ಅಗ್ರ 4 ಸ್ಥಾನಗಳಿಗೆ 7 ತಂಡಗಳ ಮಧ್ಯೆ ತೀವ್ರ ಪೈಪೋಟಿ; ಆರ್‌ಸಿಬಿಯ ಪ್ಲೇ-ಆಫ್ ಲೆಕ್ಕಾಚಾರ ಹೇಗಿದೆ?
IPL 2026 Playoff Qualification Scenarios: ಭಾನುವಾರ ಒಂದೇ ದಿನ 2 ತಂಡಗಳು ಪ್ಲೇ-ಆಫ್‌ರೇಸ್‌ನಿಂದ ಹೊರಬಿದ್ದವು. ಮುಂಬೈ ಹಾಗೂ ಲಖನೌ ತಲಾ 8 ಪಂದ್ಯಗಳಲ್ಲಿ ಸೋತಿದ್ದು, ಲೀಗ್ ಹಂತದಲ್ಲೇ ಅಭಿಯಾನ ಕೊನೆಗೊಳಿಸಿದವು. ಡೆಲ್ಲಿ 11ರಲ್ಲಿ 7 ಸೋತಿದ್ದು, ಹೊರಬೀಳುವ ಆತಂಕದಲ್ಲಿದೆ. ಉಳಿದ 7 ತಂಡಗಳು ಪ್ಲೇ-ಆಫ್ ರೇಸ್‌ನಲ್ಲಿ ಉಳಿದುಕೊಂಡಿವೆ.
IPL 2026 Playoffs Scenario -
ಬೆಂಗಳೂರು, ಮೇ 11: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ತಂಡಗಳ ಮಧ್ಯೆ ಪ್ಲೇ-ಆಫ್ ಸ್ಥಾನದ ಪೈಪೋಟಿ ತೀವ್ರಗೊಂಡಿದೆ. 10 ತಂಡಗಳ ಪೈಕಿ ಈಗಾಗಲೇ 2 ತಂಡಗಳು ಅಧಿಕೃತವಾಗ ಹೊರಬಿದ್ದಿದೆ. ಭಾನುವಾರ ಒಂದೇ ದಿನ 2 ತಂಡಗಳು ಪ್ಲೇ-ಆಫ್‌ರೇಸ್‌ನಿಂದ ಹೊರಬಿದ್ದವು. ಮುಂಬೈ ಹಾಗೂ ಲಖನೌ ತಲಾ 8 ಪಂದ್ಯಗಳಲ್ಲಿ ಸೋತಿದ್ದು, ಲೀಗ್ ಹಂತದಲ್ಲೇ ಅಭಿಯಾನ ಕೊನೆಗೊಳಿಸಿದವು. ಡೆಲ್ಲಿ 11ರಲ್ಲಿ 7 ಸೋತಿದ್ದು, ಹೊರಬೀಳುವ ಆತಂಕದಲ್ಲಿದೆ. ಉಳಿದ 7 ತಂಡಗಳು ಪ್ಲೇ-ಆಫ್ ರೇಸ್‌ನಲ್ಲಿ ಉಳಿದುಕೊಂಡಿವೆ. ತಂಡಗಳ ಪ್ಲೇ ಆಫ್ ಲೆಕ್ಕಾಚಾರ(IPL 2026 Playoff Qualification Scenarios) ಹೇಗಿದೆ ಎಂಬ ವರದಿ ಇಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ, ಪ್ಲೇ-ಆಫ್‌ಗೆ ಅರ್ಹತೆ ಪಡೆಯುವ ಬಲವಾದ ಸ್ಥಾನದಲ್ಲಿದೆ. ತಂಡ 11 ಪಂದ್ಯಗಳಿಂದ 14 ಅಂಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿದೆ. ತಮ್ಮ ಉಳಿದ ಎಲ್ಲ ಮೂರು ಪಂದ್ಯಗಳನ್ನು ಗೆದ್ದರೆ 20 ಅಂಕಗಳನ್ನು ಗಳಿಸಬಹುದು ಮತ್ತು ಕ್ವಾಲಿಫೈಯರ್ 1 ಕ್ಕೆ ಮುನ್ನಡೆಯಲು ಸಹಾಯ ಮಾಡುತ್ತದೆ. ಒಂದು ಪಂದ್ಯ ಗೆದ್ದರೆ ಪ್ಲೇ-ಆಫ್ ಟಿಕೆಟ್ ಖಚಿತವಾಗಲಿದೆ. ಆದರೆ ಇನ್ನುಳಿದ ತಂಡಗಳು 16 ಅಂಕಕ್ಕಿಂತ ಅಧಿಕ ಗಳಿಸಬಾರದು.
ಸನ್‌ರೈಸರ್ಸ್ ಹೈದರಾಬಾದ್: 14 ಅಂಕಗಳೊಂದಿಗೆ ಆರ್‌ಸಬಿ ಜತೆ ಸಮಬಲ ಸಾಧಿಸಿದೆ. ಆದರೆ ನೆಟ್ ರನ್‌ರೇಟ್ (+0.737)ನಲ್ಲಿ ಹಿಂದುಳಿದಿದೆ. ಪ್ಲೇ ಆಫ್ ಅರ್ಹತೆ ಪಡೆಯಲು ಅವರು ತಮ್ಮ ಕೊನೆಯ ಮೂರು ಪಂದ್ಯಗಳಲ್ಲಿ ಎರಡನ್ನು ಗೆಲ್ಲಬೇಕು. ಮೇ 22 ರಂದು ಆರ್‌ಸಿಬಿ ವಿರುದ್ಧದ ಅವರ ಕೊನೆಯ ಲೀಗ್ ಪಂದ್ಯವು ಕ್ವಾಲಿಫೈಯರ್ 1 ಸ್ಥಾನವನ್ನು ಯಾರು ಪಡೆಯುತ್ತಾರೆ ಎಂಬುದನ್ನು ನಿರ್ಧರಿಸಬಹುದು.
ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ ಸಾರಥ್ಯದ ಟೈಟಾನ್ಸ್ 14 ಅಂಕಗಳೊಂದಿಗೆ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಜತೆ ಸಮಬಲ ಸಾಧಿಸಿದ್ದರೂ, ರನ್‌ರೇಟ್ (+0.228) ಉತ್ತಮವಾಗಿಲ್ಲ. ಅವರಿಗೆ ಕನಿಷ್ಠ ಎರಡು ಗೆಲುವುಗಳು ಬೇಕಾಗುತ್ತವೆ. ಮೇ 12 ರಂದು ಎಸ್‌ಆರ್‌ಹೆಚ್ ವಿರುದ್ಧದ ಅವರ ಮುಂಬರುವ ಪಂದ್ಯವು ನಿರ್ಣಾಯಕ ಪಂದ್ಯವಾಗಿದೆ.
ಮುಂಬೈ ಪಂದ್ಯಕ್ಕೂ ಮುನ್ನ ಉರ್ವಿಲ್ ಪಟೇಲ್ ಸ್ಫೋಟಕ ಬ್ಯಾಟಿಂಗ್ ವೀಕ್ಷಿಸಿದ ಕೊಹ್ಲಿ
ಪಂಜಾಬ್ ಕಿಂಗ್ಸ್: ಆರಂಭಿಕ ಹಂತದಲ್ಲಿ ಸತತ ಗೆಲುವಿನೊಂದಗೆ ಮುನ್ನುಗ್ಗಿದ್ದ ಪಂಜಾಬ್ ತಂಡ ಆ ಬಳಿಕ ಸೋಲಿನ ಸುಳಿಗೆ ಸಿಲುಕಿತು. ಇದುವರೆಗೆ 10 ಪಂದ್ಯಗಳನ್ನು ಆಡಿದ್ದು, ಈಗಾಗಲೇ 13 ಅಂಕಗಳನ್ನು ಹೊಂದಿದೆ. ಕೊನೆಯ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವುಗಳು ಅವರನ್ನು 17 ಅಂಕಗಳಿಗೆ ಕೊಂಡೊಯ್ಯುತ್ತವೆ. ಇದು ಪ್ಲೇ ಆಫ್ ಪ್ರವೇಶಕ್ಕೆ ಸಾಕಾಗುತ್ತದೆ.
ಚೆನ್ನೈ ಸೂಪರ್ ಕಿಂಗ್ಸ್: 5 ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಠಿಣ ಹಂತದಲ್ಲಿದೆ. ತುಲನಾತ್ಮಕವಾಗಿ ಸುರಕ್ಷಿತ 16 ಅಂಕಗಳ ಗಡಿಯನ್ನು ತಲುಪಲು, ಅವರು ತಮ್ಮ ಕೊನೆಯ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನು ಗೆಲ್ಲಬೇಕು. ಆದಾಗ್ಯೂ, ಅವರ ರನ್‌ರೇಟ್ ದರ +0.185 ಆಗಿರುವುದರಿಂದ, ಮುಂದಿನ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕು.
IPL 2026: ಆರ್‌ಸಿಬಿ ಮುಖ್ಯ ಕೋಚ್‌ಗೆ ಪಂದ್ಯ ಶುಲ್ಕದ ಶೇ 15ರಷ್ಟು ದಂಡ ವಿಧಿಸಿದ ಐಪಿಎಲ್
ರಾಜಸ್ಥಾನ ರಾಯಲ್ಸ್: 12 ಅಂಕಗಳೊಂದಿಗೆ ಸಿಎಸ್‌ಕೆ ಜೊತೆ ಸಮಬಲ ಸಾಧಿಸಿರುವ ರಾಜಸ್ಥಾನ್, ಕನಿಷ್ಠ ಎರಡು ಗೆಲುವುಗಳನ್ನು ಗುರಿಯಾಗಿಸಿಕೊಳ್ಳಬೇಕು. ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರು ಸೋಲುಗಳನ್ನು ಕಂಡಿರುವ ಅವರ ನೆಟ್‌ರನ್‌ರೇಟ್ (+0.082) ಚೆನ್ನೈಗಿಂತ ಕೆಳಮಟ್ಟದಲ್ಲಿದೆ. ನಾಲ್ಕನೇ ಸ್ಥಾನಕ್ಕಾಗಿ ಅವರು ಸಿಎಸ್‌ಕೆ ವಿರುದ್ಧ ಹೋರಾಡುವ ಸಾಧ್ಯತೆಯಿದೆ.
ಕೋಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ತಂಡಕ್ಕೂ ಪ್ಲೇ ಆಫ್ ಪ್ರವೇಶದ ಅವಕಾಶವಿದೆ, ಆದರೆ ಅದು ಕಠಿಣ ಹಾದಿಯಾಗಿದೆ. 17 ಅಂಕಗಳನ್ನು ತಲುಪಲು ಅವರು ಉಳಿದಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕನ್ನೂ ಗೆಲ್ಲಬೇಕು. ಒಂದು ಪಂದ್ಯ ಸೋತರೂ ಅವರು ಹೊರಬೀಳಲಿದ್ದಾರೆ.