IPL 2025: ಗಾಯಗೊಂಡು ಐಪಿಎಲ್‌ನಿಂದ ಹೊರಬಿದ್ದ ರಾಜಸ್ಥಾನ್ ತಂಡದ ನಿತೀಶ್ ರಾಣಾ
19 ವರ್ಷದ ಲುವಾನ್-ಡ್ರೆ ಪ್ರಿಟೋರಿಯಸ್ ಪಾರ್ಲ್ ರಾಯಲ್ಸ್‌ನ SA20 ಲೀಗ್‌ನ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಆಗಿರುವ ಪ್ರಿಟೋರಿಯಸ್ ದಕ್ಷಿಣ ಆಫ್ರಿಕಾದ ಅತ್ಯಂತ ಭರವಸೆಯ ಯುವ ಪ್ರತಿಭೆಗಳಲ್ಲಿ ಒಬ್ಬರಾಗಿದ್ದಾರೆ. ಪ್ರಿಟೋರಿಯಸ್ ತನ್ನ ಚೊಚ್ಚಲ ಪಂದ್ಯದಲ್ಲಿ 97 ರನ್ ಗಳಿಸಿ ಗಮನಸೆಳೆದಿದ್ದರು.


ಜೈಪುರ: ಐಪಿಎಲ್ 18ನೇ(IPL 2025) ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡದ ಎಡಗೈ ಬ್ಯಾಟರ್ ನಿತೀಶ್ ರಾಣಾ(Nitish Rana) ಗಾಯಗೊಂಡು ಇನ್ನುಳಿದ ಐಪಿಎಲ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಫ್ರಾಂಚೈಸಿ ತಮ್ಮ ಅಭಿಯಾನದ ಕೊನೆಯ ಎರಡು ಪಂದ್ಯಗಳಿಗೆ ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಲುವಾನ್-ಡ್ರೆ ಪ್ರಿಟೋರಿಯಸ್(Lhuan-dre Pretorius) ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ.
ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿರುವ ರಾಜಸ್ಥಾನ್ ರಾಯಲ್ಸ್ ಮೇ 12 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮೇ 16 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಕೊನೆಯ ಪಂದ್ಯ ಆಡಲಿದೆ.
🇿🇦 Fearless. Power-packed. Royal!
— Rajasthan Royals (@rajasthanroyals) May 8, 2025
You’ve seen him in Pink — and you’ll see him soon in IPL 2025. 🔥
Lhuan dre Pretorius steps in for Nitish Rana, who’s healing from a calf injury. Speedy recovery, Nitish bhai! 💗 pic.twitter.com/B2JzFUlKZo
31 ವರ್ಷದ ನಿತೀಶ್ ರಾಣಾ, ಈ ಋತುವಿನಲ್ಲಿ ರಾಯಲ್ಸ್ ಪರ 11 ಪಂದ್ಯಗಳಲ್ಲಿ ಆಡಿದ್ದು, 161.94 ಸ್ಟ್ರೈಕ್ ರೇಟ್‌ನಲ್ಲಿ 217 ರನ್ ಗಳಿಸಿದ್ದಾರೆ. 81 ರನ್‌ಗಳ ಗರಿಷ್ಠ ಸ್ಕೋರ್ ಸೇರಿದಂತೆ ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ.
19 ವರ್ಷದ ಲುವಾನ್-ಡ್ರೆ ಪ್ರಿಟೋರಿಯಸ್ ಪಾರ್ಲ್ ರಾಯಲ್ಸ್‌ನ SA20 ಲೀಗ್‌ನ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಆಗಿರುವ ಪ್ರಿಟೋರಿಯಸ್ ದಕ್ಷಿಣ ಆಫ್ರಿಕಾದ ಅತ್ಯಂತ ಭರವಸೆಯ ಯುವ ಪ್ರತಿಭೆಗಳಲ್ಲಿ ಒಬ್ಬರಾಗಿದ್ದಾರೆ. ಪ್ರಿಟೋರಿಯಸ್ ತನ್ನ ಚೊಚ್ಚಲ ಪಂದ್ಯದಲ್ಲಿ 97 ರನ್ ಗಳಿಸಿ ಗಮನಸೆಳೆದಿದ್ದರು. ಮೂಲ ಬೆಲೆ 30 ಲಕ್ಷಕ್ಕೆ ರಾಯಲ್ಸ್ ಸೇರಲಿದ್ದಾರೆ.
Fun since day one. Get well soon, @NitishRana_27 💗 pic.twitter.com/Ix4h0W5tKb
— Rajasthan Royals (@rajasthanroyals) May 8, 2025
ಇದುವರೆಗೆ ರಾಜಸ್ಥಾನ್ ರಾಯಲ್ಸ್ ಆಡಿದ 12 ಪಂದ್ಯಗಳಲ್ಲಿ 9 ಸೋಲು ಮತ್ತು 3 ಗೆಲುವು ಕಂಡು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನುಳಿದ 2 ಪಂದ್ಯ ಗೆದ್ದರೆ ಕನಿಷ್ಠ ಪಕ್ಷ ಕೆಳ ಕ್ರಮಾಂಕದಿಂದ ಒಂದೆರಡು ಸ್ಥಾನ ಮೇಲೇರಬಹುದು.
ಇದನ್ನೂ ಓದಿ IPL 2025: ಪಂಜಾಬ್-ಮುಂಬೈ ಪಂದ್ಯದ ಸ್ಥಳ ಬದಲಾವಣೆ ಸಾಧ್ಯತೆ!