IPL 2025 Points Table: ಮುಂಬೈ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಆರ್‌ಸಿಬಿ
ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಸ್ಥಾನದಲ್ಲಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ 9ನೇ ಸ್ಥಾನದಲ್ಲಿದೆ. ಇಂದು ನಡೆಯುವ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಾಟ ನಡೆಸಲಿದೆ. ಗೆದ್ದ ತಂಡ ಅಂಕಪಟ್ಟಿಯಲ್ಲಿ ತನ್ನ ಸ್ಥಾನ ವೃದ್ಧಿಪಡಿಸಿಕೊಳ್ಳಲಿದೆ.


ಬೆಂಗಳೂರು: ನಾಲ್ಕನೇ ಪ್ರಯತ್ನದಲ್ಲಿ ತವರಿನ ಚಿನ್ನಸ್ವಾಮಿ ಕ್ರೀಡಾಂಗಣ(M Chinnaswamy Stadium)ದಲ್ಲಿ ಗೆಲುವಿನ ಖಾತೆ ತೆರೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs RR) ತಂಡ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ(IPL 2025 Points Table)ಯೂ ಪ್ರಗತಿ ಸಾಧಿಸಿದೆ. ಮುಂಬೈ ತಂಡವನ್ನು ಹಿಂದಿಕ್ಕಿ ಮತ್ತೆ ಮೂರನೇ ಸ್ಥಾನಕ್ಕೇರಿದೆ. ಸೋಲು ಕಂಡ ರಾಜಸ್ಥಾನ್ ರಾಯಲ್ಸ್ 8ನೇ ಸ್ಥಾನದಲ್ಲಿದೆ. 9 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿ 12 ಅಂಕ ಪಡೆದಿರುವ ಆರ್‌ಸಿಬಿ ಇನ್ನೆರಡು ಗೆಲುವು ಸಾಧಿಸಿದರೆ ತಂಡದ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ. ತಂಡಕ್ಕೆ ಇನ್ನು 5 ಪಂದ್ಯಗಳು ಬಾಕಿ ಇದೆ.
ಆರ್‌ಸಿಬಿ ಪಂದ್ಯಕ್ಕೂ ಮುನ್ನ ಮುಂಬೈ ತಂಡ ಮೂರನೇ ಸ್ಥಾನದಲ್ಲಿತ್ತು. ಇದೀಗ ಆರ್‌ಸಿಬಿ ಗೆಲುವಿನಿಂದ ಮುಂಬೈ ಒಂದು ಸ್ಥಾನ ಕುಸಿತ ಕಂಡು ನಾಲ್ಕನೇ ಸ್ಥಾನ ಪಡೆದಿದೆ. ಉಳಿದಂತೆ ಯಾವುದೇ ಬದಲಾವಣೆ ಸಂಭವಿಸಿಲ್ಲ. ಗುಜರಾತ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ 5 ಮತ್ತು ಲಕ್ನೋ ಸೂಪರ್ ಜೈಂಟ್ಸ್ 6ನೇ ಸ್ಥಾನದಲ್ಲಿದೆ.
ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಸ್ಥಾನದಲ್ಲಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ 9ನೇ ಸ್ಥಾನದಲ್ಲಿದೆ. ಇಂದು ನಡೆಯುವ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಾಟ ನಡೆಸಲಿದೆ. ಗೆದ್ದ ತಂಡ ಅಂಕಪಟ್ಟಿಯಲ್ಲಿ ತನ್ನ ಸ್ಥಾನ ವೃದ್ಧಿಪಡಿಸಿಕೊಳ್ಳಲಿದೆ.
ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಪ್ರಸಿದ್ಧ್ ಕೃಷ್ಣ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ 16 ವಿಕೆಟ್ ಕಿತ್ತಿದ್ದಾರೆ. ಆದರೆ ಉತ್ತಮ ಎಕಾನಮಿ ರೇಟ್‌ನಲ್ಲಿ ಮುಂದಿರುವ ಕಾರಣ ಸದ್ಯ ಪರ್ಪಲ್ ಕ್ಯಾಪ್ ಪ್ರಸಿದ್ಧ್ ಕೃಷ್ಣ ಪಾಲಾಗಿದೆ. ಆರೆಂಜ್ ಕ್ಯಾಪ್ ವಿಭಾಗದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸಾಯಿ ಸುದರ್ಶನ್ ಈ ಕ್ಯಾಪ್ ಪಡೆದಿದ್ದಾರೆ.
ಅಂಕಪಟ್ಟಿ ಹೀಗಿದೆ
Here is the latest points table of the Indian Premier League 2025 after 42nd Match
— SportsTiger (@The_SportsTiger) April 24, 2025
📸: BCCI/IPL#IPL2025 #TATAIPL2025 #MI #CSK #RCB #KKR #GT #LSG #DC #PBKS #SRH #RR #IndianPremierLeague pic.twitter.com/zVrfVbbMSu