ಟಿ20 ಶ್ರೇಯಾಂಕದಲ್ಲಿ 7 ಸ್ಥಾನಗಳ ಜಿಗಿತದೊಂದಿಗೆ ಅಗ್ರ10 ರಲ್ಲಿ ಸ್ಥಾನ ಪಡೆದ ಬುಮ್ರಾ
T20I Rankings: ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಮತ್ತು ವೆಸ್ಟ್ ಇಂಡೀಸ್‌ನ ಮ್ಯಾಥ್ಯೂ ಫೋರ್ಡ್ ಶ್ರೇಯಾಂಕದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಿದ್ದಾರೆ. ಬಾಷ್ 21 ಸ್ಥಾನಗಳ ಭಾರಿ ಜಿಗಿತವನ್ನು ಸಾಧಿಸಿ T20I ಬೌಲರ್‌ಗಳ ಶ್ರೇಯಾಂಕದಲ್ಲಿ ಮೂರನೇ ಸ್ಥಾನವನ್ನು ತಲುಪಿದ್ದಾರೆ.
jasprit bumrah -
ದುಬೈ, ಫೆ. 25: ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ನೂತನ ಐಸಿಸಿ ಶ್ರೇಯಾಂಕ(T20I Rankings)ದಲ್ಲಿ ಭಾರೀ ಏರಿಕೆ ಕಂಡಿದ್ದು, ಟಿ20ಐ ಬೌಲರ್‌ಗಳ ಪಟ್ಟಿಯಲ್ಲಿ ಏಳು ಸ್ಥಾನಗಳ ಪ್ರಗತಿಯೊಂದಿಗೆ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸ್ತುತ 669 ರೇಟಿಂಗ್ ಅಂಕದೊಂದಿಗೆ ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ. ಹಾಲಿ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 15 ರನ್‌ಗೆ 3 ವಿಕೆಟ್ ಕಬಳಿಸಿದ್ದು ಅವರ ಶ್ರೇಯಾಂಕದಲ್ಲಿ ಗಮನಾರ್ಹ ಜಿಗಿತಕ್ಕೆ ಕಾರಣವಾಯಿತು.
ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಮತ್ತು ವೆಸ್ಟ್ ಇಂಡೀಸ್‌ನ ಮ್ಯಾಥ್ಯೂ ಫೋರ್ಡ್ ಶ್ರೇಯಾಂಕದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಿದ್ದಾರೆ. ಬಾಷ್ 21 ಸ್ಥಾನಗಳ ಭಾರಿ ಜಿಗಿತವನ್ನು ಸಾಧಿಸಿ T20I ಬೌಲರ್‌ಗಳ ಶ್ರೇಯಾಂಕದಲ್ಲಿ ಮೂರನೇ ಸ್ಥಾನವನ್ನು ತಲುಪಿದರೆ, ಫೋರ್ಡ್ 23 ಸ್ಥಾನಗಳ ಏರಿಕೆ ಕಂಡು ಏಳನೇ ಸ್ಥಾನವನ್ನು ತಲುಪಿದ್ದಾರೆ.
ಬಾಷ್ ಭಾರತದ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅವರು ಮೂರು ಓವರ್‌ಗಳಲ್ಲಿ 2/12 ವಿಕೆಟ್ ಪಡೆದರು. ಬೌಲಿಂಗ್ ಆಲ್‌ರೌಂಡರ್ ಆಗಿದ್ದ ಅವರು ಈ ಹಿಂದೆ ಯುಎಇ ವಿರುದ್ಧದ ಪಂದ್ಯದಲ್ಲಿ ನಾಲ್ಕು ಓವರ್‌ಗಳಲ್ಲಿ 3/12 ವಿಕೆಟ್ ಪಡೆದಿದ್ದರು. ವೆಸ್ಟ್ ಇಂಡೀಸ್‌ನ ಫೋರ್ಡೆ ಕೂಡ ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇಟಲಿ ವಿರುದ್ಧ 3/19 ವಿಕೆಟ್ ಪಡೆದ ನಂತರ ಜಿಂಬಾಬ್ವೆ ವಿರುದ್ಧ 2/27 ವಿಕೆಟ್ ಪಡೆದಿದ್ದರು.
ಭಾರತ-ಜಿಂಬಾಬ್ವೆ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ
ಏತನ್ಮಧ್ಯೆ, ಜಿಂಬಾಬ್ವೆ ನಾಯಕ ಸಿಕಂದರ್ ರಜಾ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಐಸಿಸಿ ಟಿ20ಐ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ರಜಾ 45 ರನ್ ಗಳಿಸಿದರು, ಸೂಪರ್ ಎಂಟರ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 27 ರನ್ ಗಳಿಸಿದ್ದರು.
ಭಾರತದ ಸ್ಟಾರ್ ಆಟಗಾರ ತಿಲಕ್ ವರ್ಮಾ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಮೂರು ಸ್ಥಾನ ಕುಸಿದು ಏಳನೇ ಸ್ಥಾನಕ್ಕೆ ತಲುಪಿದ್ದಾರೆ. ಏತನ್ಮಧ್ಯೆ, ಇಶಾನ್ ಕಿಶನ್ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧ ಸೊನ್ನೆ ಸುತ್ತಿದ್ದರೂ ಮೂರು ಸ್ಥಾನಗಳ ಜಿಗಿತ ಕಂಡಿದ್ದಾರೆ. ಸತತ ಬ್ಯಾಟಿಂಗ್ ವೈಫಲ್ಯದ ಮಧ್ಯೆಯೂ ಅಭಿಷೇಕ್ ಶರ್ಮ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.