SRH vs DC: ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಡೆಲ್ಲಿ-ಹೈದರಾಬಾದ್
IPL 2026: ಹೈದರಾಬಾದ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ಗೆ ಸಮತೋಲಿತ ನೆರವು ನೀಡಲಿದೆ. ಇನಿಂಗ್ಸ್ನ ಆರಂಭದಲ್ಲಿ ಇಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸಬಹುದು. ಬಳಿಕ ನಿಧಾನಗತಿಯಲ್ಲಿ ಬೌಲಿಂಗ್ ಟ್ರ್ಯಾಕ್ ಆಗಿ ಪರಿವರ್ತನೆಗೊಳ್ಳಲಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ನಡೆಸುವ ಸಾಧ್ಯತೆ ಹೆಚ್ಚು.
SRH vs DC -
ಹೈದರಾಬಾದ್, ಎ.20: ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ(ಎ.21) ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2026(IPL 2026)ರ 31 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ಸೆಣಸಲಿದೆ. ಉಭಯ(SRH vs DC) ತಂಡಗಳು ಕಳೆದ ಪಂದ್ಯವನ್ನು ಗೆದ್ದ ಜೋಶ್‌ನಲ್ಲಿದೆ. ಹೀಗಾಗಿ ಈ ಪಂದ್ಯ ತೀವ್ರ ಪೈಪೋಟಿಯಿಂದ ನಿರೀಕ್ಷೆ ಮಾಡಬಹುದು.
ಹೈದರಾಬಾದ್ ತಂಡವು ಆರು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಸೋಲಿನೊಂದಿಗೆ ತಮ್ಮ ಅಭಿಯಾನವನ್ನು ಆರಂಭಿಸಿದರೂ, ಆ ಬಳಿಕ ಗೆಲವಿನ ಟ್ರ್ಯಾಕ್‌ಗೆ ಮರಳಿದರು. ಇದೀಗ ಋತುವಿನ ನಾಲ್ಕನೇ ಗೆಲುವು ಸಾಧಿಸುವ ಗುರಿಯನ್ನು ಹೊಂದಿದ್ದಾರೆ.
ಆರ್‌ಸಿಬಿ ವಿರುದ್ಧದ ತಮ್ಮ ಇತ್ತೀಚಿನ ಪಂದ್ಯದಲ್ಲಿ ಡೆಲ್ಲಿ ಅದ್ಭುತವಾಗಿ ಆಡುವ ಮೂಲಕ ಚೇತರಿಸಿಕೊಂಡರು. ಡೇವಿಡ್ ಮಿಲ್ಲರ್ ಕೊನೆಯ ಓವರ್‌ನಲ್ಲಿ ರೋಮಾಂಚಕ ಗೆಲುವು ತಂದುಕೊಟ್ಟಿದ್ದರು. ರಾಹುಲ್ ಕೂಡ ಸತತ ಎರಡು ಅರ್ಧಶತಕ ಬಾರಿಸುವ ಮೂಲಕ ಉತ್ತಮ ಫಾರ್ಮ್‌ನಲ್ಲಿದ್ದಾರೆ. ತಂಡದ ಬೌಲಿಂಗ್ ವಿಭಾಗವೂ ವೈವಿಧ್ಯಮಯವಾಗಿದೆ. ಟಿ.ನಟರಾಜನ್, ಲುಂಗಿ ಎನ್‌ಗಿಡಿ, ಕುಲ್‌ದೀಪ್ ಯಾದವ್ ಮತ್ತು ನಾಯಕ ಅಕ್ಷರ್ ಪಟೇಲ್ ಉತ್ತಮ ಲಯದಲ್ಲಿದ್ದಾರೆ.
ಪಿಚ್ ರಿಪೋರ್ಟ್
ಹೈದರಾಬಾದ್‌ನ ರಾಜೀವ್‌ಗಾಂಧಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ಗೆ ಸಮತೋಲಿತ ನೆರವು ನೀಡಲಿದೆ. ಇನಿಂಗ್ಸ್ನ ಆರಂಭದಲ್ಲಿ ಇಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸಬಹುದು. ಬಳಿಕ ನಿಧಾನಗತಿಯಲ್ಲಿ ಬೌಲಿಂಗ್ ಟ್ರ್ಯಾಕ್ ಆಗಿ ಪರಿವರ್ತನೆಗೊಳ್ಳಲಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ನಡೆಸುವ ಸಾಧ್ಯತೆ ಹೆಚ್ಚು.
ಮುಖಾಮುಖಿ
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಇದುವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಹೈದರಾಬಾದ್ ತಂಡ 13 ಪಂದ್ಯಗಳನ್ನು ಗೆದ್ದರೆ, ಡೆಲ್ಲಿ 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.
MI vs GT: ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ ರೋಹಿತ್; ಇಂದು ಗುಜರಾತ್ ವಿರುದ್ಧ ಆಡಲಿದ್ದಾರಾ?
ಸಂಭಾವ್ಯ ತಂಡಗಳು
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ನಾಯಕ), ಹೆನ್ರಿಚ್ ಕ್ಲಾಸೆನ್, ಸಲಿಲ್ ಅರೋರಾ (ವಿ.ಕೀ.), ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂಗ್ ಕುಮಾರ್, ಪ್ರಫುಲ್ ಹಿಂಗೆ, ಸಾಕಿಬ್ ಹುಸೇನ್, ಈಶಾನ್ ಮಾಲಿಂಗ.
ಇಂಪ್ಯಾಕ್ಟ್ ಪ್ಲೇಯರ್: ಹರ್ಷ್ ದುಬೆ.
ದೆಹಲಿ ಕ್ಯಾಪಿಟಲ್ಸ್: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿ.ಕೀ.), ಸಮೀರ್ ರಿಜ್ವಿ, ಅಕ್ಷರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಔಕಿಬ್ ನಬಿ ದಾರ್, ಲುಂಗಿ ಎನ್‌ಗಿಡಿ, ಕುಲದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್.
ಇಂಪ್ಯಾಕ್ಟ್ ಆಟಗಾರ: ಅಶುತೋಷ್ ಶರ್ಮಾ.
ಪಂದ್ಯ ಆರಂಭ: ಸಂಜೆ 7 ಗಂಟೆಗೆ.
ಪ್ರಸಾರ: ಸ್ಟಾರ್ ಸೋರ್ಟ್ಸ್, ಜಿಯೋ ಹಾಟ್‌ಸ್ಟಾರ್.