IPL 2025: ಸಿಕ್ಸರ್ ಮೂಲಕ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್
MI vs SRH: ಮುಂಬೈ ತಂಡ ಐಪಿಎಲ್‌ನಲ್ಲಿ ಒಂದೇ ತಾಣದಲ್ಲಿ ಚೇಸಿಂಗ್ ಮಾಡುವಾಗ ಅತಿ ಹೆಚ್ಚು ಗೆಲುವು ಸಾಧಿಸಿದ ಮೊದಲ ತಂಡ ಎಂಬ ದಾಖಲೆ ನಿರ್ಮಿಸಿತು. ಮುಂಬೈ ಇಂಡಿಯನ್ಸ್ ವಾಂಖೆಡೆಯಲ್ಲಿ ಚೇಸಿಂಗ್‌ನಲ್ಲಿ ಗೆದ್ದ 29ನೇ ಗೆಲುವಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕೆಕೆಆರ್(28) ತಂಡದ ಹೆಸರಿನಲ್ಲಿತ್ತು.


ಮುಂಬಯಿ: ಸನ್‌ರೈಸರ್ಸ್ ಹೈದರಾಬಾದ್(MI vs SRH) ವಿರುದ್ಧ ಗುರುವಾರ ನಡೆದಿದ್ದ ಐಪಿಎಲ್(IPL 2025) ಪಂದ್ಯದಲ್ಲಿ ಮೂರು ಸಿಕ್ಸರ್ ಬಾರಿಸಿದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(Rohit Sharma) ಅವರು ಈ ಸಿಕ್ಸರ್ ಮೂಲಕ ಐಪಿಎಲ್‌ನಲ್ಲಿ ಒಂದೇ ಕ್ರೀಡಾಂಗಣದಲ್ಲಿ (ವಾಂಖೆಡೆ) 100 ಸಿಕ್ಸರ್ ಸಿಡಿಸಿದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೋಹಿತ್ ಸದ್ಯ ವಾಂಖೆಡೆಯಲ್ಲಿ 102* ಸಿಕ್ಸರ್ ಸಿಡಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಸಾಧನೆ ಮಾಡಿರುವ ವಿರಾಟ್ ಕೊಹ್ಲಿ (130), ಕ್ರಿಸ್ ಗೇಲ್ (127), ಎಬಿ ಡಿವಿಲಿಯರ್ಸ್ (118) ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ ರೋಹಿತ್ ಇದುವರೆಗೆ ಐಪಿಎಲ್‌ನಲ್ಲಿ 286 ಸಿಕ್ಸರ್ ಬಾರಿಸಿದ್ದಾರೆ.
ಒಂದೇ ಮೈದಾನದಲ್ಲಿ ಅತ್ಯಧಿಕ ಸಿಕ್ಸರ್
ವಿರಾಟ್ ಕೊಹ್ಲಿ-130 ಸಿಕ್ಸರ್, ಚಿನ್ನಸ್ವಾಮಿ ಮೈದಾನ
ಕ್ರಿಸ್ ಗೇಲ್-127 ಸಿಕ್ಸರ್, ಚಿನ್ನಸ್ವಾಮಿ ಮೈದಾನ
ಎಬಿ ಡಿವಿಲಿಯರ್ಸ್-118 ಸಿಕ್ಸರ್, ಚಿನ್ನಸ್ವಾಮಿ ಮೈದಾನ
ರೋಹಿತ್ ಶರ್ಮ- 102 ಸಿಕ್ಸರ್, ವಾಂಖೆಡೆ ಮೈದಾನ
ಗುರುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್ ಹೈದರಾಬಾದ್, ಆರಂಭಿಕ ಆಟಗಾರ ಅಭಿಷೇಕ್ ಶರ್ಮ (40 ರನ್, 28 ಎಸೆತ, 7 ಬೌಂಡರಿ) ಹಾಗೂ ಹೆನ್ರಿಕ್ ಕ್ಲಾಸೆನ್ (37 ರನ್, 28 ಎಸೆತ, 3 ಬೌಂಡರಿ, 2 ಸಿಕ್ಸರ್) ಅವರ ಸಣ್ಣ ಬ್ಯಾಟಿಂಗ್ ಹೋರಾಟದ ನೆರವಿನಿಂದ 5 ವಿಕೆಟ್‌ಗೆ 162 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಮುಂಬೈ, 18.1 ಓವರ್‌ಗಳಲ್ಲಿ 6 ವಿಕೆಟ್‌ಗೆ 166 ರನ್‌ಗಳಿಸಿ ಟೂರ್ನಿಯಲ್ಲಿ ಸತತ 2ನೇ ಮತ್ತು ಒಟ್ಟಾರೆ 3ನೇ ಗೆಲುವು ದಾಖಲಿಸಿ ಪ್ಲೇಆಫ್ ಅವಕಾಶ ವೃದ್ಧಿಸಿಕೊಂಡಿದೆ.
ಇದನ್ನೂ ಓದಿ IPL 2025 Points Table: ಮೂರನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಮುಂಬೈ
ಈ ಗೆಲುವಿನೊಂದಿಗೆ ಮುಂಬೈ ತಂಡ ಐಪಿಎಲ್‌ನಲ್ಲಿ ಒಂದೇ ತಾಣದಲ್ಲಿ ಚೇಸಿಂಗ್ ಮಾಡುವಾಗ ಅತಿ ಹೆಚ್ಚು ಗೆಲುವು ಸಾಧಿಸಿದ ಮೊದಲ ತಂಡ ಎಂಬ ದಾಖಲೆ ನಿರ್ಮಿಸಿತು. ಮುಂಬೈ ಇಂಡಿಯನ್ಸ್ ವಾಂಖೆಡೆಯಲ್ಲಿ ಚೇಸಿಂಗ್‌ನಲ್ಲಿ ಗೆದ್ದ 29ನೇ ಗೆಲುವಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಕೆಕೆಆರ್(28) ತಂಡದ ಹೆಸರಿನಲ್ಲಿತ್ತು.