ಗೆಲುವಿನ ಸಿಕ್ಸರ್ ಬಾರಿಸಿ ಪತ್ನಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ವಿರಾಟ್ ಕೊಹ್ಲಿ; ವಿಡಿಯೊ ವೈರಲ್
IPL 2026 final: ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವೆಂಕಟೇಶ ಅಯ್ಯರ್ (32) ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಬಿರುಸಿನ ಬ್ಯಾಟಿಂಗ್ ಮೂಲಕ ಈ ಜೋಡಿ 62ರನ್ ಸೇರಿಸಿ ಗೆಲುವಿಗೆ ಮುನ್ನುಡಿ ಬರೆದರು.
Virat Kohli-Anushka -
ಅಹಮದಾಬಾದ್, ಜೂ.1: ಅಭಿಮಾನಿಗಳ ನಿರೀಕ್ಷೆಯಂತೆ 2026ರ ಐಪಿಎಲ್(IPL 2026 final)ನಲ್ಲೂ ಆರ್‌ಸಿಬಿ ಚಾಂಪಿಯನ್ ಆಗಿದೆ. ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ, ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಂಡಿತು. ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ವಿರಾಟ್ ಕೊಹ್ಲಿ(Virat Kohli) ಗೆಲುವಿನ ಸಿಕ್ಸರ್ ಬಾರಿಸಿ ಗ್ಯಾಲರಿಯಲ್ಲಿದ್ದ ಪತ್ನಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ನೀಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಿದ ಆರ್‌ಸಿಬಿ, ಗುಜರಾತ್ ತಂಡವನ್ನು 20 ಓವರಲ್ಲಿ 8 ವಿಕೆಟ್‌ಗೆ 155 ರನ್‌ಗೆ ನಿಯಂತ್ರಿಸಿತು. ಆರ್‌ಸಿಬಿಯ ಮೊನಚಾದ ಬೌಲಿಂಗ್ ಎದುರು ಗುಜರಾತ್ ರನ್ ಗಳಿಸಲು ಪರದಾಡಿದ್ದಲ್ಲದೇ, ನಿರಂತರವಾಗಿ ವಿಕೆಟ್ ಸಹ ಕಳೆದುಕೊಂಡಿತು.
ಸಣ್ಣ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಆಸರೆಯಾದರು. 42 ಎಸೆತಗಳಲ್ಲಿ ಅಜೇಯ 75 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೊಹ್ಲಿ ಅವರ ಈ ಪ್ರದರ್ಶನದ ನೆರವಿನಿಂದ ಆರ್‌ಸಿಬಿ ತಂಡವು 18 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಗೆಲುವಿನ ಸಿಕ್ಸರ್ ಬಾರಿಸುತ್ತಿದ್ದಂತೆ ಭಾವುಕರಾದ ಕೊಹ್ಲಿ ಗ್ಯಾಲರಿಯಲ್ಲಿದ್ದ ಪತ್ನಿಗೆ ಫ್ಲೈಯಿಂಗ್ ಕಿಸ್ ನೀಡಿದರು. ಅನುಷ್ಕಾ ಕೂಡ ಗ್ಯಾಲರಿಯಿಂದಲೇ ಕೊಹ್ಲಿಗೂ ಫ್ಲೈಯಿಂಗ್ ಕಿಸ್ ನೀಡಿದರು.
𝙁𝙞𝙧𝙨𝙩 𝙩𝙞𝙢𝙚 𝙬𝙖𝙨 𝙨𝙤 𝙣𝙞𝙘𝙚, 𝙩𝙝𝙚𝙮 𝙝𝙖𝙙 𝙩𝙤 𝙙𝙤 𝙞𝙩 𝙩𝙬𝙞𝙘𝙚 ❤️@RCBTweets are your #TATAIPL 2026 Champions 🏆#Final | #TheFinalLeap | #RCBvGT pic.twitter.com/vAqXacHPju
— IndianPremierLeague (@IPL) May 31, 2026
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ತಂಡ ಆರಂಭದಲ್ಲೇ ಸತತ ವಿಕೆಟ್ ಕಳೆದುಕೊಂಡು ಅದಾಗಲೇ ಸೋಲು ಖಚಿತಪಡಿಸಿಕೊಂಡಿತು. ನಾಯಕ ಶುಭಮನ್ ಗಿಲ್ (10), ಸಾಯಿ ಸುದರ್ಶನ್ (12), ಅರ್ಷದ್ ಖಾನ್ (20) ಹಾಗೂ ಜೋಸ್ ಬಟ್ಲರ್ (19) ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಬ್ಯಾಟರ್‌ಗಳು ಕೂಡ ಬಂದಷ್ಟೆ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು.
RCB vs GT ಫೈನಲ್‌ಗೂ ಮುನ್ನ ಆಟಗಾರರಿಗೆ ನೀಡಿದ್ದ ಸಂದೇಶವನ್ನು ರಿವೀಲ್ ಮಾಡಿದ ವಿರಾಟ್ ಕೊಹ್ಲಿ!
ವಾಷಿಂಗ್‌ಟನ್ ಸುಂದರ್ ಗುಜರಾತ್ ಟೈಟನ್ಸ್ ಪರ (ಅಜೇಯ 50 ರನ್) ಅತ್ಯುತ್ತಮ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಆ ಮೂಲಕ ಗುಜರಾತ್ ಮೊತ್ತವನ್ನು 155ಕ್ಕೆ ತಲುಪಿಸಿದರು. ಸುಂದರ್ ಅಜೇಯ ಅರ್ಧಶತಕ ಬಾರಿಸಿದರು. ಆರ್‌ಸಿಬಿ ಪರ ರಸಿಕ್ ಸಲಾಂ ದಾರ್ 3, ಜೋಶ್ ಹೇಜಲ್ವುಡ್ ಹಾಗೂ ಭುವನೇಶ್ವರ ಕುಮಾರ್ ತಲಾ 2 ವಿಕೆಟ್ ಪಡೆದುಕೊಂಡರೆ, ಕೃನಾಲ್ ಪಾಂಡ್ಯ ಒಂದು ವಿಕೆಟ್ ಪಡೆದು ಮಿಂಚಿದರು.
ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವೆಂಕಟೇಶ ಅಯ್ಯರ್ (32) ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಬಿರುಸಿನ ಬ್ಯಾಟಿಂಗ್ ಮೂಲಕ ಈ ಜೋಡಿ 62ರನ್ ಸೇರಿಸಿ ಗೆಲುವಿಗೆ ಮುನ್ನುಡಿ ಬರೆದರು.