ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೊದಲ ಹಂತದ ಐಪಿಎಲ್ ಪಂದ್ಯಾವಳಿಯಲ್ಲಿ 15 ನಗರಗಳಲ್ಲಿ ಫ್ಯಾನ್ ಪಾರ್ಕ್‌

IPL fan park: ಮೊದಲ ಮೂರು ವಾರಗಳಲ್ಲಿ 11 ರಾಜ್ಯಗಳ 15 ನಗರಗಳಲ್ಲಿ ಅಭಿಮಾನಿಗಳು ಫ್ಯಾನ್ ಪಾರ್ಕ್‌ ಮೂಲಕ ಪಂದ್ಯಗಳನ್ನು ನೋಡಬಹುದಾಗಿದೆ. ಕಿಡ್‌ ಜೋನ್‌ ಪ್ರತ್ಯೇಕ ವಲಯ ಫ್ಯಾನ್ ಪಾರ್ಕ್‌ನಲ್ಲಿ ಇದ್ದು ಆಹಾರ ಮಳಿಗೆಯೂ ಇದೆ. ಮನರಂಜನಾ ಗೇಮ್‌ಗಳಿಗೂ ಅವಕಾಶವಿದೆ.

ಮೈಸೂರು, ತುಮಕೂರಿನ ಬೃಹತ್ ಪರದೆಯಲ್ಲಿ ಐಪಿಎಲ್ ಪಂದ್ಯಗಳು

IPL fan parks -

Abhilash BC
Abhilash BC Mar 23, 2026 4:08 PM

ನವದೆಹಲಿ, ಮಾ.23: ಈ ಬಾರಿಯೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಟೂರ್ನಿಯ ಪಂದ್ಯಗಳನ್ನು ಕ್ರಿಕೆಟ್ ಪ್ರೇಮಿಗಳು ಬೃಹತ್ ಪರದೆಯಲ್ಲಿ ವೀಕ್ಷಿಸಬಹುದಾಗಿದೆ. ದೇಶದ ವಿವಿಧ ನಗರದಲ್ಲಿ ಫ್ಯಾನ್ ಪಾರ್ಕ್‌ ಆಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಮೈಸೂರು ಮತ್ತು ತುಮಕೂರಿನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ದ್ವಿತೀಯ ಹಂತದ ವೇಳಾಪಟ್ಟಿಯಲ್ಲಿ ಇತರ ನಗರಗಳಲ್ಲೂ ಆಯೋಜನೆಗೊಳ್ಳುವ ನಿರೀಕ್ಷೆಯಿದೆ.

ಮಾ.28ರಂದು ಟೂರ್ನಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದ್ದು, ಹಾಲಿ ಚಾಂಪಿಯನ್‌ ಆರ್‌ಸಿಬಿ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ.

ಮೊದಲ ಮೂರು ವಾರಗಳಲ್ಲಿ 11 ರಾಜ್ಯಗಳ 15 ನಗರಗಳಲ್ಲಿ ಅಭಿಮಾನಿಗಳು ಫ್ಯಾನ್ ಪಾರ್ಕ್‌ ಮೂಲಕ ಪಂದ್ಯಗಳನ್ನು ನೋಡಬಹುದಾಗಿದೆ. ಕಿಡ್‌ ಜೋನ್‌ ಪ್ರತ್ಯೇಕ ವಲಯ ಫ್ಯಾನ್ ಪಾರ್ಕ್‌ನಲ್ಲಿ ಇದ್ದು ಆಹಾರ ಮಳಿಗೆಯೂ ಇದೆ. ಮನರಂಜನಾ ಗೇಮ್‌ಗಳಿಗೂ ಅವಕಾಶವಿದೆ. ಉಚಿತ ಪ್ರವೇಶ ಇದ್ದು ಪ್ರವೇಶ ದ್ವಾರದಲ್ಲಿ ನೀಡುವ ಕೂಪನ್‌ನ ಲಕ್ಕಿ ಡ್ರಾ ಮಧ್ಯಂತರ ಅವಧಿಯಲ್ಲಿ ನಡೆಯಲಿದೆ. ಪಂದ್ಯ ಆರಂಭವಾಗುವ ಒಂದು ತಾಸು ಮೊದಲು ಗೇಟ್ ತೆರೆಯಲಾಗುತ್ತದೆ.

ಫ್ಯಾನ್ ಪಾರ್ಕ್‌ನಲ್ಲಿ ಪ್ರಸಾರಗೊಳ್ಳುವ ಪಂದ್ಯಗಳು

ಮಾರ್ಚ್ 28 ಮತ್ತು 29,

ರೋಹ್ಟಕ್, ಹರಿಯಾಣ - ಛೋಟು ರಾಮ್ ಪಾಲಿಟೆಕ್ನಿಕ್ ಮೈದಾನ

ಭೋಪಾಲ್, ಮಧ್ಯಪ್ರದೇಶ - ಸರ್ಕಾರ ಎಂವಿಎಂ ಕಾಲೇಜು ಮೈದಾನ

ನಾಗ್ಪುರ, ಮಹಾರಾಷ್ಟ್ರ - ಮೆಕೋಸಾಬಾಗ್ ಮೆಥೋಡಿಸ್ಟ್ ಹೈಸ್ಕೂಲ್ ಆಟದ ಮೈದಾನ

ತುಮಕೂರು, ಕರ್ನಾಟಕ - ಸರ್ಕಾರಿ ಜೂನಿಯರ್ ಕಾಲೇಜು ಕ್ಷೇತ್ರ

ಕೃಷ್ಣನಗರ, ಪಶ್ಚಿಮ ಬಂಗಾಳ - ಡಿಎಲ್ ರಾಯ್ ಕ್ರೀಡಾಂಗಣ

ಏಪ್ರಿಲ್ 4 ಮತ್ತು 5

ಮಥುರಾ, ಉತ್ತರ ಪ್ರದೇಶ - ಅಮರನಾಥ ವಿದ್ಯಾ ಆಶ್ರಮ

ಜೋಧಪುರ, ರಾಜಸ್ಥಾನ - ಬರ್ಕತುಲ್ಲಾ ಖಾನ್ ಕ್ರೀಡಾಂಗಣ

ನಿಜಾಮಾಬಾದ್, ತೆಲಂಗಾಣ - ಮಹಿಳಾ ಶೈಕ್ಷಣಿಕ ಸೊಸೈಟಿ ಮೈದಾನಗಳು

ಮೈಸೂರು, ಕರ್ನಾಟಕ - ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು

ಭುವನೇಶ್ವರ್, ಒಡಿಶಾ - KITS ವಿಶ್ವವಿದ್ಯಾಲಯ ಕ್ರೀಡಾಂಗಣ

ಏಪ್ರಿಲ್ 11 ಮತ್ತು 12

ಮೀರತ್, ಉತ್ತರ ಪ್ರದೇಶ - ಭೈನಸಾಲಿ ಮೈದಾನ

ನಾಡಿಯಾಡ್, ಗುಜರಾತ್ - ರಾಧೆ ಫಾರ್ಮ್

ರತ್ನಗಿರಿ, ಮಹಾರಾಷ್ಟ್ರ - ಸ್ವರ್ಗೀಯ ಪ್ರಮೋದ್ ಮಹಾಜನ್ ಕ್ರೀಡಾ ಸಂಕುಲ

ಕೊಯಮತ್ತೂರು, ತಮಿಳುನಾಡು - ಹಿಂದೂಸ್ತಾನ್ ಕಾಲೇಜ್ ಆಫ್ ಆರ್ಟ್ಸ್ & ಸೈನ್ಸ್

ರೂರ್ಕೆಲಾ, ಒಡಿಶಾ - ಸೆಕ್ಟರ್ 17 ಗ್ರೌಂಡ್