ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

GT vs RCB: ಆರ್‌ಸಿಬಿ-ಗುಜರಾತ್‌ ಪಂದ್ಯದ ಪ್ಲೇಯಿಂಗ್‌ ಇಲೆವೆನ್‌ ಹೇಗಿದೆ?

IPL 2026: ಆರ್‌ಸಿಬಿ ಮತ್ತು ಗುಜರಾತ್‌ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 7 ಬಾರಿ ಮುಖಾಮುಖಿಯಾಗಿದ್ದು 4 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಗುಜರಾತ್‌ 3 ಪಂದ್ಯಗಳಲ್ಲಿ ಜಯಿಸಿದೆ. ಇದರಲ್ಲೊಂದು ಈ ಆವೃತ್ತಿಯ ಪಂದ್ಯವಾಗಿದೆ. ಚಿನ್ನಸ್ವಾಮಿಯಲ್ಲಿ ನಡೆದಿದ್ದ ಈ ಮುಖಾಮುಖಿಯಲ್ಲಿ ಗುಜರಾತ ತಂಡ 5 ವಿಕೆಟ್‌ ಅಂತರದ ಸೋಲು ಕಂಡಿತ್ತು.

ಆರ್‌ಸಿಬಿ-ಗುಜರಾತ್‌ ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೇಗಿದೆ?

Gujarat Titans vs Royal Challengers Bengaluru -

Abhilash BC
Abhilash BC Apr 29, 2026 1:14 PM

ಅಹಮದಾಬಾದ್‌, ಎ.29: ಇತ್ತೀಚೆಗಷ್ಟೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ(GT vs RCB) ವಿರುದ್ಧ ಸೋತಿದ್ದ ಗುಜರಾತ್‌ ಟೈಟಾನ್ಸ್‌ ತಂಡ ಈಗ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ತಂಡ ಗುರುವಾರ ಅದರದೇ ತವರಿನಲ್ಲಿ(IPL 2026) ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಆದರೆ ಬಲಿಷ್ಠ ಆರ್‌ಸಿಯನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ ಎನ್ನುವ ಸತ್ಯವನ್ನು ಅರಿತಿರುವ ಕಾರಣ ಶುಭಮನ್‌ ಗಿಲ್‌ ಪಡೆ ಉತ್ಕೃಷ್ಟ ಮಟ್ಟದ ಆಟವನ್ನೇ ಪ್ರದರ್ಶಿಸಬೇಕಿದೆ.

ಪ್ಲೇ-ಆಫ್‌ ರೇಸ್‌ನಲ್ಲಿ ರೋಚಕತೆ ಸೃಷ್ಟಿಯಾಗಿರುವುರಿಂದ ಪ್ರತಿ ತಂಡಕ್ಕೂ ಈಗ ಬಹಳ ಮಹತ್ವದ್ದು. ಆರ್‌ಸಿಬಿ 8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 2ನೇ ಸ್ಥಾನದಲ್ಲಿದ್ದರೆ, ಗುಜರಾತ್ ‌8 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 5ನೇ ಸ್ಥಾನದಲ್ಲಿದೆ. ಇನ್ನೊಂದು ಸೋಲು ಎದುರಾದರೆ ತಂಡದ ಪ್ಲೇ-ಆಫ್‌ ಹಾದಿ ಕಠಿಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಗುಜರಾತ್‌ಗೆ ಇದು ಮಸ್ಟ್‌ ವಿನ್‌ ಗೇಮ್‌ ಆಗಿದೆ.

ಪಿಚ್​ ರಿಪೋರ್ಟ್​

ವಿಶ್ವದ ಅತಿ ದೊಡ್ಡ ಕ್ರೀಡಾಂಗಣ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನೇರ ಬೌಂಡರಿಗಳಿಗೆ ಸರಾಸರಿ 75 ಮೀಟರ್ ಮತ್ತು ಚದರ ಗಡಿಗಳಿಗೆ 60 ಮೀಟರ್ ಉದ್ದವನ್ನು ಹೊಂದಿದೆ. ಸಮತೋಲಿತ ವಿಕೆಟ್‌ಗಳನ್ನು ಹೊಂದಿದ್ದು ಬ್ಯಾಟಿಂಗ್‌ ಮತ್ತು ಬೌಲಂಗ್‌ ಎರಡೂ ಅಂಶಗಳಿಗೆ ಸಮಾನವಾಗಿ ಸಹಾಯ ಮಾಡಿದೆ. ಈ ಋತುವಿನಲ್ಲಿ ಇಲ್ಲಿಯವರೆಗೆ ಮೂರು ಪಂದ್ಯಗಳು ನಡೆದಿದ್ದು ಅವುಗಳಲ್ಲಿ ಎರಡು ತಂಡಗಳು ಒಟ್ಟು ಮೊತ್ತವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿತ್ತು. ಜಿಟಿ vs ಆರ್‌ಸಿಬಿ ಘರ್ಷಣೆಯ ಸಮಯದಲ್ಲಿಯೂ ಈ ಪ್ರವೃತ್ತಿ ಮುಂದುವರಿಯುವ ಸಾಧ್ಯತೆಯಿದೆ ಮತ್ತು ಈ ಋತುವಿನ ಹಿಂದಿನ ಪಂದ್ಯಗಳ ಫಲಿತಾಂಶಗಳನ್ನು ನೋಡಿದರೆ 220-230 ಕ್ಕಿಂತ ಹೆಚ್ಚಿನ ಮೊತ್ತವನ್ನು ಗೆಲುವಿನ ಮೊತ್ತವೆಂದು ಪರಿಗಣಿಸಬಹುದು.

IPL 2026: ಸ್ಫೋಟಕ ಬ್ಯಾಟಿಂಗ್‌ ಮೂಲಕವೇ ಐಪಿಎಲ್‌ನಲ್ಲಿ ನೂತನ ದಾಖಲೆ ಸೃಷ್ಟಿಸಿದ ಸೂರ್ಯವಂಶಿ

ಮುಖಾಮುಖಿ

ಆರ್‌ಸಿಬಿ ಮತ್ತು ಗುಜರಾತ್‌ ತಂಡಗಳು ಈವರೆಗೆ ಐಪಿಎಲ್‌ನಲ್ಲಿ 7 ಬಾರಿ ಮುಖಾಮುಖಿಯಾಗಿದ್ದು 4 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಗುಜರಾತ್‌ 3 ಪಂದ್ಯಗಳಲ್ಲಿ ಜಯಿಸಿದೆ. ಇದರಲ್ಲೊಂದು ಈ ಆವೃತ್ತಿಯ ಪಂದ್ಯವಾಗಿದೆ. ಚಿನ್ನಸ್ವಾಮಿಯಲ್ಲಿ ನಡೆದಿದ್ದ ಈ ಮುಖಾಮುಖಿಯಲ್ಲಿ ಗುಜರಾತ ತಂಡ 5 ವಿಕೆಟ್‌ ಅಂತರದ ಸೋಲು ಕಂಡಿತ್ತು.

ಹವಾಮಾನ ವರದಿ

ಅಹಮದಾಬಾದ್‌ನಲ್ಲಿ ನಡೆಯುವ ಈ ಪಂದ್ಯಕ್ಕೆ ಮಳೆ ಸಾಧ್ಯತೆ ಶೂನ್ಯವಾಗಿದೆ. ಪಂದ್ಯದ ಸಮಯದಲ್ಲಿ ತಾಪಮಾನ 30% ಆರ್ದ್ರತೆಯೊಂದಿಗೆ ಬಿಸಿ ನಿರೀಕ್ಷಿಸಲಾಗಿದೆ.

PBKS vs RR: "ಕ್ಷಮಿಸಿ ಭಾಯ್": ಸಲ್ಮಾನ್ ಖಾನ್‌ಗೆ ಕ್ಷಮೆಯಾಚಿಸಿದ ರಾಜಸ್ಥಾನ್ ರಾಯಲ್ಸ್

ಸಂಭಾವ್ಯ ತಂಡಗಳು

ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶಾರುಖ್ ಖಾನ್, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ಪ್ರಸಿದ್ಧ್ ಕೃಷ್ಣ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಮಾನವ್ ಸುತಾರ್.

ಇಂಪ್ಯಾಕ್ಟ್ ಆಟಗಾರ: ರಾಹುಲ್ ತೆವಾಟಿಯಾ.‌

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್, ಸುಯಶ್ ಶರ್ಮಾ, ರಸಿಖ್ ಸಲಾಮ್ ದಾರ್.

ಇಂಪ್ಯಾಕ್ಟ್ ಪ್ಲೇಯರ್: ಜಾಕೋಬ್ ಬೆಥೆಲ್.