🔝 spot on the points table ✅
Skipper Shubman Gill is the Player of the Match 🫡
Scorecard ▶ https://t.co/TwaiwD5D6n#TATAIPL | #KKRvGT | @gujarat_titans | @ShubmanGill pic.twitter.com/SoEUhf1ea7
ಇದನ್ನೂ ಓದಿ IPL 2025: ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದು ವಿರಾಟ್ ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ!
ಸೋಮವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ನೀಡಿದ್ದ 199 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕೋಲ್ಕತಾ ನೈಟ್ ರೈಡರ್ಸ್, ಅಜಿಂಕ್ಯ ರಹಾನೆ (50) ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಇದರ ಪರಿಣಾಮವಾಗಿ ಕೆಕೆಆರ್ ತನ್ನ ಪಾಲಿನ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ಗಳ ನಷ್ಟಕ್ಕೆ 159 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ತವರು ಅಭಿಮಾನಿಗಳ ಎದುರು ಸೋಲೊಪ್ಪಿಕೊಂಡಿತು.
ಗುಜರಾತ್ ತಂಡದ ಪರ ನಾಯಕ ಶುಭಮನ್ ಗಿಲ್, 55 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 10 ಮನಮೋಹಕ ಬೌಂಡರಿಗಳೊಂದಿಗೆ 90 ರನ್‌ಗಳನ್ನು ಸಿಡಿಸಿದರು. ಆದರೆ, 18ನೇ ಓವರ್‌ನ ಕೊನೆಯ ಎಸೆತದಲ್ಲಿ ವೈಭವ್ ಅರೋರಾಗೆ ವಿಕೆಟ್ ಒಪ್ಪಿಸುವ ಮೂಲಕ ಕೇವಲ10 ರನ್ ಅಂತರದಲ್ಲಿ ಶತಕ ವಂಚಿತರಾದರು.