ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಟಾಸ್ಕ್ ಆಡುವ ವಿಚಾರಕ್ಕೆ ಭುಗಿಲೆದ್ದಿದೆ ಮನಸ್ತಾಪ; ಕಣ್ಣೀರಿಟ್ಟ ಆಸಿಯಾ

Bigg Boss Kannada 13: ಬಿಗ್‌ಬಾಸ್ ಮನೆಯಲ್ಲಿ ಮೂರನೇ ಟಾಸ್ಕ್‌ಗಾಗಿ ಸ್ಪರ್ಧಿಗಳ ನಡುವೆ ಜಗಳ ಶುರುವಾಗಿದೆ. ಈ ಹಿಂದೆ ಹೆಚ್ಚು ಕಾಣಿಸಿಕೊಳ್ಳದ ಸೌಂದರ್ಯ ಶೆಟ್ಟಿ , ಇದೀಗ ಟಾಸ್ಕ್ ಆಡಲು ಆಸಿಯಾ ಫಿರ್ದೋಸ್ ಜೊತೆ ಜಟಾಪಟಿಗೆ ಇಳಿದಿದ್ದಾರೆ. ಇವರಿಬ್ಬರ ನಡುವಿನ ಈ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ. ಅದರಲ್ಲೂ ವೈಷ್ಣವಿ ಅವರೂ ಕೂಗಾಡಿದ್ದಾರೆ. ಆಸಿಯಾ ಮನೆಯ ಸದಸ್ಯರ ಮುಂದೆ ಕಣ್ಣೀರಿಟ್ಟಿದ್ದಾರೆ.

ಟಾಸ್ಕ್ ಆಡುವ ವಿಚಾರಕ್ಕೆ ಭುಗಿಲೆದ್ದಿದೆ ಮನಸ್ತಾಪ; ಕಣ್ಣೀರಿಟ್ಟ ಆಸಿಯಾ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 10, 2026 10:58 AM

ಬಿಗ್‌ಬಾಸ್ ಮನೆಯಲ್ಲಿ (Bigg Boss Kannada 13) ಮೂರನೇ ಟಾಸ್ಕ್‌ಗಾಗಿ ಸ್ಪರ್ಧಿಗಳ ನಡುವೆ ಜಗಳ ಶುರುವಾಗಿದೆ. ಈ ಹಿಂದೆ ಹೆಚ್ಚು ಕಾಣಿಸಿಕೊಳ್ಳದ ಸೌಂದರ್ಯ ಶೆಟ್ಟಿ (Soundarya shetty), ಇದೀಗ ಟಾಸ್ಕ್ ಆಡಲು ಆಸಿಯಾ ಫಿರ್ದೋಸ್ ಜೊತೆ ಜಟಾಪಟಿಗೆ ಇಳಿದಿದ್ದಾರೆ. ಇವರಿಬ್ಬರ ನಡುವಿನ ಈ ಸ್ಪರ್ಧೆ ತೀವ್ರ ಕುತೂಹಲ ಮೂಡಿಸಿದೆ. ಅದರಲ್ಲೂ ವೈಷ್ಣವಿ (Vaishnavi) ಅವರೂ ಕೂಗಾಡಿದ್ದಾರೆ. ಆಸಿಯಾ ಮನೆಯ ಸದಸ್ಯರ ಮುಂದೆ ಕಣ್ಣೀರಿಟ್ಟಿದ್ದಾರೆ.

ಆಸಿಯಾ ಸ್ವಿಮ್ಮಿಂಗ್‌ ಫೂಲ್‌ ಕಡೆ ಹೋಗಲ್ಲ ಎಂದು ಟಾಸ್ಕ್‌ ವಿಚಾರವಾಗಿ ಹೇಳಿದರು. ಅತ್ತ ಆಸಿಯಾ ಬಗ್ಗೆ ವೈಷ್ಣವಿ ಮನೆಯ ಸದಸ್ಯರ ಮುಂದೆ ಆಸಿಯಾ ಬಗ್ಗೆ ನನ್ನದೇ ನಡೆಯಬೇಕು ಅನ್ನೋ ದುರಹಂಕಾರ ಈ ಬಿಗ್‌ ಬಾಸ್‌ ಮನೆಯಲ್ಲಿ ನಡೆಯಲ್ಲ ಎಂದಿದ್ದಾರೆ. ಇನ್ನು ಆಸಿಯಾ ಕೂಡ ಮನೆಯ ಸದಸ್ಯರ ಮುಂದೆ ಸೈಡ್‌ನಲ್ಲಿ ನನಗೆ ಎಮೋಷನ್‌ ಜಾಸ್ತಿ ಆದಾಗ ಕಣ್ಣೀರು ಬರುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ ಸಂಗೀತಾ ಮುಂದೆ ಆಸಿಯಾ, ಇದನ್ನು ಸೌಂದರ್ಯ ಕ್ಯಾಮೆರಾ ಮುಂದೆ ವ್ಯಂಗ್ಯ ಮಾಡಿದ್ದು ನನಗೆ ಇಷ್ಟ ಆಗಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಈಗಾಗಲೇ ಬಿಗ್‌ಬಾಸ್ ಮನೆಯಲ್ಲಿ ಆಟ ಶುರುವಾಗಿದೆ. ಎರಡು ಟಾಸ್ಕ್‌ಗಳ ಪೈಕಿ ಒಂದನ್ನು ಮನೆಯ ಸದಸ್ಯರು, ಮತ್ತೊಂದನ್ನು ವಿಮಾನದ ಪ್ರಯಾಣಿಕರು ಗೆದ್ದಿದ್ದಾರೆ. ಈಗ ಮೂರನೇ ಟಾಸ್ಕ್ ನೀಡಲಾಗಿದೆ. ಎರಡೂ ತಂಡಗಳಿಂದ ತಲಾ ಮೂವರು ಸ್ಪರ್ಧಿಗಳಾಡಬೇಕು.

ಇದನ್ನೂ ಓದಿ: Bigg Boss Kannada 13: ʻಬ್ರೋ' ಎಂದಿದ್ದಕ್ಕೆ ‘VIP ಗಗನ್’ ಎನ್ನಲು ಧನುಷ್‌ಗೆ ಆರ್ಡರ್‌ ಮಾಡಿದ ಗಗನ್‌! ರಿವೆಂಜ್‌ ತಗೊಂಡ್ರಾ ನಟ?

ಇದೀಗ ಆಟ ಯಾರು ಆಡಬೇಕು ಎಂಬುದರ ಬಗ್ಗೆ ಸ್ಪರ್ಧಿಗಳ ನಡುವೆ ಜಗಳ ಏರ್ಪಟ್ಟಿದೆ ವಿಮಾನದ ಪ್ರಯಾಣಿಕರ ಪೈಕಿ ಆಸಿಯಾ ಫಿರ್ದೋಸ್ ನಾನು ಈ ಟಾಸ್ಕ್ ಆಡಲೇಬೇಕು. ಈ ಹಿಂದಿನ ಟಾಸ್ಕ್ ನಾನು ಆಟವಾಡಿಲ್ಲ.

ಹಾಗಾಗಿ ನಾನು ಆಟವಾಡಬೇಕಿದೆ ಎಂದು ಹಠ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ಒಂದು ಕ್ಷಣ ಆಸಿಯಾ ಫಿರ್ದೋಸ್ ಭಾವುಕರಾದರು. ಟಾಸ್ಕ್ ಯಾರು ಆಡಬೇಕು ಎಂಬುದರ ಬಗ್ಗೆ ಸೌಂದರ್ಯ ಮತ್ತು ಆಸಿಯಾ ನಡುವೆ ಜಗಳ ಏರ್ಪಟ್ಟಿದೆ. ಆಸಿಯಾ ಬಿರುಗಾಳಿ, ಸೌಂದರ್ಯ ಸುಂಟರಗಾಳಿಯಾಗಿ ನಿಂತಿದ್ದಾರೆ.

ಇದನ್ನೂ ಓದಿ: Bigg Boss Kannada 13: ಶುರುವಾಯ್ತು ಹೈಡ್ರಾಮ; ಆಸಿಯಾ ಬಿರುಗಾಳಿ, ಸೌಂದರ್ಯ ಸುಂಟರಗಾಳಿ!

ಅದು ಅಲ್ಲದೇ ಆಸಿಯಾ ಕೂಡ ಮೂಲೆಗೂಂಪು ಮಾಡಿ ಟಾರ್ಚರ್‌ ಕೊಡುತ್ತಿದ್ದಾರೆ ಎಂದು ಗೋಗೆರೆದರು. ಇದನ್ನು ಸೌಂದರ್ಯ ಇಮಿಟೇಟ್‌ ಮಾಡಿದ್ದಾರೆ. ಸೌಂದರ್ಯ ಕೂಡ ಟಾಸ್ಕ್‌ ಕೊಡಿ ಬಿಗ್‌ ಬಾಸ್‌ ಅಂತ ಅಳುವಂತೆ ಡ್ರಾಮಾ ಮಾಡಿದ್ದಾರೆ.