ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

PBKS vs MI: ಮುಂಬೈಗೆ ಔಪಚಾರಿಕ, ಪಂಜಾಬ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ

IPL 2026: ಮೇ 10 ರಂದು ರಾಯ್‌ಪುರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸೋತ ಮುಂಬೈ ಇಂಡಿಯನ್ಸ್ ತಂಡವು ಎಂಟನೇ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಇಡೀ ಋತುವಿನಲ್ಲಿ ಅವರ ಪ್ರದರ್ಶನ ಕಳಪೆಯಾಗಿದೆ. 11 ಪಂದ್ಯಗಳಿಂದ ಕೇವಲ ಆರು ಅಂಕಗಳೊಂದಿಗೆ ಅವರು ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಮುಂಬೈ-ಪಂಜಾಬ್‌ ಪಂದ್ಯದ ಪ್ಲೇಯಿಂಗ್‌ 11, ಪಿಚ್‌ ರಿಪೋರ್ಟ್‌ ಹೇಗಿದೆ?

Punjab Kings vs Mumbai Indians -

Abhilash BC
Abhilash BC May 13, 2026 2:31 PM

ಧರ್ಮಶಾಲಾ, ಮೇ 13: ಗುರುವಾರ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್‌(IPL 2026)ನ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡವು ಮುಂಬೈ ಇಂಡಿಯನ್ಸ್ (MI) ತಂಡವನ್ನು ಎದುರಿಸಲಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಮುಂಬೈಗೆ ಇದು ಔಪಚಾರಿಕ ಪಂದ್ಯ. ಆದರೆ ಪಂಜಾಬ್‌ಗೆ ಮಸ್ಟ್‌ ವಿನ್‌ ಗೇಮ್‌ ಆಗಿದೆ.

ಪಂಜಾಬ್ ಕಿಂಗ್ಸ್ ತಂಡವು ತನ್ನ ಮೊದಲ ಏಳು ಪಂದ್ಯಗಳಲ್ಲಿ ಅಜೇಯವಾಗಿ ಆಡಿದ ನಂತರ ಸತತ ನಾಲ್ಕು ಸೋಲುಗಳನ್ನು ಅನುಭವಿಸಿತು. ಮೇ 11ರಂದು ಧರ್ಮಶಾಲಾದಲ್ಲಿ 211 ರನ್‌ ಬಾರಿಸಿಯೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿದ್ದರು. ತಂಡ ಸೋಲಿಗೆ ನಾಯಕ ಶ್ರೇಯಸ್‌ ಅಯ್ಯರ್‌ ಕಳಪೆ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ಕಾರಣ ಎಂದಿದ್ದರು. ಹೀಗಾಗಿ ಈ ವೈಫಲ್ಯಗಳನ್ನು ತಂಡ ಸರಿಪಡಿಸಿಕೊಳ್ಳಬೇಕಿದೆ. ಪ್ಲೇಆಫ್ ಸ್ಥಾನಕ್ಕೆ ಪ್ರವೇಶಿಸಬೇಕಿದ್ದರೆ ತುರ್ತಾಗಿ ಗೆಲುವಿನ ಹಾದಿಗೆ ಮರಳಬೇಕಾಗಿದೆ.

ಮೇ 10 ರಂದು ರಾಯ್‌ಪುರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸೋತ ಮುಂಬೈ ಇಂಡಿಯನ್ಸ್ ತಂಡವು ಎಂಟನೇ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಇಡೀ ಋತುವಿನಲ್ಲಿ ಅವರ ಪ್ರದರ್ಶನ ಕಳಪೆಯಾಗಿದೆ. 11 ಪಂದ್ಯಗಳಿಂದ ಕೇವಲ ಆರು ಅಂಕಗಳೊಂದಿಗೆ ಅವರು ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಪಿಚ್‌ ರಿಪೋರ್ಟ್‌

ಧರ್ಮಶಾಲಾದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ​​ಕ್ರೀಡಾಂಗಣವು ದೇಶದ ಅತ್ಯಂತ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ಇದು ದೇಶದ ಅತ್ಯಂತ ಬ್ಯಾಟಿಂಗ್ ಸ್ನೇಹಿ ಸ್ಥಳಗಳಲ್ಲಿ ಒಂದಾಗಿದೆ. ಕಪ್ಪು ಮಣ್ಣಿನ ಪಿಚ್ ಗಟ್ಟಿಯಾಗಿದ್ದು ಸ್ಥಿರವಾದ ಬೌನ್ಸ್ ನೀಡುತ್ತದೆ. ಬ್ಯಾಟರ್‌ಗಳು ತಮ್ಮ ಹೊಡೆತಗಳನ್ನು ಮುಕ್ತವಾಗಿ ಆಡಲು ಅನುವು ಮಾಡಿಕೊಡುತ್ತದೆ. ಚೆಂಡು ಗಾಳಿಯಲ್ಲಿ ಹೆಚ್ಚು ವೇಗವಾಗಿ ಚಲಿಸುತ್ತದೆ.

Pat Cummins: ಸೋಲಿನ ಮಧ್ಯೆ 12 ಲಕ್ಷ ದಂಡಕ್ಕೆ ಗುರಿಯಾದ ಸನ್‌ರೈಸರ್ಸ್‌ ನಾಯಕ ಪ್ಯಾಟ್‌ ಕಮಿನ್ಸ್‌

ಮುಖಾಮುಖಿ

ಆಡಿದ ಪಂದ್ಯಗಳು 35

ಪಂಜಾಬ್‌ ಗೆಲುವು- 18

ಮುಂಬೈ ಗೆಲುವು- 17

ಸಂಭಾವ್ಯ ತಂಡಗಳು

ಪಂಜಾಬ್ ಕಿಂಗ್ಸ್ (PBKS): ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿ.ಕೀ.), ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಸೂರ್ಯಾಂಶ್ ಶೆಡ್ಜ್, ಮಾರ್ಕೊ ಜಾನ್ಸೆನ್, ಲಾಕಿ ಫರ್ಗುಸನ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಯಶ್ ಠಾಕೂರ್.

ಇಂಪ್ಯಾಕ್ಟ್‌ ಆಟಗಾರ: ಶಶಾಂಕ್ ಸಿಂಗ್.

ಮುಂಬೈ ಇಂಡಿಯನ್ಸ್ (MI): ರಿಯಾನ್ ರಿಕೆಲ್ಟನ್ (ವಿ.ಕೀ.), ನಮನ್ ಧೀರ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ವಿಲ್ ಜಾಕ್ಸ್, ರಾಜ್ ಬಾವಾ, ಕಾರ್ಬಿನ್ ಬಾಷ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಎಎಮ್ ಗಜನ್ಫರ್, ಜಸ್‌ಪ್ರೀತ್ ಬುಮ್ರಾ.

ಇಂಪ್ಯಾಕ್ಟ್‌ ಆಟಗಾರ: ರೋಹಿತ್ ಶರ್ಮಾ.