ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಸನ್‌ರೈಸರ್ಸ್‌ ಹೈದರಾಬಾದ್‌ನ ಕೀ ಆಟಗಾರನನ್ನು ಆರಿಸಿದ ಇರ್ಫಾನ್‌ ಪಠಾಣ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಉತ್ತಮ ಪ್ರದರ್ಸನವನ್ನು ತೋರಲಿದ್ದಾರೆಂದು ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಭವಿಷ್ಯ ನುಡಿದಿದ್ದಾರೆ. 2024ರಲ್ಲಿ ಗಮನ ಸೆಳೆದಿದ್ದ ರೆಡ್ಡಿ, 2025ರಲ್ಲಿ ವಿಫಲರಾಗಿದ್ದರು.

ಎಸ್‌ಆರ್‌ಎಚ್‌ಗೆ ಕೀ ಆಟಗಾರನನ್ನು ಆರಿಸಿದ ಇರ್ಫಾನ್‌ ಪಠಾಣ್‌!

ನಿತೀಶ್‌ ಕುಮಾರ್‌ ರೆಡ್ಡಿಗೆ ಇರ್ಫಾನ್‌ ಪಠಾಣ್‌ ಬೆಂಬಲ. -

Profile
Ramesh Kote Mar 23, 2026 4:11 PM

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್‌(Irfan Pathan), ಯುವ ಬ್ಯಾಟಿಂಗ್ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಕುರಿತು ಭರವಸೆ ವ್ಯಕ್ತಪಡಿಸಿದ್ದಾರೆ. 2026ರ ಐಪಿಎಲ್ (IPL 2026) ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗ್ ಘಟಕಕ್ಕೆ ರೆಡ್ಡಿ ಕೀ ಬ್ಯಾಟರ್‌ ಆಗಿ ಕಾರ್ಯನಿರ್ವಹಿಸಬಹುದು ಎಂದು ಅವರು ಹೇಳಿದ್ದಾರೆ. ತಂಡದ ಬ್ಯಾಟಿಂಗ್ ಸಾಲಿನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಮತ್ತು ಪ್ರಮುಖ ಸಂದರ್ಭಗಳಲ್ಲಿ ಇನಿಂಗ್ಸ್‌ ಅನ್ನು ಕಟ್ಟುವಲ್ಲಿ ರೆಡ್ಡಿಯ ಪಾತ್ರ ಮಹತ್ವವಾಗಿರಲಿದೆ ಎಂದು ಪಠಾಣ್‌ ಅಭಿಪ್ರಾಯಪಟ್ಟಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ 2026ರ ಐಪಿಎಲ್ ಅಭಿಯಾನವನ್ನು ಮಾರ್ಚ್ 28ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆರಂಭಿಸಲು ಸಜ್ಜಾಗುತ್ತಿದೆ. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಸೇರಿದಂತೆ ಶಕ್ತಿಶಾಲಿ ಬ್ಯಾಟಿಂಗ್ ಲೈನ್‌ಅಪ್ ಹೊಂದಿರುವ ಎಸ್‌ಆರ್‌ಎಚ್ ತಂಡ ಈ ಸೀಸನ್‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.

ಇದರ ನಡುವೆ, ಕಳೆದ 2025ರ ಸಾಲಿನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ನಿತೀಶ್ ಕುಮಾರ್ ರೆಡ್ಡಿ ಈ ಬಾರಿ ಕಮ್‌ಬ್ಯಾಕ್‌ ಮಾಡುವ ಗುರಿ ಹೊಂದಿದ್ದಾರೆ. 2024ರಲ್ಲಿ ಅವರು ‘ಎಮರ್ಜಿಂಗ್ ಪ್ಲೇಯರ್’ ಪ್ರಶಸ್ತಿಗೆ ಭಾಜನರಾಗಿದ್ದ ಹಿನ್ನೆಲೆಯಲ್ಲಿ ಈ ಸೀಸನ್‌ನಲ್ಲಿ ಅವರ ಪ್ರದರ್ಶನದ ಮೇಲೆ ವಿಶೇಷ ಗಮನ ಸೆಳೆಯಲಾಗಿದೆ.

IPL 2026: ಕೆಎಲ್‌ ರಾಹುಲ್‌ಗೆ ಬ್ಯಾಟಿಂಗ್‌ ಕ್ರಮಾಂಕ ಆರಿಸಿದ ಡಿಸಿ ಕೋಚ್‌ ಹೇಮಾಂಗ್‌ ಬದಾನಿ!

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಇರ್ಫಾನ್ ಪಠಾನ್, ನಿತೀಶ್ ಕುಮಾರ್ ರೆಡ್ಡಿಯ ಭವಿಷ್ಯದ ಪಾತ್ರದ ಬಗ್ಗೆ ವಿಶ್ಲೇಷಣೆ ನೀಡಿದ್ದಾರೆ. “ಅವರು ತಮ್ಮ ಪಾತ್ರವನ್ನು ಸರಿಯಾಗಿ ನಿರ್ವಹಿಸಿದರೆ, ಈ ತಂಡದ ಆಕ್ರಮಣಕಾರಿ ಬ್ಯಾಟಿಂಗ್ ಘಟಕಕ್ಕೆ ಕಿ ಬ್ಯಾಟರ್‌ ಆಗಿ ಕಾರ್ಯನಿರ್ವಹಿಸಬಹುದು. ಹೈದರಾಬಾದ್ ಈ ಸವಾಲನ್ನು ಹೇಗೆ ಎದುರಿಸುತ್ತದೆ ಎಂಬುದು ಕುತೂಹಲಕಾರಿ,” ಎಂದು ಪಠಾಣ್‌ ತಿಳಿಸಿದ್ದಾರೆ.

ಇದಲ್ಲದೆ, ನಿತೀಶ್‌ ರೆಡ್ಡಿಯ ಕಳೆದ ಸೀಸನ್ ಪ್ರದರ್ಶನದ ಬಗ್ಗೆ ಮಾತನಾಡಿದ ಅವರು, “ಅವರ ಸಂಖ್ಯೆಗಳು ಹಿಂದಿನ ವರ್ಷದ ಹೋಲಿಕೆಯಲ್ಲಿ ಕುಸಿದಿವೆ. 2024ರಲ್ಲಿ ಅವರು 300ಕ್ಕೂ ಹೆಚ್ಚು ರನ್ ಗಳಿಸಿ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದರು. ಆದರೆ ಕಳೆದ ವರ್ಷ ಏನಾಯಿತು? ಅವರ ರನ್‌ಗಳು ಸುಮಾರು 180ಕ್ಕೆ ಇಳಿದವು ಮತ್ತು ಸ್ಟ್ರೈಕ್ ರೇಟ್ ಸುಮಾರು 119ಕ್ಕೆ ಕುಸಿದಿತ್ತು,” ಎಂದು ಹೇಳಿದ್ದಾರೆ.

IPL 2026: ಆರ್‌ಸಿಬಿ ಸಂಭಾವ್ಯ ಆಡುವ ಬಳಗ; ವೆಂಕಟೇಶ್ ಅಯ್ಯರ್, ಜಾಕೋಬ್ ಬೆಥೆಲ್ ಇಂಪ್ಯಾಕ್ಟ್‌ ಪ್ಲೇಯರ್‌

“ಅವರು ತುಂಬಾ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಿದ್ದರು ಎಂಬುದಿಲ್ಲ. ಸುಮಾರು 11 ಇನಿಂಗ್ಸ್‌ಗಳಲ್ಲಿ 7 ಬಾರಿ ನಾಲ್ಕನೇ ಸ್ಥಾನದಲ್ಲಿ ಅವಕಾಶ ಪಡೆದಿದ್ದರು. ಆದರೂ, ಆ ಅವಕಾಶಗಳನ್ನು ಅವರು ಸದುಪಯೋಗಪಡಿಸಿಕೊಳ್ಳಲು ವಿಫಲರಾದರು,” ಎಂದು ಇರ್ಫಾನ್‌ ಪಠಾಣ್‌ ಅಭಿಪ್ರಾಯಪಟ್ಟಿದ್ದಾರೆ.

ನಿತೀಶ್‌ ರೆಡ್ಡಿ ಅವರ ಅಂಕಿಅಂಶಗಳು

2024ರ ಐಪಿಎಲ್ ಟೂರ್ನಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಉತ್ತಮ ಪ್ರದರ್ಶನ ನೀಡಿದ್ದರು. ಅವರು 11 ಇನಿಂಗ್ಸ್‌ಗಳಲ್ಲಿ 303 ರನ್ ಗಳಿಸಿ, ಎರಡು ಅರ್ಧಶತಕಗಳನ್ನು ದಾಖಲಿಸಿದ್ದರು. ಅವರ ಸ್ಟ್ರೈಕ್ ರೇಟ್ 143 ಆಗಿದ್ದು, ಸೀಮ್ ಬೌಲಿಂಗ್ ಮೂಲಕ ಮೂರು ವಿಕೆಟ್‌ಗಳನ್ನು ಸಹ ಪಡೆದಿದ್ದರು. ಆದರೆ, 2025 ಸೀಸನ್‌ನಲ್ಲಿ ಅವರ ಪ್ರದರ್ಶನದಲ್ಲಿ ಕುಸಿತ ಕಂಡುಬಂದಿತು. 13 ಪಂದ್ಯಗಳಲ್ಲಿ ಅವರು ಕೇವಲ 182 ರನ್ ಗಳಿಸಿದ್ದು, 22.75ರ ಸರಾಸರಿ ಮತ್ತು ಸ್ಟ್ರೈಕ್ ರೇಟ್ ಸುಮಾರು 119 ಕುಸಿದಿತ್ತು. ಅವರ ಗರಿಷ್ಠ ಸ್ಕೋರ್ 32 ಮಾತ್ರವಾಗಿದ್ದು, ಬೌಲಿಂಗ್‌ನಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಪಡೆದಿದ್ದರು. ಈ ಹಿನ್ನೆಲೆಯಲ್ಲಿ 2026ರ ಐಪಿಎಲ್ ಟೂರ್ನಿಯಲ್ಲಿ ರೆಡ್ಡಿ ಕಮ್‌ಬ್ಯಾಕ್‌ ಮಾಡಲಿದ್ದಾರೆಂಬ ನಿರೀಕ್ಷೆ ಹೆಚ್ಚಾಗಿದೆ.